1951 ರಿಂದ 2019 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
ಬೆಂಗಳೂರು, ಏಪ್ರಿಲ್ 19 : ದೇಶದಲ್ಲಿ ಲೋಕಸಭಾ ಚುನಾವಣಾ ತಯಾರಿ ಜೋರಾಗಿದ್ದು, ಇಂದಿನಿಂದ ಮೊದಲನೇ ಹಂತದ ಮತದಾನ ಆರಂಭವಾಗಿದೆ. ಇಂಡಿಯಾ ಒಕ್ಕೂಟ ನಾವೇ ಈ ಬಾರಿ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವಿಟ್ಟುಕೊಂಡಿದ್ರೆ, ಇತ್ತ ನಮ್ಮದೇ ಅಧಿಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇನ್ನೂ ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿದ್ರೆ, ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ, ಇದೀಗ ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ನಡೆಸಿದ್ರೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ರಣತಂತ್ರ ಹಾಕಿಕೊಂಡಿದೆ.

1951 ರಿಂದ 2019 ರಾಜ್ಯದಲ್ಲಿ ಯಾವ ಪಕ್ಷ, ಎಷ್ಟು ಕ್ಷೇತ್ರಗಳಲ್ಲಿ ಗೆಲುವು
ರಾಜ್ಯದಲ್ಲಿ ಮೊದಲು 11 ಲೋಕಸಭಾ ಕ್ಷೇತ್ರಗಳಿತ್ತು, ಇದೀಗ 28 ಲೋಕಸಭಾ ಕ್ಷೇತ್ರಗಳಿವೆ. 1951ರಲ್ಲಿ ನಡೆದ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 10 ಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ . ಕರ್ನಾಟಕ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ಹಾಗಾದರೇ 1951 ರಿಂದ 2019 ರವರೆಗೆ ರಾಜ್ಯದಲ್ಲಿ ಯಾವ ಪಕ್ಷ, ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
1951 ರಿಂದ 1971ರ ಲೋಕಸಭಾ ಚುನಾವಣೆ
* 1951 ಕಾಂಗ್ರೆಸ್ 10, ಕೆಎಂಪಿಪಿ 1 (ಒಟ್ಟು ಸ್ಥಾನ 11)
* 1956 ಕಾಂಗ್ರೆಸ್ 23, ಇತರೆ 3 (ಒಟ್ಟು 26)
* 1962 ಕಾಂಗ್ರೆಸ್ 25, ಎಲ್‌ಎಸ್‌ಎಸ್ 1 (ಒಟ್ಟು 26)
* 1967 ಕಾಂಗ್ರೆಸ್ 18, ಇತರೆ 9 (ಒಟ್ಟು 27)
* 1971 ಕಾಂಗ್ರೆಸ್ 27, ಇತರೆ 0 (ಒಟ್ಟು 27)
1977 ರಿಂದ 1989ರ ಲೋಕಸಭಾ ಚುನಾವಣೆ
* 1977 ಕಾಂಗ್ರೆಸ್ 26, ಜನತಾ ಪಕ್ಷ 2 (ಒಟ್ಟು 28)
* 1980 ಕಾಂಗ್ರೆಸ್ 27, ಜನತಾ ಪಕ್ಷ 1ಕ್ಷೇತ್ರ (ಒಟ್ಟು 28)
* 1984 ಕಾಂಗ್ರೆಸ್ 24, ಜನತಾ ಪಕ್ಷ 4 ಕ್ಷೇತ್ರ (ಒಟ್ಟು 28)
* 1989 ಕಾಂಗ್ರೆಸ್ 26, ಜನತಾ ಪಕ್ಷ 2 ಕ್ಷೇತ್ರ (ಒಟ್ಟು 28)
1991 ರಿಂದ 1999ರ ಲೋಕಸಭಾ ಚುನಾವಣೆ
* 1991 ಕಾಂಗ್ರೆಸ್ 23, ಬಿಜೆಪಿ 4, ಜನತಾದಳ 1 (ಒಟ್ಟು 28)
* 1996 ಜನತಾದಳ 16, ಬಿಜೆಪಿ 6, ಕಾಂಗ್ರೆಸ್ 5, ಕೆಸಿಪಿ 1 (ಒಟ್ಟು 28)
* 1998 ಬಿಜೆಪಿ 13, ಲೋಕಶಕ್ತಿ 3, ಕಾಂಗ್ರೆಸ್ 9, ಜನತಾದಳ 3 (ಒಟ್ಟು 28)
* 1999 ಕಾಂಗ್ರೆಸ್ 18, ಬಿಜೆಪಿ 7, ಜೆಡಿಯು 3 (ಒಟ್ಟು 28)
2004 ರಿಂದ 2014ರ ಲೋಕಸಭಾ ಚುನಾವಣೆ
* 2004 ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2 (ಒಟ್ಟು 28)
* 2009 ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 2 (ಒಟ್ಟು 28)
* 2014 ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 (ಒಟ್ಟು 28)
* 2019 ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1 (ಒಟ್ಟು 28)












Click it and Unblock the Notifications