ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕಂಪನಿಯಲ್ಲಿ ಯಾವುದೇ ಉದ್ಯೋಗಿ ರಾಜೀನಾಮೆ ನೀಡಿದರೂ ಶೇ.10ರಷ್ಟು ಸಂಬಳ ಹೆಚ್ಚಾಗುತ್ತೆ!?

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 14: ಉದ್ಯೋಗಿಗಳಿಂದ ಮೂನ್‌ಲೈಟಿಂಗ್ ಅಂದರೆ ದಿನದಲ್ಲಿ 18 ಗಂಟೆಗಳ ದುಡಿಸಿಕೊಳ್ಳುವ ಹೊಸ ಸಂಸ್ಕೃತಿಯ ಮಧ್ಯೆ ಇಲ್ಲೊಂದು ಕಂಪನಿಯು ವಿಶೇಷವಾಗಿ ಸುದ್ದಿ ಮಾಡಿದೆ.

ಯುನೈಟೆಡ್ ಸ್ಟೇಟ್ಸ್‌ನ ಮಾರ್ಕೆಟಿಂಗ್ ಏಜೆನ್ಸಿಯೊಂದು ತಮ್ಮ ಉದ್ಯೋಗಿಗಳು ರಾಜೀನಾಮೆ ನೀಡಿ, ನೋಟಿಸ್ ಅವಧಿಯಲ್ಲಿ ಇರುವಾಗ ಶೇ.10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದೆ. ಮಾರ್ಕೆಟಿಂಗ್ ಏಜೆನ್ಸಿ ಗೊರಿಲ್ಲಾದ ಸಂಸ್ಥಾಪಕ ಜಾನ್ ಫ್ರಾಂಕೊ ಹೊರಹೋಗುವ ಉದ್ಯೋಗಿ, ಹೊಸ ಉದ್ಯೋಗಿ ಮತ್ತು ಕಂಪನಿಯ ನಡುವೆ 'ಸುಗಮ ಪರಿವರ್ತನೆ' ಎಂಬ ಯೋಜನೆಯನ್ನು ಹಂಚಿಕೊಳ್ಳಲು ಲಿಂಕ್ಡ್‌ಇನ್‌ನಲ್ಲಿ ಇಂಥದೊಂದು ಘೋಷಣೆಯನ್ನು ಮಾಡಿದ್ದಾರೆ.

ತಮ್ಮ ಉದ್ಯೋಗಿಗಳ ಸಂಬಳ ಹೆಚ್ಚಿಸಿದ ಪ್ರಮುಖ ಐಟಿ ಕಂಪನಿಗಳು: ಕಾರಣವೇನು ಗೊತ್ತಾ?ತಮ್ಮ ಉದ್ಯೋಗಿಗಳ ಸಂಬಳ ಹೆಚ್ಚಿಸಿದ ಪ್ರಮುಖ ಐಟಿ ಕಂಪನಿಗಳು: ಕಾರಣವೇನು ಗೊತ್ತಾ?

ನೋಟಿಸ್ ಅವಧಿಯಲ್ಲಿ ಉದ್ಯೋಗಿಗಳಿಗೆ ವೇತನವನ್ನು ಹೆಚ್ಚಳ ಮಾಡುತ್ತಿರುವುದು ಏಕೆ?, ನೋಟಿಸ್ ಅವಧಿಯಲ್ಲಿ ಉದ್ಯೋಗಿಗಳ ವೇತನ ಹೆಚ್ಚಳದ ಹಿಂದಿನ ಉದ್ದೇಶವೇನು? ಇದರಿಂದ ಕಂಪನಿಗೇನು ಲಾಭ ಹಾಗೂ ಉದ್ಯೋಗಿಗಳಿಗೇನು ಲಾಭ ಎಂಬುದನ್ನು ಅವರು ವಿವರಿಸಿದ್ದಾರೆ.

