ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 13ರಷ್ಟು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ಯಾಜೆಟ್ ಬಗ್ಗೆ ಒಲವು

|
Google Oneindia Kannada News

ಬೆಂಗಳೂರು, ನ. 02: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ನಡವಳಿಕೆ ಕುರಿತಂತೆ ನಡೆಸಿದ ಸಮೀಕ್ಷೆಯ ಪ್ರಕಾರ ಕೇವಲ 13% ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ತಮ್ಮ ದೈನಂದಿನ ಜೀವನದಲ್ಲಿ ಡಿಜಿಟಲ್ ಸಾಧನಗಳ ಬಳಕೆಯನ್ನು ಅನ್ವೇಷಿಸುವ ಕುತೂಹಲ ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕ್ವೆಸ್ಟ್ ಅಲೈಯನ್ಸ್ ಎಂಬ ಎನ್‌ಜಿಒ ರಾಜ್ಯದ 1,572 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಈ ಸಮೀಕ್ಷೆ ನಡೆಸಿದೆ. ವಿದ್ಯಾರ್ಥಿನಿಯರಲ್ಲಿ ಕೇವಲ 11% ಮತ್ತು ವಿದ್ಯಾರ್ಥಿಗಳಲ್ಲಿ ಕೇವಲ 16% ಮಾತ್ರ ದೈನಂದಿನ ಡಿಜಿಟಲ್ ಸಾಧನಗಳ ಹಿಂದಿರುವ ತಂತ್ರಜ್ಞಾನವನ್ನು ಅನ್ವೇಷಿಸುವ ಕುತೂಹಲ ಹೊಂದಿದ್ದಾರೆ ಎಂದು ಈ ಸಮೀಕ್ಷೆ ಬಹಿರಂಗ ಪಡಿಸಿದೆ.

2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ; ಬಸವರಾಜ ಬೊಮ್ಮಾಯಿ ಘೋಷಣೆ2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ; ಬಸವರಾಜ ಬೊಮ್ಮಾಯಿ ಘೋಷಣೆ

ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಒಟ್ಟು 27 ಶಾಲೆಗಳಲ್ಲಿ 1,572 ವಿದ್ಯಾರ್ಥಿಗಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮೀಕ್ಷೆಯ ಸಂಶೋಧನೆಗಳನ್ನು ಹಂಚಿಕೊಂಡ ಕ್ವೆಸ್ಟ್ ಅಲಯನ್ಸ್ ಸಂಸ್ಥೆಯ ನಿರ್ದೇಶಕಿ (ಶಾಲೆಗಳು) ನೇಹಾ ಪರ್ತಿ ಅವರು ಈ ಸಂಶೋಧನೆಯು ಗ್ರಾಮೀಣ ಪ್ರದೇಶಗಳ ನಮ್ಮ ವಿದ್ಯಾರ್ಥಿಗಳಲ್ಲಿರುವ ವೈಜ್ಞಾನಿಕ ಮನೋಭಾವದ ಕೊರತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ ಎಂದರು.

9 ಜಿಲ್ಲೆಗಳಲ್ಲಿ ವಿನೂತನ ಕಾರ್ಯಕ್ರಮಕ್ಕೆ ಎನ್‌ಜಿಒ ತಯಾರು

9 ಜಿಲ್ಲೆಗಳಲ್ಲಿ ವಿನೂತನ ಕಾರ್ಯಕ್ರಮಕ್ಕೆ ಎನ್‌ಜಿಒ ತಯಾರು

ಸಮೀಕ್ಷೆಯ ಸಂಶೋಧನೆಯನ್ನು ಆಧರಿಸಿ ರಾಜ್ಯದ 9 ಜಿಲ್ಲೆಗಳ 40,000 ವಿದ್ಯಾರ್ಥಿಗಳಿಗೆ STEM ( ವಿಜ್ಞಾನ, ತಂತ್ರಜ್ಞಾನ, ಎಂಜಿನೀಯರಿಂಗ್, ಗಣಿತ) ಶಿಕ್ಷಣಕ್ಕೆ ಉತ್ತೇಜನ ನೀಡಲು ಒಂದು ವಿನೂತನ ಉಪಕ್ರಮವನ್ನು ಜಾರಿ ಮಾಡಲು ಜಾಗತಿಕ ಒಳನೋಟ ಸಂಸ್ಥೆಯಾದ ಕ್ಯಾಂಟರ್ ಹಾಗೂ ಜಾಗತಿಕ ತಂತ್ರಜ್ಞಾನ ಸಂಸ್ಥೆಯಾದ ಐಬಿಎಂ ಕೈಜೋಡಿಸಿದೆ.

