ಕರ್ನಾಟಕದಲ್ಲಿ ಬೃಹತ್ ಬಂಡವಾಳ ಹೂಡಿಕೆ: 55 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ, 28,000 ಉದ್ಯೋಗ ಸೃಷ್ಟಿ

ಕರ್ನಾಟಕ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಜೂನ್ 19 ರಂದು ನಡೆದ ಮಹತ್ವದ ಸಭೆಯಲ್ಲಿ ರಾಜ್ಯದ ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡಿದೆ. ಸಭೆಯಲ್ಲಿ ಬರೋಬ್ಬರಿ 7,506 ಕೋಟಿ ರೂಪಾಯಿ ಹೂಡಿಕೆಯ ಒಟ್ಟು 55 ಹೊಸ ಕೈಗಾರಿಕಾ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ 28,000ಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಈ ಕುರಿತು ಮಾಹಿತಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಬಿಯಾಂಡ್ ಬೆಂಗಳೂರು' ಉಪಕ್ರಮದ ಅಡಿಯಲ್ಲಿ ಈ ಹೂಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅನುಮೋದನೆಗೊಂಡ 55 ಯೋಜನೆಗಳ ಪೈಕಿ 41 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗಡಿಯ ಹೊರಗಿನ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದ್ದು, ಸಮಗ್ರ ರಾಜ್ಯದ ಅಭಿವೃದ್ಧಿಗೆ ಇದು ನಾಂದಿ ಹಾಡಲಿದೆ.

Government

ವಿದೇಶಿ ನೇರ ಹೂಡಿಕೆ ಮೂಲಕ ಆರ್ಥಿಕತೆಗೆ ಬಲ

ರಾಜ್ಯದಲ್ಲಿ ಬಂಡವಾಳ ಹೂಡಲು ಕೇವಲ ದೇಶೀಯ ಕಂಪನಿಗಳು ಮಾತ್ರವಲ್ಲ, ವಿದೇಶಿ ಕಂಪನಿಗಳು ಕೂಡ ತೀವ್ರ ಆಸಕ್ತಿ ತೋರುತ್ತಿವೆ. ಸಚಿವ ಎಂ.ಬಿ. ಪಾಟೀಲ್ ನೀಡಿದ ಮಾಹಿತಿಯ ಪ್ರಕಾರ, ಅನುಮೋದನೆಗೊಂಡ ಪ್ರಸ್ತಾವನೆಗಳಲ್ಲಿ ನಾಲ್ಕು ಪ್ರಮುಖ ಯೋಜನೆಗಳು ವಿದೇಶಿ ನೇರ ಹೂಡಿಕೆಯನ್ನು ಒಳಗೊಂಡಿವೆ. ತೈವಾನ್ ಮೂಲದ 'ಟೀಮಿಂಗ್ ಆಟೊಮೇಷನ್' 20 ಕೋಟಿ ರೂ., ದಕ್ಷಿಣ ಕೊರಿಯಾದ 'ವೈಜೆ ಲಿಂಕ್' 177.9 ಕೋಟಿ ರೂ., ಜರ್ಮನಿಯ 'ರೆವಮ್' 16.5 ಕೋಟಿ ರೂ. ಹಾಗೂ ಜಪಾನ್ ಮೂಲದ 'ಶಿಂಕೋ' ಕಂಪನಿಯು 100 ಕೋಟಿ ರೂ. ಬಂಡವಾಳವನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲಿವೆ. ಈ ಮೂಲಕ ಒಟ್ಟು 314.4 ಕೋಟಿ ರೂ.ಗಳ ವಿದೇಶಿ ನೇರ ಹೂಡಿಕೆ ರಾಜ್ಯಕ್ಕೆ ಹರಿದುಬರಲಿದ್ದು, ಈ ನಾಲ್ಕು ಯೋಜನೆಗಳಿಂದಲೇ 503ಕ್ಕೂ ಹೆಚ್ಚು ಕೌಶಲ್ಯಯುತ ಉದ್ಯೋಗಗಳು ಸೃಷ್ಟಿಯಾಗಲಿವೆ.

ಪ್ರಮುಖ ವಲಯಗಳು

ಸದ್ಯ ಅನುಮೋದನೆ ಪಡೆದಿರುವ ಬಹುಪಾಲು ಕೈಗಾರಿಕಾ ಯೋಜನೆಗಳು ಏರೋಸ್ಪೇಸ್ , ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಸಾಮಾನ್ಯ ಎಂಜಿನಿಯರಿಂಗ್ ವಲಯಗಳಿಗೆ ಸೇರಿವೆ. ಈ ಬಗ್ಗೆ ವಿವರಿಸಿದ ಸಚಿವರು, ಅನುಮೋದಿತ ಪ್ರಸ್ತಾವನೆಗಳ ಪೈಕಿ 35 ಯೋಜನೆಗಳು ತಲಾ 50 ಕೋಟಿ ರೂ.ಗಳಿಗಿಂತ ಹೆಚ್ಚು ಹೂಡಿಕೆಯನ್ನು ಹೊಂದಿರುವ ಬೃಹತ್ ಯೋಜನೆಗಳಾಗಿವೆ.

