ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ: ವೈರಲ್ ಆದ ದೇವೇಗೌಡರ ಹಿಂದಿ ಭಾಷಣದ ವಿಡಿಯೋ

|
Google Oneindia Kannada News

Recommended Video

ವೈರಲ್ ಆದ ದೇವೇಗೌಡರ ಹಿಂದಿ ಭಾಷಣದ ವಿಡಿಯೋ | HD Deve Gowda

ಬೆಂಗಳೂರು, ಸೆಪ್ಟೆಂಬರ್ 15 : ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಅಸಮಾಧಾನಗೊಂಡಿವೆ. ಶನಿವಾರ ಹಿಂದಿ ದಿವಸ್ ಅಂಗವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮಾಡಿ ಟ್ವೀಟ್‌ಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಹಿಂದಿ ಹೇರಿಕೆ ವಿರೋಧದ ನಡುವೆಯೇ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿಡಿಯೋವೊಂದು ವೈರಲ್ ಆಗಿದೆ. ಹಿಂದಿ ಮಾತನಾಡಲು ದೇವೇಗೌಡರಿಗೆ ಬಿಜೆಪಿ ಸೂಚನೆ ನೀಡಿತ್ತೇ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿಡಿಯೋ ವೈರಲ್ ಮಾಡಲಾಗುತ್ತಿದೆ.

ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ

ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಸ್ವಾತಂತ್ರ ದಿನಾಚರಣೆದಿನ ಕೆಂಪುಕೋಟೆ ಮೇಲೆ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ವಿಡಿಯೋವನ್ನು ಈಗ ವೈರಲ್ ಮಾಡುತ್ತಿರುವ ಬಿಜೆಪಿ ಬೆಂಬಲಿಗರು ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ಪ್ರಶ್ನೆ ಮಾಡುತ್ತಿದ್ದಾರೆ.

'ಹಿಂದಿ ದಿವಸ್' ಹಿಂದೆ ಎದ್ದ ಅಪಸ್ವರ, ಹೇರಿಕೆ ವಿರುದ್ಧದ ದನಿ'ಹಿಂದಿ ದಿವಸ್' ಹಿಂದೆ ಎದ್ದ ಅಪಸ್ವರ, ಹೇರಿಕೆ ವಿರುದ್ಧದ ದನಿ

 Hindi Imposition HD Deve Gowda Video Viral

ಶನಿವಾರ ಹಿಂದಿ ದಿವಸ್ ಬಗ್ಗೆ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "
ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ 'ಹಿಂದಿ ದಿವಸ್' ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿ ಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ" ಎಂದು ಹೇಳಿದ್ದರು.

ಇದು ಇಂಡಿಯಾ, 'ಹಿಂದಿಯಾ' ಅಲ್ಲ: ಶಾ ಗೆ ಸ್ಟಾಲಿನ್ ಗುದ್ದುಇದು ಇಂಡಿಯಾ, 'ಹಿಂದಿಯಾ' ಅಲ್ಲ: ಶಾ ಗೆ ಸ್ಟಾಲಿನ್ ಗುದ್ದು

ಕರ್ನಾಟಕದ ಬಿಜೆಪಿ ಸಂಸದರು ಸಹ ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡರು, "ದೇಶಕ್ಕೆ ಏಕ ಭಾಷೆಯ (ಹಿಂದಿ) ಅಗತ್ಯವಿದೆ. ಆದರೆ, ಸಾಂವಿಧಾನಿಕವಾಗಿ ಪ್ರತಿ ಭಾಷೆಗೂ ಅದರದೇ ಆದ ಮಹತ್ವ, ಸ್ಥಾನ ಮತ್ತು ಗೌರವವಿದೆ" ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಹಿಂದಿಗೆ ಆದ್ಯತೆ ನೀಡಿದ ಮಾತ್ರಕ್ಕೆ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುತ್ತೇವೆ ಎಂದರ್ಥವಲ್ಲ. ಎಲ್ಲಾ ಭಾಷೆಗಳಿಗೂ ನಮ್ಮ ಬೆಂಬಲವಿದೆ. ಹಿಂದಿ ಕಲಿಯುವುದರಲ್ಲಿ ತಪ್ಪಿಲ್ಲ" ಎಂದು ತಿಳಿಸಿದ್ದಾರೆ.

English summary
Former PM and JD(S) supremo H.D.Deve Gowda Hindi speaking video viral after arguments about Hindi imposition in peek.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X