ಕಲಬುರಗಿ: ಟ್ರಾಫಿಕ್‌ ಪೊಲೀಸರಿಗೆ ಕೂಲಿಂಗ್‌ ಗ್ಲಾಸ್‌, ಛತ್ರಿ ವಿತರಣೆ

Posted By:
Subscribe to Oneindia Kannada

ಕಲಬುರಗಿ, ಏಪ್ರಿಲ್. 09 : ಉರಿಯುವ ಬಿಸಿಲಲ್ಲಿ ನಿಂತು ಕಾರ್ಯನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಇಲಾಖೆ ವತಿಯಿಂದ ಛತ್ರಿ, ಕೂಲಿಂಗ್ ಗ್ಲಾಸ್ ವಿತರಿಸಲಾಯಿತು.

ಸಂಚಾರ ಠಾಣೆ ಮತ್ತು ಹೆಚ್ಚುವರಿ ಸಂಚಾರ ಠಾಣೆಯ 100 ಕಾನ್‌ ಸ್ಟೇಬಲ್ ಹಾಗೂ ಎಎಸ್ ಐಗಳಿಗೆ ಛತ್ರಿ, ಕಣ್ಣಿಗೆ ತಂಪು ನೀಡುವ ಕನ್ನಡಕ, ಕೂಲಿಂಗ್ ವಾಟರ್ ಬಾಟಲ್ ಗಳನ್ನು ಎಸ್‌ಪಿ ಶಶಿಕುಮಾರ ವಿತರಿಸಿದರು.

kalaburagi-sp-shashi-kumar-distributed-cooling-glass-umbrella-to-trafic-police

ಬಿಸಿಲಿನಲ್ಲಿ ಬಸವಳಿದರೂ ಸೇವೆ ನಿರ್ವಹಿಸುವ ಸಂಚಾರಿ ಪೊಲೀಸರ ಸಮಸ್ಯೆ ನೀಗಿಸಲೆಂದು ಎಸ್.ಪಿ. ಶಶಿಕುಮಾರ ಇಂತಹದೊಂದು ಯೋಜನೆ ರೂಪಿಸಿದ್ದಾರೆ.

ಬಿಸಿಲಿನಿಂದ ರಕ್ಷಣೆಗಾಗಿ ಬೇಕಾದ ಅಗತ್ಯ ಸಾಮಗ್ರಿ ಮಾತ್ರವಲ್ಲ ಇಂದಿನಿಂದ ಬೇಸಿಗೆ ಮುಗಿಯುವವರೆಗೆ ಸಂಚಾರಿ ಸಿಬ್ಬಂದಿಗಳಿಗೆ ಮಜ್ಜಿಗೆ, ಸೋಡಾ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To beat the scorching heat, Kalaburagi SP Shashi kumar distributed sunglasses, umbrella and water bottles to traffic police in Kalaburagi.
Please Wait while comments are loading...