ಉಳಿದಂತೆ 15 ಯೋಜನೆಗಳು 15 ಕೋಟಿ ರೂ.ನಿಂದ 50 ಕೋಟಿ ರೂ.ವರೆಗಿನ ಹೂಡಿಕೆಗಳನ್ನು ಆಕರ್ಷಿಸಲಿವೆ. ಇದರ ಜೊತೆಗೆ, ಐದು ಹಾಲಿ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, ಇದಕ್ಕಾಗಿ 223.61 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆಯನ್ನು ಮಾಡಲಿವೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ: ಯಾವ ಜಿಲ್ಲೆಗೆ ಎಷ್ಟು ಹೂಡಿಕೆ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕೆಗಳು ತಲೆ ಎತ್ತುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ. ಅನುಮೋದಿತ ಯೋಜನೆಗಳಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳ ಹೂಡಿಕೆಗಳು ಸೇರಿವೆ. ಪ್ರಮುಖವಾಗಿ:

ಕೇನ್ಸ್ ಎಲೆಕ್ಟ್ರಾನಿಕ್ಸ್: ಚಾಮರಾಜನಗರ ಜಿಲ್ಲೆಯಲ್ಲಿ 495 ಕೋಟಿ ರೂ.

ಎಸ್ಎಫ್ಒ ಟೆಕ್ನಾಲಜೀಸ್: ದೊಡ್ಡಬಳ್ಳಾಪುರದಲ್ಲಿ 490 ಕೋಟಿ ರೂ.

ಆರ್ಬಿಟ್ ಇಂಡಸ್ಟ್ರಿಯಲ್ ಪಾರ್ಕ್ಸ್: ಕೋಲಾರದಲ್ಲಿ 454 ಕೋಟಿ ರೂ.

ಟೆರ್ರಾ ಸರ್ಕ್ಯೂಟ್ಸ್: ವಿಜಯಪುರದಲ್ಲಿ 441 ಕೋಟಿ ರೂ.

ಬೆಲ್ಲಾಟ್ರಿಕ್ಸ್ ಏರೋಸ್ಪೇಸ್: ಬೆಂಗಳೂರು ಗ್ರಾಮಾಂತರದಲ್ಲಿ 404 ಕೋಟಿ ರೂ.

ಜೆಎಸ್ಡಬ್ಲ್ಯು ಪೋರ್ಟ್ ಲಾಜಿಸ್ಟಿಕ್ಸ್: ಬಳ್ಳಾರಿಯಲ್ಲಿ 380 ಕೋಟಿ ರೂ.

ಶಾಹಿ ಎಕ್ಸ್ಪೋರ್ಟ್ಸ್: ಕಲಬುರಗಿಯಲ್ಲಿ 337 ಕೋಟಿ ರೂ.

ಇನ್ಫ್ರಾಗ್ಯಾಲಕ್ಸಿ: ದಕ್ಷಿಣ ಕನ್ನಡದಲ್ಲಿ 300 ಕೋಟಿ ರೂ.

ಹೈ-ಟೆಕ್ ಮೆಟಾಲಿಕ್ಸ್: ವಿಜಯಪುರದಲ್ಲಿ 250 ಕೋಟಿ ರೂ.

ಇದರೊಂದಿಗೆ, ರೋನ್ ಪವರ್ ಗದಗದಲ್ಲಿ 177.2 ಕೋಟಿ ರೂ., ವಾಹಿನಿ ಪಾಲಿಟೆಕ್ ತುಮಕೂರಿನಲ್ಲಿ 170 ಕೋಟಿ ರೂ., ಏರಿಸ್ ರಿಫೈನರಿ ಕೋಲಾರದಲ್ಲಿ 157.4 ಕೋಟಿ ರೂ., ಜುರೊಜಿನ್ ಡೆವಲಪರ್ಸ್ 137 ಕೋಟಿ ರೂ., ಅರ್ಬೆನೊ ರಿಯಾಲ್ಟಿ 125 ಕೋಟಿ ರೂ., ಅಯತಾನ ಹಾಸ್ಪಿಟಾಲಿಟಿ ಕೊಡಗಿನಲ್ಲಿ 110.2 ಕೋಟಿ ರೂ., ಪ್ರ್ಯಾಕ್ಸೇರ್ ಇಂಡಿಯಾ ಹೊಸಕೋಟೆಯಲ್ಲಿ 210 ಕೋಟಿ ರೂ., ಶೋಭಾ ರಿಯಾಲ್ಟಿ ಬೆಂಗಳೂರು ನಗರದಲ್ಲಿ 201.1 ಕೋಟಿ ರೂ. ಮತ್ತು ಬಲ್ಕ್ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 110 ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಲಿವೆ ಎಂದು ಸಚಿವ ಎಂ.ಬಿ. ಪಾಟೀಲ್ ವಿವರಿಸಿದರು. ಈ ಎಲ್ಲಾ ಯೋಜನೆಗಳು ಶೀಘ್ರದಲ್ಲೇ ಕಾರ್ಯಗತಗೊಂಡು ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+