ಷೇರು ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ, ದೊಡ್ಡ ಮಟ್ಟದಲ್ಲಿ ಕುಸಿತ ಕಂಡ ಭಾರತೀಯ ಷೇರುಪೇಟೆ | Stock Market
ಭಾರತದ ಷೇರು ಮಾರುಕಟ್ಟೆಗೆ ಮಧ್ಯಪ್ರಾಚ್ಯ ಸಂಘರ್ಷ ದೊಡ್ಡ ಆಘಾತ ನೀಡುತ್ತಿದೆ, ಕಳೆದ ಕೆಲವು ದಿನಗಳಿಂದ ಭಾರತದ ಷೇರುಪೇಟೆ ಸೂಚ್ಯಂಕಗಳು ಹಾಗೂ ಷೇರುಗಳು ಭಾರಿ ದೊಡ್ಡ ಮಟ್ಟದ ಕುಸಿತ ದಾಖಲಿಸಿ ಹೂಡಿಕೆದಾರರ ಎದೆಯಲ್ಲಿ ಭಯ ಮೂಡಿಸಿದೆ. ಅಮೆರಿಕ ಹಾಗೂ ಇಸ್ರೇಲ್ ಒಂದಾಗಿ ಈ ಯುದ್ಧ ಆರಂಭಿಸಿದ್ದು, ಇರಾನ್ ಸರ್ವನಾಶ ಮಾಡೇ ಮಾಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಅವರು ಹಾಗೂ ಇಸ್ರೇಲ್ ಪ್ರಧಾನಿ ಮುಂದಾಗಿದ್ದಾರೆ. ಇಂತಹ ಸಮಯದಲ್ಲೇ ಮಧ್ಯಪ್ರಾಚ್ಯ ಭಾಗದಲ್ಲಿ ಭಾರಿ ದೊಡ್ಡ ಸಂಘರ್ಷ ಶುರುವಾಗಿ, ಸಾವಿರಾರು ಜನ ಜೀವ ಬಿಟ್ಟಿದ್ದಾರೆ. ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ಕೂಡ ಕುಸಿದು ಬೀಳಲು ಆರಂಭಿಸಿದೆ. ಇಂದು ಕೂಡ ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಶುರುವಾದ ನಂತರ ಎಲ್ಲೆಲ್ಲೂ ಯುದ್ಧದ ಮಾತೇ ಕೇಳಿಬರುತ್ತಿದೆ. ಹೂಡಿಕೆದಾರರು ಈ ಕಾರಣಕ್ಕೆ ಹೆದರಿ ಷೇರು ಮಾರುಕಟ್ಟೆಯಿಂದ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಇರಾನ್ ವಿರುದ್ಧ ಅಮೆರಿಕ & ಇಸ್ರೇಲ್ ಸೇನಾ ಕಾರ್ಯಾಚರಣೆ ಜೋರಾದ ಕಾರಣಕ್ಕೆ ಜಾಗತಿಕ ಆರ್ಥಿಕತೆ ಅಲ್ಲಾಡಿದೆ. ಅಮೆರಿಕ, ಯುರೋಪ್ ದೇಶಗಳು ಸೇರಿ ಜಗತ್ತಿನಲ್ಲಿ ದೊಡ್ಡ ದೊಡ್ಡ ದೇಶಗಳ ಷೇರುಪೇಟೆ ಯುದ್ಧ ಕಾರಣ ನಲುಗಿದ್ದು ಹೂಡಿಕೆದಾರರಿಗೆ ಚಿಂತೆಯೂ ಶುರುವಾಗಿದೆ.

ಎಷ್ಟು ಅಂಕ ಕುಸಿತ ಕಂಡಿದೆ?
ಈ ಸಮಯದಲ್ಲೇ ಭಾರತದಲ್ಲಿ ಕೂಡ ಸತತವಾಗಿ ಷೇರುಪೇಟೆ ಕುಸಿತ ಕಾಣುತ್ತಿದ್ದು, ಇಂದು ಭಾರಿ ದೊಡ್ಡ ಇಳಿಕೆ ಕಂಡಿವೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು. ಸೆನ್ಸೆಕ್ಸ್ ಇಂದು ಒಂದೇ ದಿನದಲ್ಲಿ ಗರಿಷ್ಠ 1,500 ಅಂಕಗಳಷ್ಟು ಇಳಿಕೆ ಕಂಡು ಒಂದಷ್ಟು ಚೇತರಿಸಿಕೊಳ್ಳುತ್ತಿದೆ, ಹಾಗೇ ಇನ್ನೊಂದು ಕಡೆ ನಿಫ್ಟಿ-50 ಸೂಚ್ಯಂಕ ಗರಿಷ್ಠ 500 ಅಂಕಗಳಷ್ಟು ಕುಸಿತ ಕಂಡು ಈಗ ಚೇತರಿಕೆ ಕಾಣುತ್ತಿದೆ. ನಿನ್ನೆಯೂ ಇದೇ ರೀತಿ ಕುಸಿತ ಕಂಡಿದ್ದ ಷೇರುಪೇಟೆ ಇಂದು ಕೂಡ ಕುಸಿತವನ್ನು ಮುಂದುವರಿಸಿದೆ.












Click it and Unblock the Notifications