ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013 ಅಸೆಂಬ್ಲಿ ಚುನಾವಣೆ: ಕಣದಲ್ಲಿ ಇದ್ದದ್ದು 175 ಮಹಿಳೆಯರು, ಗೆದ್ದದ್ದು?

|
Google Oneindia Kannada News

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಕುಟುಂಬದಲ್ಲಿ ಹೆಣ್ಣೊಂದು ಶಾಲೆಗೆ ಹೋದರೆ ಮನೆಯೇ ಪಾಠಶಾಲೆ ಎನ್ನುವ ಮಾತಿದೆ. ಇನ್ನು ಹೆಣ್ಣು ವಿಧಾನಸೌಧಕ್ಕೆ ಕಾಲಿಟ್ಟರೆ?

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಮತ್ತು ಪಕ್ಷೇತರರಾಗಿ 175 ಮಹಿಳೆಯರು ಕಣದಲ್ಲಿದ್ದರು. ಅದರಲ್ಲಿ ಪ್ರಮುಖ ಮೂರು ಪಕ್ಷವಾದ ಜೆಡಿಎಸ್, ಬಿಜೆಪಿ (ಕೆಜೆಪಿಯೂ ಸೇರಿ) ಮತ್ತು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮಾತ್ರ ಬೆರಳಣಿಕೆಯಷ್ಟು..

2013ರ ಅಸೆಂಬ್ಲಿ ಚುನಾವಣೆ: ಭಾರೀ ಮತಗಳ ಅಂತರದಿಂದ ಗೆದ್ದವರು2013ರ ಅಸೆಂಬ್ಲಿ ಚುನಾವಣೆ: ಭಾರೀ ಮತಗಳ ಅಂತರದಿಂದ ಗೆದ್ದವರು

ಚುನಾವಣಾ ಆಯೋಗ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ 2013ರ ಅಸೆಂಬ್ಲಿ ಚುನಾವಣೆಯಲ್ಲಿ, ಒಟ್ಟು ಮಹಿಳಾ ಮತದಾರರ ಸಂಖ್ಯೆ 2,13,67,912 ಅದರಲ್ಲಿ ಶೇ. 70.47 ಅಂದರೆ 1,50,57,361 ಮಹಿಳೆಯರು ಮತ ಚಲಾಯಿಸಿದ್ದರು.

175 ಮಹಿಳೆಯರು ಸ್ಪರ್ಧಿಸಿದ್ದರೂ, ನೇರ ಸ್ಪರ್ಧೆ ಏರ್ಪಟ್ಟಿದ್ದು ಕೇವಲ ಎಂಟು ಕ್ಷೇತ್ರಗಳಲ್ಲಿ, ಉಳಿದಂತೆ ಬಹುತೇಕ ಎಲ್ಲಾ ಕಡೆ ಠೇವಣಿ ಕಳೆದುಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎನ್ನುವ ಕೂಗು ಇದ್ದರೂ, ಪ್ರಮುಖ ಪಕ್ಷಗಳು ಕೂಗಿಗೆ ಹೆಚ್ಚಿನ ಮಣೆಹಾಕಿರಲಿಲ್ಲ.

ಕೆಲವೊಂದು ಕ್ಷೇತ್ರಗಳು ಮಹಿಳೆಯರಿಗೆ ಮೀಸಲು ಎಂದು ಚುನಾವಣಾ ಆಯೋಗ, ಕಳೆದ ಬಿಬಿಎಂಪಿ ಚುನಾವಣೆಯ ಮುನ್ನ ಪ್ರಕಟಿಸಿತ್ತು. ಹಾಗಾಗಿ, ಹಾಲೀ ಕಾರ್ಪೋರೇಟರ್ ಗಳು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. ಆದರೆ, ಬಹುತೇಕ ಕಾರ್ಪೋರೇಟರ್ ಗಳು ತಮ್ಮ ಪತ್ನಿಯರಿಗೇ ಟಿಕೆಟ್ ಕೊಡಿಸಿ, ಗೆಲ್ಲಿಸಿದ ಉದಾಹರಣೆಗಳೂ ಇವೆ.

2013ರ ಅಸೆಂಬ್ಲಿ ಚುನಾವಣೆ: ಅಲ್ಪ ಅಂತರದಿಂದ ಗೆದ್ದವರು?2013ರ ಅಸೆಂಬ್ಲಿ ಚುನಾವಣೆ: ಅಲ್ಪ ಅಂತರದಿಂದ ಗೆದ್ದವರು?

