• search
For Quick Alerts
ALLOW NOTIFICATIONS  
For Daily Alerts

  2013ರ ಅಸೆಂಬ್ಲಿ ಚುನಾವಣೆ: ಅಲ್ಪ ಅಂತರದಿಂದ ಗೆದ್ದವರು, ಸೋತು ಗೆದ್ದವರು

  |
    ಕರ್ನಾಟಕ ವಿಧಾನಸಭಾ ಚುನಾವಣೆ 2013 : ಗೆದ್ದವರ ಪಟ್ಟಿ ಇಲ್ಲಿದೆ | Oneindia Kannada

    2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಕರೆಸಿದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಕರೆಸಿ ಹಲವು ಸುತ್ತಿನ ಪ್ರಚಾರ ಆರಂಭಿಸಿದೆ.

    ಇನ್ನು ಜೆಡಿಎಸ್ ಪರವಾಗಿ ದೇವೇಗೌಡ್ರು, ಕುಮಾರಸ್ವಾಮಿ ಮತಬೇಟೆ ಆರಂಭಿಸಿದ್ದಾರೆ ಜೊತೆಗೆ ಮಾಯಾವತಿಯವರನ್ನೂ ಕರೆಸಿ ಒಂದು ರೌಂಡಿನ ಪ್ರಚಾರ ಮಾಡಿಸಿದ್ದಾರೆ. ಜೆಡಿಎಸ್ ಪರ ಓವೈಸಿ ಬರುತ್ತಾರೋ, ಇನ್ನೂ ಅಂತಿಮವಾಗಿಲ್ಲ.

    ಕಳೆದ ಅಸೆಂಬ್ಲಿ ಚುನಾವಣೆ ಹಲವು ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ ಬಿಜೆಪಿಯಿಂದ ಹೊರಬಂದು ತೆಂಗಿನಕಾಯಿ ಪಕ್ಷ (ಕೆಜೆಪಿ) ಕಟ್ಟಿದ್ದ ಯಡಿಯೂರಪ್ಪನವರ 'ಚಾರ್ಮ್' ಯಾವರೀತಿ ರಾಜ್ಯದಲ್ಲಿರುತ್ತದೆ ಎನ್ನುವುದೂ ಒಂದು ಕಾರಣವಾಗಿತ್ತು.

    2013ರ ಚುನಾವಣೆಯಲ್ಲಿ ಕೆಜೆಪಿ ಆರು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಶಕ್ತವಾಯಿತು, ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮತವನ್ನು ಡಿವೈಡ್ ಮಾಡುವಲ್ಲಿ ಅಲ್ಲಲ್ಲಿ ಯಶಸ್ವಿಯಾಗಿತ್ತು. ಕೆಜೆಪಿ ಜೊತೆಗೆ ಶ್ರೀರಾಮುಲು ಕೂಡಾ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಾರ್ಟಿ (ಬಿಎಸ್ಆರ್) ಸ್ಥಾಪಿಸಿ, ಅದೇ ಪಕ್ಧದ ಚಿಹ್ನೆಯಿಂದ ನಾಲ್ಕು ಸ್ಥಾನವನ್ನು ಗೆದ್ದಿದ್ದರು.

    ವಿಧಾನ ಸಭಾ ಚುನಾವಣೆ : ರಾಜ್ಯದಲ್ಲಿ 72 ಲಕ್ಷ ಹೊಸ ಮತದಾರರು

    ಹೋದ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ, ಕಾಂಗ್ರೆಸ್ 122, ಬಿಜೆಪಿ 40, ಬಿಎಸ್ಆರ್ 4, ಕೆಜೆಪಿ 6, ಜೆಡಿಎಸ್ 40 ಮತ್ತು ಇತರರು 12ಸ್ಥಾನಗಳಲ್ಲಿ ಗೆದ್ದಿದ್ದರು. ಹನ್ನೊಂದು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ವಿಜೇತ ಅಭ್ಯರ್ಥಿಗಳ ಮತಗಳ ಅಂತರ 900ಕ್ಕೂ ಕಮ್ಮಿಯಿತ್ತು.

    ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡಿ, ಕಾರ್ಯಕರ್ತರನ್ನು ಒಗ್ಗೂಡಿಸಿ, ಕೋಟ್ಯಾಂತರ ರೂಪಾಯಿ ವ್ಯಯಿಸಿ, ಸಾವಿರ ಓಟಿಗಿಂತಲೂ ಕಮ್ಮಿ ಅಂತರದಿಂದ ಸೋತರೆ ಅಂಥವರ ಮನಸ್ಥಿತಿ ಹೇಗಿರಬೇಡ. ಆ ಹನ್ನೊಂದು ಅಭ್ಯರ್ಥಿಗಳು ಯಾರು? ಸೋಲಲ್ಲೂ ಸಾರ್ಥಕತೆ ಮರೆದವರು ಯಾವ ಪಕ್ಷದವರು? ಮುಂದೆ ಓದಿ..

    ಅಸೆಂಬ್ಲಿ ಕ್ಷೇತ್ರ: ಹಗರಿಬೊಮ್ಮನಹಳ್ಳಿ

    ಅಸೆಂಬ್ಲಿ ಕ್ಷೇತ್ರ: ಹಗರಿಬೊಮ್ಮನಹಳ್ಳಿ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 89
    ಅಸೆಂಬ್ಲಿ ಕ್ಷೇತ್ರ: ಹಗರಿಬೊಮ್ಮನಹಳ್ಳಿ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಭೀಮಾ ನಾಯಕ, ಜೆಡಿಎಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಕೆ ನೇಮರಾಜ ನಾಯಕ, ಬಿಜೆಪಿ
    ವಿಜೇತ ಅಭ್ಯರ್ಥಿ ಪಡೆದ ಮತ: 51,972
    ಸೋತ ಅಭ್ಯರ್ಥಿ ಪಡೆದ ಮತ: 51,847
    ಗೆಲುವಿನ ಅಂತರ: 125

    ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ

    ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 113
    ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಕೆ ಬಿ ಪ್ರಸನ್ನ ಕುಮಾರ್, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಎಸ್ ರುದ್ರೇಗೌಡ, ಕೆಜೆಪಿ
    ವಿಜೇತ ಅಭ್ಯರ್ಥಿ ಪಡೆದ ಮತ: 39,355
    ಸೋತ ಅಭ್ಯರ್ಥಿ ಪಡೆದ ಮತ: 39,077
    ಗೆಲುವಿನ ಅಂತರ: 278

    ಅಸೆಂಬ್ಲಿ ಕ್ಷೇತ್ರ: ಶಿರಹಟ್ಟಿ

    ಅಸೆಂಬ್ಲಿ ಕ್ಷೇತ್ರ: ಶಿರಹಟ್ಟಿ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 65
    ಅಸೆಂಬ್ಲಿ ಕ್ಷೇತ್ರ: ಶಿರಹಟ್ಟಿ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ದೊಡ್ಡಮನಿ ರಾಮಕೃಷ್ಣ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಆರ್ ಎಸ್ ಲಮಾಣಿ, ಬಿಜೆಪಿ
    ವಿಜೇತ ಅಭ್ಯರ್ಥಿ ಪಡೆದ ಮತ: 44,738
    ಸೋತ ಅಭ್ಯರ್ಥಿ ಪಡೆದ ಮತ: 44,423
    ಗೆಲುವಿನ ಅಂತರ: 315