ಕ್ವೆಸ್ಟ್ ಅಲಯನ್ಸ್ ಸಂಸ್ಥೆ ನಿರ್ವಹಣೆ ಮಾಡಲಿರುವ ಈ ಯೋಜನೆಯು ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಯಾದಗಿರಿ, ರಾಯಚೂರು, ಗದಗ, ಹಾಸನ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.

"ಈ ಯೋಜನೆಯು 'ಮಾಡಿ ಕಲಿ' ವಿಧಾನದ ಮೂಲಕ ವಿದ್ಯಾರ್ಥಿಗಳಿಗೆ ಅನುಭವದ ಕಲಿಕೆ ಒದಗಿಸಲಿದೆ. ಇದರ ಪರಿಣಾಮವಾಗಿ 40,000 ಹೈಸ್ಕೂಲ್ ವಿದ್ಯಾರ್ಥಿಗಳು ಇನ್ನು ಮುಂದೆ ಸಂಕೀರ್ಣ ವಿಜ್ಞಾನ ವಿಷಯಗಳನ್ನು ಪಠ್ಯಪುಸ್ತಕಗಳಿಂದ ಉರು ಹೊಡೆಯುವ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಚಿಂತನಾಶಕ್ತಿಯನ್ನು ಓರೆಗೆ ಹಚ್ಚಿ ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಹುಡುಕುವ ಅವಕಾಶ ನೀಡಲಿದೆ " ಎಂದು ನೇಹಾ ತಿಳಿಸಿದ್ದಾರೆ.

ಶಾಲಾ ಪಠ್ಯಕ್ರಮಗಳಿಗೆ ಪೂರಕವಾಗಿ ಮಾಡಿ ಕಲಿ ಯೋಜನೆ

ಶಾಲಾ ಪಠ್ಯಕ್ರಮಗಳಿಗೆ ಪೂರಕವಾಗಿ ಮಾಡಿ ಕಲಿ ಯೋಜನೆ

ಈ ಯೋಜನೆಯು ಪ್ರಸ್ತುತ ಇರುವ ಶಾಲಾ ಪಠ್ಯಕ್ರಮಕ್ಕೆ ಪೂರಕವಾಗಿರಲಿದ್ದು ಹ್ಯಾಕಥಾನ್ ಹಾಗೂ ಸ್ಟೆಮ್ ಕ್ಲಬ್‌ಗಳ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ನಿರರ್ಗಳತೆ, ಕೋಡಿಂಗ್ ಹಾಗೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ. ಶಿಷ್ಯವೇತನ, ಕೆರಿಯರ್ ಕೌನ್ಸೆಲಿಂಗ್ ಮತ್ತು ವಿವಿಧ ಕ್ಷೇತ್ರಗಳ ಯಶಸ್ವಿ ವೃತ್ತಿಪರರ ಜೊತೆ ಸಂವಾದಗಳನ್ನು ಏರ್ಪಡಿಸುವ ಮೂಲಕ ಈ ಯೋಜನೆಯು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೂ ನೆರವು ನೀಡಲಿದೆ.

ಈ ಸಹಭಾಗಿತ್ವದ ಕುರಿತು ಮಾತನಾಡುತ್ತಾ ಕ್ಯಾಂಟರ್ (ದಕ್ಷಿಣ ಏಷ್ಯಾ) ಅಧ್ಯಕ್ಷೆ ಪ್ರೀತಿ ರೆಡ್ಡಿ, "ನಮ್ಮ ಯುವ ಜನಾಂಗವನ್ನು 21ನೇ ಶತಮಾನದ ವೇಗಕ್ಕೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ಟೆಮ್ ಶಿಕ್ಷಣಕ್ಕೆ ತೆರೆದುಕೊಳ್ಳುವ ವಾತಾವರಣ ನಿರ್ಮಿಸುವ ಅಗತ್ಯವಿದೆ. ನಾವು ಭವಿಷ್ಯಕ್ಕೆ ಸಜ್ಜಾಗಬೇಕಾದರೆ ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಸುವುದು ಅಗತ್ಯ. ಕ್ವೆಸ್ಟ್ ಅಲಯನ್ಸ್ ಸಂಸ್ಥೆಯ EcosySTEM ಯೋಜನೆಯನ್ನು ಬೆಂಬಲಿಸುವ ಮೂಲಕ ಈ ಬದಲಾವಣೆಯ ಭಾಗವಾಗಲು ಕ್ಯಾಂಟರ್ ಸಂಸ್ಥೆ ಉತ್ಸುಕವಾಗಿದೆ " ಎಂದರು.

