Bengaluru Metro: ವಿಸ್ತರಣೆಗಾಗಿ 460 ಕೋಟಿ ರೂಪಾಯಿ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಮಾಸ್ಟರ್ ಪ್ಲಾನ್

Bengaluru Namma Metro: ಬೆಂಗಳೂರು ನಗರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು, ಸಮಯ ಉಳಿತಾಯಕ್ಕಾಗಿ ಇಲ್ಲಿನ ಬಹುತೇಕ ಕಂಪನಿಗಳ ಉದ್ಯೋಗಿಗಳು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಈ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇದೀಗ ಬೇಡಿಕೆ ಮೇರೆಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸಲು ಬಿಎಂಆರ್‌ಸಿಎಲ್‌ ಹೊಸ ಆರ್ಥಿಕ ಮಾರ್ಗಗಳತ್ತ ಮುಖ ಮಾಡಿದೆ.

ನಮ್ಮ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹೊಸ ಆರ್ಥಿಕ ಮಾರ್ಗಗಳನ್ನು ಹುಡುಕುತ್ತಿದೆ. ಇದರ ಭಾಗವಾಗಿ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಗಾಗಿ ಇನ್ನೋವೇಟಿವ್ ಫೈನಾನ್ಸಿಂಗ್ ಮಾದರಿಯಡಿ ಸುಮಾರು 460 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಬಿಎಂಆರ್‌ಸಿಎಲ್ ಪ್ರಮುಖ ಕಾರ್ಪೊರೇಟ್ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

Bengaluru Metro Expansion BMRCL Plans 460 Crore Funding Collection With Corporate Partnerships

ಏನಿದು ಇನ್ನೋವೇಟಿವ್ ಫೈನಾನ್ಸಿಂಗ್?

ಮೆಟ್ರೋ ಯೋಜನೆಗಳಿಗೆ ಭಾರಿ ಬಂಡವಾಳ ಬೇಕಾಗಿರುವುದರಿಂದ ಕೇವಲ ಸರ್ಕಾರಿ ಅನುದಾನದ ಮೇಲೆ ಅವಲಂಬಿತವಾಗದೆ, ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ಹಣ ಸಂಗ್ರಹಿಸುವ ವಿಶೇಷ ಯೋಜನೆ ಇದಾಗಿದೆ. ಇದರ ಅಡಿಯಲ್ಲಿ ಕಂಪನಿಗಳಿಗೆ 30 ವರ್ಷಗಳ ಅವಧಿಗೆ ಕೆಲವು ಪ್ರಮುಖ ಒಪ್ಪಂದಗಳನ್ನು ನೀಡಲಾಗುತ್ತದೆ.

ಹಣ ಸಂಗ್ರಹಕ್ಕೆ ಕೈಗೊಳ್ಳುವ ಕ್ರಮಗಳು

* ಜಾಹೀರಾತು ಮತ್ತು ವಾಣಿಜ್ಯ ಸ್ಥಳ: ನಿಲ್ದಾಣದ ಒಳಗೆ ಜಾಹೀರಾತು ಪ್ರದರ್ಶಿಸಲು ಸುಮಾರು 1,000 ಚದರ ಅಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆಯಲು 3,000 ಚದರ ಅಡಿ ಜಾಗವನ್ನು ಒದಗಿಸುವುದು.

* ಡೈರೆಕ್ಟ್ ವಾಕ್‌ವೇ: ಮೆಟ್ರೋ ನಿಲ್ದಾಣದಿಂದ ನೇರವಾಗಿ ಕಂಪನಿಯ ಐಟಿ ಪಾರ್ಕ್ ಅಥವಾ ಕಚೇರಿ ಆವರಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡುವುದು.

ಯಾವೆಲ್ಲಾ ಕಂಪನಿಗಳೊಂದಿಗೆ ಮಾತುಕತೆ?

ಮೂಲಗಳ ಪ್ರಕಾರ, ಔಟರ್ ರಿಂಗ್ ರೋಡ್ ಮತ್ತು ಏರ್‌ಪೋರ್ಟ್ ಲೈನ್ (ಹಂತ 2A ಮತ್ತು 2B) ವ್ಯಾಪ್ತಿಯಲ್ಲಿ ಬರುವ ಐಟಿ ಪಾರ್ಕ್‌ಗಳು ಮತ್ತು ಪ್ರಮುಖ ಉದ್ಯಮಗಳೊಂದಿಗೆ ಬಿಎಂಆರ್‌ಸಿಎಲ್ ಮಾತುಕತೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