    ಅಸೆಂಬ್ಲಿ ಕ್ಷೇತ್ರ: ಟಿ ನರಸೀಪುರ

    ಅಸೆಂಬ್ಲಿ ಕ್ಷೇತ್ರ: ಟಿ ನರಸೀಪುರ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 220
    ಅಸೆಂಬ್ಲಿ ಕ್ಷೇತ್ರ: ಟಿ ನರಸೀಪುರ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಎಚ್ ಸಿ ಮಹಾದೇವಪ್ಪ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಎಂ ಸಿ ಸುದರ್ಶನ್, ಜೆಡಿಎಸ್
    ವಿಜೇತ ಅಭ್ಯರ್ಥಿ ಪಡೆದ ಮತ: 53,219
    ಸೋತ ಅಭ್ಯರ್ಥಿ ಪಡೆದ ಮತ: 52,896
    ಗೆಲುವಿನ ಅಂತರ: 323

    ಅಸೆಂಬ್ಲಿ ಕ್ಷೇತ್ರ: ಕುಮಟಾ

    ಅಸೆಂಬ್ಲಿ ಕ್ಷೇತ್ರ: ಕುಮಟಾ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 78
    ಅಸೆಂಬ್ಲಿ ಕ್ಷೇತ್ರ: ಕುಮಟಾ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಶಾರದ ಮೋಹನ್ ಶೆಟ್ಟಿ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ದಿನಕರ್ ಕೇಶವ್ ಶೆಟ್ಟಿ, ಜೆಡಿಎಸ್
    ವಿಜೇತ ಅಭ್ಯರ್ಥಿ ಪಡೆದ ಮತ: 36,756
    ಸೋತ ಅಭ್ಯರ್ಥಿ ಪಡೆದ ಮತ: 36,336
    ಗೆಲುವಿನ ಅಂತರ: 420

    ಅಸೆಂಬ್ಲಿ ಕ್ಷೇತ್ರ: ಮಳವಳ್ಳಿ

    ಅಸೆಂಬ್ಲಿ ಕ್ಷೇತ್ರ: ಮಳವಳ್ಳಿ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 186
    ಅಸೆಂಬ್ಲಿ ಕ್ಷೇತ್ರ: ಮಳವಳ್ಳಿ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪಿ ಎಂ ನರೇಂದ್ರಸ್ವಾಮಿ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಕೆ ಅನ್ನದಾನಿ, ಜೆಡಿಎಸ್
    ವಿಜೇತ ಅಭ್ಯರ್ಥಿ ಪಡೆದ ಮತ: 61,869
    ಸೋತ ಅಭ್ಯರ್ಥಿ ಪಡೆದ ಮತ: 61,331
    ಗೆಲುವಿನ ಅಂತರ: 538

    ಅಸೆಂಬ್ಲಿ ಕ್ಷೇತ್ರ: ಮೂಡಿಗೆರೆ

    ಅಸೆಂಬ್ಲಿ ಕ್ಷೇತ್ರ: ಮೂಡಿಗೆರೆ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 124
    ಅಸೆಂಬ್ಲಿ ಕ್ಷೇತ್ರ: ಮೂಡಿಗೆರೆ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಬಿ ಬಿ ನಿಂಗಯ್ಯ, ಜೆಡಿಎಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಬಿ ಎನ್ ಚಂದ್ರಪ್ಪ, ಕಾಂಗ್ರೆಸ್
    ವಿಜೇತ ಅಭ್ಯರ್ಥಿ ಪಡೆದ ಮತ: 32,417
    ಸೋತ ಅಭ್ಯರ್ಥಿ ಪಡೆದ ಮತ: 31,782
    ಗೆಲುವಿನ ಅಂತರ: 635

    ಅಸೆಂಬ್ಲಿ ಕ್ಷೇತ್ರ: ನಾಗಠಾಣ

    ಅಸೆಂಬ್ಲಿ ಕ್ಷೇತ್ರ: ನಾಗಠಾಣ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 31
    ಅಸೆಂಬ್ಲಿ ಕ್ಷೇತ್ರ: ನಾಗಠಾಣ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ರಾಜು ಅಲಗೂರು, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ದೇವಾನಂದ್ ಪಿ ಚವಾಣ್, ಜೆಡಿಎಸ್
    ವಿಜೇತ ಅಭ್ಯರ್ಥಿ ಪಡೆದ ಮತ: 45,570
    ಸೋತ ಅಭ್ಯರ್ಥಿ ಪಡೆದ ಮತ: 44,903
    ಗೆಲುವಿನ ಅಂತರ: 667