40,000 ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ

40,000 ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ

ಈ ಯೋಜನೆಯ ಸಹಯೋಗದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಐಬಿಎಂ ಇಂಡಿಯಾ/ದಕ್ಷಿಣ ಏಷ್ಯಾದ ಸಿಎಸ್ಆರ್ ಮುಖ್ಯಸ್ಥ ಮನೋಜ್ ಬಾಲಚಂದ್ರನ್, "ಯುವ ವಿದ್ಯಾರ್ಥಿಗಳಲ್ಲಿ ಸ್ಟೆಮ್ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ಈ ಕ್ಷೇತ್ರದ ಬಗ್ಗೆ ಆಸಕ್ತಿ ಕಲ್ಪಿಸಿ, ಅವರ ವೃತ್ತಿ ಬದುಕಿನ ಮೇಲೆ ಬೀರಬಹುದಾದ ಸಕಾರಾತ್ಮಕ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಐಬಿಎಂ ಸ್ಟೆಮ್ ಫಾರ್ ಗರ್ಲ್ಸ್ ಯೋಜನೆಯ ಜೊತೆ ಎಕೋಸಿಸ್ಟೆಮ್ ವೇದಿಕೆಯನ್ನು ಸಂಯೋಜನೆ ಮಾಡುವ ಮೂಲಕ 40,000 ವಿದ್ಯಾರ್ಥಿಗಳನ್ನು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ಸ್ಟೆಮ್ ವೃತ್ತಿಗಳಿಗೆ ಸಜ್ಜು ಮಾಡುತ್ತಿದೆ" ಎಂದರು.

2019-2020 ದತ್ತಾಂಶದ ಪ್ರಕಾರ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಇರುವ ಡ್ರಾಪ್ ಔಟ್ ದರ ಚಿಂತಾಜನಕವಾಗಿದೆ. 95.8% ವಿದ್ಯಾರ್ಥಿನಿಯರು 8 ರಿಂದ 9ನೇ ತರಗತಿಗೆ ಬಂದರೆ, ಕೇವಲ 74.7% ವಿದ್ಯಾರ್ಥಿನಿಯರು 10ನೇ ತರಗತಿಯಿಂದ 11ನೇ ತರಗತಿಗೆ ಹೋಗುತ್ತಾರೆ ಎಂದರು.

ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಬಾಲಕಿಯರಿಗಿಂತ ಬಾಲಕರು ಮುಂದೆ

ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಬಾಲಕಿಯರಿಗಿಂತ ಬಾಲಕರು ಮುಂದೆ

ಸಮೀಕ್ಷೆಯ ಪ್ರಕಾರ 66% ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳ ಬಗ್ಗೆ ತಿಳುವಳಿಕೆಯ ಕೊರತೆಯಿದೆ. ಇನ್ನು 39% ಹೆಣ್ಣುಮಕ್ಕಳು ತಮ್ಮ ಬಳಿ ಸಾಮಾಜಿಕ ಮಾಧ್ಯಮ ಖಾತೆ (ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್ಬುಕ್) ಬಳಸುತ್ತಿರುವುದಾಗಿ ತಿಳಿಸಿದರೆ, 65% ಗಂಡು ಮಕ್ಕಳು ತಮ್ಮ ಬಳಿ ಸಾಮಾಜಿಕ ಮಾಧ್ಯಮ ಖಾತೆ ಇದೆ ಎಂದು ತಿಳಿಸಿದ್ದಾರೆ.

65% ಹೆಣ್ಣುಮಕ್ಕಳು ಕಂಪ್ಯೂಟರ್ ಬಳಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, 58% ಗಂಡುಮಕ್ಕಳು ಕಂಪ್ಯೂಟರ್ ಬಳಕೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 92% ಗಂಡು ಮಕ್ಕಳು ಹಾಗೂ 87% ಹೆಣ್ಣು ಮಕ್ಕಳು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ತಾವು ಓದುತ್ತಿರುವ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂಟರ್ನೆಟ್ ಬಳಸಿರುವುದಾಗಿ ಹೇಳಿದರು.

ಸಮೀಕ್ಷೆ ನಡೆಸಿರುವ ಕ್ವೆಸ್ಟ್ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 21ನೇ ಶತಮಾನದ ಯುವಕ ಯುವತಿಯರು ಸ್ವಯಂ-ಅಧ್ಯಯನದ ಮೂಲಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯಲ್ಲಿರುವ ಕೊರತೆಗಳನ್ನು ನಿವಾರಿಸಲು ಸೂಕ್ತ ಪರಿಹಾರ ವಿನ್ಯಾಸಗೊಳಿಸುತ್ತಿದೆ.

English summary
Only 13% of high school students are interested in exploring the use of digital devices in their daily lives : survey. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X