Breaking; ಸರ್ಕಾರದ ಆದೇಶ, Forest guard ಪದನಾಮ ಬದಲಾವಣೆ

ಬೆಂಗಳೂರು, ನವೆಂಬರ್ 30; ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ Forest guard ಪದನಾಮ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬುಧವಾರ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ (ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿನ ಅರಣ್ಯ ರಕ್ಷಕ (Forest guard) ವೃಂದದ ಹುದ್ದೆಯನ್ನು ಗಸ್ತು ಅರಣ್ಯ ಪಾಲಕ (Beat Forester) ಎಂದು ಬದಲಾವಣೆ ಮಾಡಲಾಗಿದೆ.

ಆದೇಶದಲ್ಲಿ ಏನಿದೆ?; ಅರಣ್ಯ ರಕ್ಷಕರ ಪದನಾಮವನ್ನು ಗಸ್ತು ಅರಣ್ಯ ಅಧಿಕಾರಿ (Beat Forest Officer) ಎಂದು ಬದಲಾವಣೆ ಮಾಡಲು ಇರುವ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ವರದಿ ನೀಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ)ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿರುತ್ತದೆ.

Forest Guard Post Name Changed As Beat Forester

ಸದರಿ ಸಮಿತಿಯು 3/1/2022, 11/5/2022 ಮತ್ತು 27/5/2022ರಂದು ಸಭೆಗಳನ್ನು ನಡೆಸಿ, ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಿ ಅರಣ್ಯ ರಕ್ಷಕರು ಎಂಬ ಪದನಾಮವನ್ನು ಗಸ್ತು ಅರಣ್ಯ ಪಾಲಕರು ಎಂದು ಬದಲಾವಣೆ ಮಾಡುವ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಲ್ಲಿನ ಅರಣ್ಯ ರಕ್ಷಕ (Forest Guard) ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಅರಣ್ಯ ರಕ್ಷಕ ಪದನಾಮವನ್ನು 'ಗಸ್ತು ಅರಣ್ಯ ಪಾಲಕರು' (Beat Forester) ಎಂದು ಮರು ಪದನಾಮಿಕರಿಸಿ ಆದೇಶಿಸಲಾಗಿದೆ.

ಈ ಸಂಬಂಧ ಅರಣ್ಯ ಇಲಾಖೆಯ ವೃಂದ ನೇಮಕಾತಿ ನಿಯಮಗಳಲ್ಲಿ ಅರಣ್ಯ ರಕ್ಷಕ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು, ಪ್ರತ್ಯೇಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+