    ಅಸೆಂಬ್ಲಿ ಕ್ಷೇತ್ರ: ಮಾಯಕೊಂಡ

    ಅಸೆಂಬ್ಲಿ ಕ್ಷೇತ್ರ: ಮಾಯಕೊಂಡ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 108
    ಅಸೆಂಬ್ಲಿ ಕ್ಷೇತ್ರ: ಮಾಯಕೊಂಡ
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಕೆ ಶಿವಮೂರ್ತಿ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಎನ್ ನಿಂಗಣ್ಣ, ಕೆಜೆಪಿ
    ವಿಜೇತ ಅಭ್ಯರ್ಥಿ ಪಡೆದ ಮತ: 32,435
    ಸೋತ ಅಭ್ಯರ್ಥಿ ಪಡೆದ ಮತ: 31,741
    ಗೆಲುವಿನ ಅಂತರ: 694

    ಅಸೆಂಬ್ಲಿ ಕ್ಷೇತ್ರ: ರಾಯಭಾಗ್

    ಅಸೆಂಬ್ಲಿ ಕ್ಷೇತ್ರ: ರಾಯಭಾಗ್

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 6
    ಅಸೆಂಬ್ಲಿ ಕ್ಷೇತ್ರ: ರಾಯಭಾಗ್
    ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಬಿಜೆಪಿ
    ಸೋತ ಅಭ್ಯರ್ಥಿ ಮತ್ತು ಪಕ್ಷ: ಪ್ರದೀಪ್ ಮಾಳಗಿ, ಪಕ್ಷೇತರ
    ವಿಜೇತ ಅಭ್ಯರ್ಥಿ ಪಡೆದ ಮತ: 37,535
    ಸೋತ ಅಭ್ಯರ್ಥಿ ಪಡೆದ ಮತ: 36,706
    ಗೆಲುವಿನ ಅಂತರ: 829

    ಅಸೆಂಬ್ಲಿ ಕ್ಷೇತ್ರ: ತರೀಕೆರೆ

    ಅಸೆಂಬ್ಲಿ ಕ್ಷೇತ್ರ: ತರೀಕೆರೆ

    ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 126
    ಅಸೆಂಬ್ಲಿ ಕ್ಷೇತ್ರ: ತರೀಕೆರೆ
    ಅಭ್ಯರ್ಥಿ ಮತ್ತು ಪಕ್ಷ: ಜಿ ಎಚ್ ಶ್ರೀನಿವಾಸ, ಕಾಂಗ್ರೆಸ್
    ಸೋತ ಅಭ್ಯರ್ಥಿ ಮತ್ತು ಪಕ್ಷ: ಡಿ ಎಸ್ ಸುರೇಶ್, ಕೆಜೆಪಿ
    ವಿಜೇತ ಅಭ್ಯರ್ಥಿ ಪಡೆದ ಮತ: 35,817
    ಸೋತ ಅಭ್ಯರ್ಥಿ ಪಡೆದ ಮತ: 34,918
    ಗೆಲುವಿನ ಅಂತರ: 899

    ರಾಜಕಾರಣಿಗಳು ಕೊಡುವ 'ಭಿಕ್ಷೆ' ಇಸಿದುಕೊಳ್ಳಬೇಕೆ?

    ಗೋವಿಂದ! ಈ ಪಾಟಿ ಖರ್ಚು ಮಾಡಿದರೆ 'ನೀರು' ಕುಡಿಸೋದು ಗ್ಯಾರಂಟಿ!

    ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಲು, ಬ್ರಹ್ಮಾಸ್ತ್ರ ಬಳಸಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka assembly elections 2013: There are eleven candidates who won the the election in less than 900 votes. JDS candiate from Hagari bommanahalli who won the election in just 125 votes.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more