ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ | Donald Trump
ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಕೊಡುತ್ತಿರುವ ಏಟಿಗೆ ಈಗ ಇರಾನ್ ನಲುಗಿ ಹೋಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇರಾನ್ ಮಾತ್ರ ತಾನು ಇನ್ನೂ ಸೈಲೆಂಟ್ ಆಗಿಲ್ಲ, ಅಮೆರಿಕ ಮೇಲೆ ಸೇಡಿಗೆ ಸೇಡು ಗ್ಯಾರಂಟಿ ಅನ್ನುತ್ತಿದೆ. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ ಘೋರವಾಗಿ ಯುದ್ಧ ನಡೆಯುವ ಸನ್ನಿವೇಶ ನಿರ್ಮಾಣ ಆಗುತ್ತಿದೆ. ಈಗಾಗಲೇ ಶುರುವಾಗಿರುವ ಯುದ್ಧ ಒಟ್ಟಾರೆ 14 ದಿನ ಮುಗಿಸಿ, ಇನ್ನೇನು 3ನೇ ವಾರಕ್ಕೆ ಎಂಟ್ರಿ ಆಗುತ್ತಿದೆ. ಇಂತಹ ಸಮಯದಲ್ಲೇ ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ದೇಶದ ನೂತನ ಸರ್ವಾಧಿಕಾರಿ ಹಾಗೂ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿಯ ಮಗ ಮೊಜ್ತಬಾ ಖಮೇನಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಇರಾನ್ ನೂತನ ಸುಪ್ರೀಂ ಲೀಡರ್ ಆಗಿ ನೇಮಕವಾದ ಮೊಜ್ತಬಾ ಖಮೇನಿ ಇನ್ನೂ ಜೀವಂತವಾಗಿರುವ ಸಾಧ್ಯತೆ ಇದೆ ಎಂದು ಟ್ರಂಪ್ ಅವರು ಹೇಳಿದ್ದು, ಆದರೆ ಮೊಜ್ತಬಾ ಖಮೇನಿ ಆರೋಗ್ಯ ಸಂಪೂರ್ಣ ಹಾಳಾಗಿ ಹೋಗಿರುವ ಬಗ್ಗೆ ಕೂಡ ಮುನ್ಸೂಚನೆ ನೀಡಿ ಕುತೂಹಲ ಕೆರಳಿಸಿದ್ದಾರೆ. ಯುದ್ಧ ಆರಂಭವಾದ ನಂತರ ಸಾರ್ವಜನಿಕವಾಗಿ ಕಾಣಿಸದಿರುವ ಹಿನ್ನೆಲೆ, ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆಯೇ ಊಹಾಪೋಹ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಇದೀಗ ಟ್ರಂಪ್ ಅವರ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ.

ಇಸ್ರೇಲ್ ಸೇನೆಯಿಂದ ಮತ್ತೆ ದಾಳಿ
ಇರಾನ್ ತನ್ನ ಮೇಲೆ ದಾಳಿ ಮಾಡುತ್ತಿದೆ ಎಂಬ ಕಾರಣ ನೀಡಿ ಇಸ್ರೇಲ್ ಮತ್ತೆ ಮತ್ತೆ ಇರಾನ್ ದೇಶದ ರಾಜಧಾನಿ ಮೇಲೆ ಭೀಕರ ದಾಳಿ ಮಾಡುತ್ತಿದೆ. ಆದರೆ ಇದರಲ್ಲಿ ಇಸ್ರೇಲ್ ನಿಯಮ ಪಾಲನೆ ಮಾಡ್ತಾ ಇಲ್ಲ ಎಂಬ ಆರೋಪವನ್ನ ಇರಾನ್ ಮಾಡುತ್ತಿದ್ದರೆ, ಇಸ್ರೇಲ್ ಮಾತ್ರ ತನ್ನ ಶತ್ರುನಾಶ ಮಾಡೋಕೆ ಯಾವುದೇ ಮುಲಾಜು ನೋಡದೆ ದಾಳಿ ಮಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ನೂರಾರು ಸಮಸ್ಯೆ ಎದುರಾಗಿದ್ದು, ಜಾಗತಿಕ ಆರ್ಥಿಕತೆ ದಿವಾಳಿ ಆಗುವ ಹಂತಕ್ಕೆ ಬಂದಿದೆ. ಜಗತ್ತಿನ ಹಲವಾರು ದೇಶಗಳ ಷೇರು ಮಾರುಕಟ್ಟೆಗಳು ಈಗಾಗಲೇ ಬಂಡವಾಳ ಕಳೆದುಕೊಂಡು ನರಳುತ್ತಿವೆ. ಹಾಗೇ ಈಗ ತೈಲ ಬೆಲೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಆತಂಕ ಹೆಚ್ಚು ಮಾಡಿದೆ.












Click it and Unblock the Notifications