* ಬಾಗ್ಮನೆ ಟೆಕ್ ಪಾರ್ಕ್: ಹೊರವರ್ತುಲ ರಸ್ತೆಯಲ್ಲಿರುವ ಡಿಆರ್‌ಡಿಒ (DRDO) ಮತ್ತು ಇಸ್ರೋ (ISRO) ಮೆಟ್ರೋ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಅಲ್ಲದೆ ಪರ್ಪಲ್ ಲೈನ್‌ನ ಎಸ್‌ವಿ ರೋಡ್ ನಿಲ್ದಾಣದಿಂದ ಡಿಆರ್‌ಡಿಒ ನಿಲ್ದಾಣದವರೆಗೆ ಮೊನೊರೈಲ್ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯೂ ಇದರಲ್ಲಿದೆ ಎನ್ನಲಾಗಿದೆ.

* ಸೆಂಚುರಿ ಗ್ರೂಪ್: ಏರ್‌ಪೋರ್ಟ್ ಮಾರ್ಗದಲ್ಲಿ (ಕೆ.ಆರ್. ಪುರಂ - ದೇವನಹಳ್ಳಿ) ಜಕ್ಕೂರು ಪ್ಲಾಂಟೇಶನ್ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಿಸಲು ಈ ರಿಯಲ್ ಎಸ್ಟೇಟ್ ಸಂಸ್ಥೆಯೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಈ ಯೋಜನೆ ಯಶಸ್ವಿಯಾದರೆ ನಿಲ್ದಾಣದ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಲಿದೆ.

* ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL): ಕೆ.ಆರ್. ಪುರಂ ಮತ್ತು ಮಹದೇವಪುರ ನಿಲ್ದಾಣಗಳ ವ್ಯಾಪ್ತಿಯಲ್ಲಿ ಇಂಧನ ಸಂಸ್ಥೆಯೊಂದಿಗೆ ಸಹಭಾಗಿತ್ವದ ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ಯಶಸ್ವಿಯಾಗಿರುವ ಒಪ್ಪಂದಗಳು

* ಇನ್ಫೋಸಿಸ್ ಫೌಂಡೇಶನ್: ಎಲೆಕ್ಟ್ರಾನಿಕ್ಸ್ ಸಿಟಿಯ ಕೊನಪ್ಪನ ಅಗ್ರಹಾರ ನಿಲ್ದಾಣಕ್ಕಾಗಿ 200 ಕೋಟಿ ರೂಪಾಯಿ ನೆರವು ನೀಡಿದ್ದು, ಈ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಹೆಸರು ಇಡಲಾಗಿದೆ.

* ಬಯೋಕಾನ್ ಫೌಂಡೇಶನ್: ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ಬ್ರಾಂಡಿಂಗ್‌ ರೈಟ್ಸ್ ಹಕ್ಕುಗಳಿಗಾಗಿ 65 ಕೋಟಿ ರೂಪಾಯಿ ನೀಡಿದೆ.

* ಡೆಲ್ಟಾ ಎಲೆಕ್ಟ್ರಾನಿಕ್ಸ್: ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬ್ರಾಂಡಿಂಗ್‌ ಹೆಸರಿಗಾಗಿ 65 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಳ್ಳಲಾಗಿದೆ.

* ಎಂಬೆಸಿ ಗ್ರೂಪ್ ಮತ್ತು ಪ್ರೆಸ್ಟೀಜ್ ಗ್ರೂಪ್: ಕಾಡುಬಿಸನಹಳ್ಳಿ ಮತ್ತು ಕೋಡಿಬೀಸನಹಳ್ಳಿ ನಿಲ್ದಾಣಗಳ ಅಭಿವೃದ್ಧಿಗೆ ತಲಾ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿವೆ.

ಬೆಂಗಳೂರಿನ ಐಟಿ ವಲಯದ ಉದ್ಯೋಗಿಗಳಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಲ್ಲದೆ ನೇರವಾಗಿ ತಮ್ಮ ಕಚೇರಿಗಳನ್ನು ತಲುಪಲು ಈ ಡೈರೆಕ್ಟ್ ವಾಕ್‌ವೇ ಮತ್ತು ನಿಲ್ದಾಣಗಳು ನೆರವಾಗಲಿವೆ. ಸರ್ಕಾರಕ್ಕೆ ಆರ್ಥಿಕ ಹೊರೆ ತಗ್ಗಿಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಗರದ ಮೂಲಸೌಕರ್ಯವನ್ನು ವೇಗವಾಗಿ ಅಭಿವೃದ್ಧಿಪಡಿಸಲು ಬಿಎಂಆರ್‌ಸಿಎಲ್‌ಗೆ ಈ ಹೊಸ ಆರ್ಥಿಕ ನೀತಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+