2013 ಅಸೆಂಬ್ಲಿ ಚುನಾವಣಾ ಕಣದಲ್ಲಿ ಪ್ರಮುಖ ಪಕ್ಷದಿಂದ ಎಂಟು ಮಹಿಳೆಯರು ಸ್ಪರ್ಧಿಸಿದ್ದರು, ಅದರಲ್ಲಿ ಆರು ಮಹಿಳೆಯರು ಗೆದ್ದರೆ, ಇಬ್ಬರು ಸೋತಿದ್ದರು. ಅವರು ಯಾರು, ಮುಂದೆ ಓದಿ..

ಬಿಜೆಪಿ ಅಭ್ಯರ್ಥಿ : ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್

ಬಿಜೆಪಿ ಅಭ್ಯರ್ಥಿ : ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 1
ಅಸೆಂಬ್ಲಿ ಕ್ಷೇತ್ರ: ನಿಪ್ಪಾಣಿ

ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕಾಕಸೋ ಪಾಂಡುರಂಗ ಪಾಟೀಲ್ ಅವರನ್ನು 18,862 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಅಭ್ಯರ್ಥಿ : ಉಮಾಶ್ರೀ

ಕಾಂಗ್ರೆಸ್ ಅಭ್ಯರ್ಥಿ : ಉಮಾಶ್ರೀ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 20
ಅಸೆಂಬ್ಲಿ ಕ್ಷೇತ್ರ: ತೇರದಾಳ

ಕಳೆದ ಚುನಾವಣೆಯಲ್ಲಿ ತೀವ್ರ ಕುತೂಹಲಕ್ಕೆ ಮತ್ತು ಪೈಪೋಟಿಯ ಕಣವಾಗಿದ್ದ ತೇರದಾಳ ಕ್ಷೇತ್ರದಿಂದ, ಕಾಂಗ್ರೆಸ್ಸಿನ ಉಮಾಶ್ರೀ ಗೆಲುವಿನ ನಗೆ ಬೀರಿದ್ದರು. ಇವರು, ಬಿಜೆಪಿಯ ಸಿದ್ದು ಸವದಿ ಅವರನ್ನು ಕೇವಲ 2,599 ಮತಗಳ ಅಂತರದಿಂದ ಸೋಲಿಸಿ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.

ಕೆಜೆಪಿ ಅಭ್ಯರ್ಥಿ : ವಿಮಲಾಭಾಯಿ ದೇಶಮಖ್

ಕೆಜೆಪಿ ಅಭ್ಯರ್ಥಿ : ವಿಮಲಾಭಾಯಿ ದೇಶಮಖ್

ಕೆಜೆಪಿ ಅಭ್ಯರ್ಥಿ : ವಿಮಲಾಭಾಯಿ ದೇಶಮಖ್
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 26
ಅಸೆಂಬ್ಲಿ ಕ್ಷೇತ್ರ: ಮುದ್ದೇಬಿಹಾಳ

ಬಿಜೆಪಿಯಿಂದ ದೂರವಾಗಿ, ಕೆಜೆಪಿ ಕಟ್ಟಿದ್ದ ಯಡಿಯೂರಪ್ಪನವರ ಪಕ್ಷದ ತೆಂಗಿನಕಾಯಿ ಚಿಹ್ನೆಯಿಂದ ಸ್ಪರ್ಧಿಸಿದ್ದ ವಿಮಲಾಭಾಯಿ ಜಗದೇವರಾವ್ ದೇಶಮುಖ್, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಪ್ಪಾಳ್ ಸಿಎಸ್ ನಾಡಗೌಡ ಅವರೆದುರು 12,202 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. (ಚಿತ್ರ:ಹಿಂದೂ)

ಕಾಂಗ್ರೆಸ್ ಅಭ್ಯರ್ಥಿ : ಶಾರದಾ ಮೋಹನ್ ಶೆಟ್ಟಿ

ಕಾಂಗ್ರೆಸ್ ಅಭ್ಯರ್ಥಿ : ಶಾರದಾ ಮೋಹನ್ ಶೆಟ್ಟಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 78
ಅಸೆಂಬ್ಲಿ ಕ್ಷೇತ್ರ: ಕುಮಟಾ

ಜಿದ್ದಾಜಿದ್ದಿನ ಪೈಪೋಟಿಯ ನಂತರ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಶಾರದಾ ಮೋಹನ್ ಶೆಟ್ಟಿ ಜಯ ಸಾಧಿಸಿದ್ದರು. ಇವರು ಜೆಡಿಎಸ್ ಅಭ್ಯರ್ಥಿ ದಿನಕರ್ ಕೇಶವ್ ಶೆಟ್ಟಿಯವರನ್ನು ಕೇವಲ 420 ಮತಗಳ ಅಂತರದಿಂದ ಸೋಲಿಸಿದ್ದರು.

ಜೆಡಿಎಸ್ ಅಭ್ಯರ್ಥಿ : ಶಾರದಾ ಪೂರ್ಯ ನಾಯಕ್

ಜೆಡಿಎಸ್ ಅಭ್ಯರ್ಥಿ : ಶಾರದಾ ಪೂರ್ಯ ನಾಯಕ್

ಅಸೆಂಬ್ಲಿ ಕ್ಷೇತ್ರ ಸಂಖ್ಯೆ:111
ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ ಗ್ರಾಮಾಂತರ

ಮೀಸಲು ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಶಾರದಾ ಪೂರ್ಯ ನಾಯಕ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಜಿ ಬಸವಣ್ಣಪ್ಪ ಅವರನ್ನು 10,109 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

ಬಿಜೆಪಿ ಅಭ್ಯರ್ಥಿ : ರಾಮಕ್ಕ

ಬಿಜೆಪಿ ಅಭ್ಯರ್ಥಿ : ರಾಮಕ್ಕ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ:146
ಅಸೆಂಬ್ಲಿ ಕ್ಷೇತ್ರ: ಕೆಜಿಎಫ್ (ಕೋಲಾರ ಗೋಲ್ಡ್ ಫೀಲ್ಡ್)

ಈ ಹಿಂದೆ ಶಾಸಕರಾಗಿದ್ದ ವೈ ಸಂಪಂಗಿಗೆ 2013ರ ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿಲ್ಲ, ಆದರೆ ಅವರು ತಮ್ಮ ತಾಯಿ ವೈ ರಾಮಕ್ಕ ಅವರನ್ನು ಬಿಜೆಪಿ ಟಿಕೆಟಿನಿಂದ ಕಣಕ್ಕಿಳಿಸಿ, ಗೆಲ್ಲಿಸುವಲ್ಲಿ ಸಂಪಂಗಿ ಯಶಸ್ವಿಯಾಗಿದ್ದರು. ರಾಮಕ್ಕ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಎಂ ಭಕ್ತವತ್ಸಲಂ ಅವರ ವಿರುದ್ದ 26,022 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ : ಶಕುಂತಳಾ ಶೆಟ್ಟಿ

ಕಾಂಗ್ರೆಸ್ ಅಭ್ಯರ್ಥಿ : ಶಕುಂತಳಾ ಶೆಟ್ಟಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 206
ಅಸೆಂಬ್ಲಿ ಕ್ಷೇತ್ರ: ಪುತ್ತೂರು

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಬಿಜೆಪಿಯ ಪ್ರತಿಸ್ಪರ್ಧಿ ಸಂಜೀವ ಮಠಂದೂರು ಅವರನ್ನು ಸೋಲಿಸಲು ಹರಸಾಹಸ ಪಡಬೇಕಾಯಿತು ತೀವ್ರ ಹಣಾಹಣಿಯಲ್ಲಿ ಶಕುಂತಲಾ ಅವರು ಸಂಜೀವ ಅವರನ್ನು 4,289 ಮತಗಳ ಅಂತರದಿಂದ ಸೋಲಿಸಿದ್ದರು.

ಜೆಡಿಎಸ್ ಅಭ್ಯರ್ಥಿ : ಪರಿಮಳ ನಾಗಪ್ಪ

ಜೆಡಿಎಸ್ ಅಭ್ಯರ್ಥಿ : ಪರಿಮಳ ನಾಗಪ್ಪ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 221
ಅಸೆಂಬ್ಲಿ ಕ್ಷೇತ್ರ: ಹನೂರು

ಜೆಡಿಎಸ್ ಅಭ್ಯರ್ಥಿಯಾಗಿ ಹನೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪರಿಮಳ ನಾಗಪ್ಪ, ಕಾಂಗ್ರೆಸ್ಸಿನ ಆರ್ ನರೇಂದ್ರ ಅವರೆದುರು 11,549 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. (ಚಿತ್ರ:ಹಿಂದೂ)

English summary
2013 Assembly elections: Total 175 women candidates in the fray, out of this 6 women won. Three from Congress, two from BJP and One from JDS women candidate won the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X