ಗೊರಿಲ್ಲಾ ಕಂಪನಿಯಲ್ಲಿ 3 ತಿಂಗಳು ನೋಟಿಸ್ ಅವಧಿ

ಗೊರಿಲ್ಲಾ ಕಂಪನಿಯಲ್ಲಿ 3 ತಿಂಗಳು ನೋಟಿಸ್ ಅವಧಿ

"ಒಬ್ಬ ಉದ್ಯೋಗಿಯು ಗೊರಿಲ್ಲಾ ಕಂಪನಿಯನ್ನು ತೊರೆಯುವ ನಿರ್ಧಾರವನ್ನು ನಮಗೆ ತಿಳಿಸಿದ ಕ್ಷಣದಿಂದ ಮತ್ತು ಅವರು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಾಜೀನಾಮೆ ನೀಡಿದ ಯಾವುದೇ ಉದ್ಯೋಗಿಯು ಕನಿಷ್ಠ ಆರು ವಾರಗಳವರೆಗೂ ನೋಟಿಸ್ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ಅವಧಿಯಲ್ಲಿ ಕಂಪನಿಯಯು ಉದ್ಯೋಗಿಗೆ ಶೇ.10ರಷ್ಟು ವೇತನವನ್ನು ಹೆಚ್ಚಳ ಮಾಡುತ್ತದೆ. ತದನಂತರದಲ್ಲಿ ಕಂಪನಿಗೆ ರಾಜೀನಾಮೆ ನೀಡಿದ 3 ತಿಂಗಳೊಳಗೆ ಉದ್ಯೋಗಿಯು ಕಂಪನಿಯನ್ನು ತೊರೆಯಲು ಅವಕಾಶ ನೀಡಲಾಗುತ್ತದೆ ಎಂದು ಗೊರಿಲ್ಲಾದ ಸಂಸ್ಥಾಪಕ ಜಾನ್ ಫ್ರಾಂಕೊ ತಿಳಿಸಿದ್ದಾರೆ.

ನೋಟಿಸ್ ಅವಧಿಯಲ್ಲೇ ವೇತನ ಹೆಚ್ಚಳ ಏಕೆ?

ನೋಟಿಸ್ ಅವಧಿಯಲ್ಲೇ ವೇತನ ಹೆಚ್ಚಳ ಏಕೆ?

ರಾಜೀನಾಮೆ ನೀಡಿದ ಉದ್ಯೋಗಿಯು ಮೂರು ತಿಂಗಳ ನೋಟಿಸ್ ಅವಧಿಯನ್ನು ಪೂರೈಸುವ ಸಮಯದಲ್ಲೇ ಹೊಸ ಉದ್ಯೋಗಿಗಳನ್ನು ಕಂಪನಿ ನೇಮಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದ ಉದ್ಯೋಗಿ ಹಾಗೂ ಹೊಸ ಉದ್ಯೋಗಿಗಳ ಮಧ್ಯೆ ಸುಗಮ ಪರಿವರ್ತನೆ ಹಾಗೂ ಕಂಪನಿಯ ಭವಿಷ್ಯದ ಯೋಜನೆಗೆ ಹಾದಿ ಸುಗಮವಾಗುತ್ತದೆ. ಸಾಮಾನ್ಯವಾಗಿ ನಮ್ಮ ಉದ್ಯೋಗಿಗಳನ್ನು ಬಿಟ್ಟುಕೊಡುವುದಕ್ಕೆ ನಾವು ಬಯಸುವುದಿಲ್ಲ. ಆದರೆ ವಾಸ್ತವದ ಉದ್ಯೋಗಿಗಳ ಮನಸ್ಥಿತಿ ಹಾಗೂ ಟ್ರೆಂಡ್ ನೋಡಿದಾಗ, ಅವರೆಲ್ಲ ನಮ್ಮೊಂದಿಗೆ ಕೊನೆವರೆಗೂ ಉಳಿಯುತ್ತಾರೆ ಎಂದುಕೊಳ್ಳುವುದು ಮೂರ್ಖತನವಾಗುತ್ತದೆ ಎಂದು ಫ್ರಾಂಕೊ ಹೇಳಿದ್ದಾರೆ.

ಉದ್ಯೋಗಿಗಳಿಗೆ ಲಾಭವಾಗುತ್ತಾ ವೇತನ ಹೆಚ್ಚಳ?

ಉದ್ಯೋಗಿಗಳಿಗೆ ಲಾಭವಾಗುತ್ತಾ ವೇತನ ಹೆಚ್ಚಳ?

ಗೊರಿಲ್ಲಾ ಕಂಪನಿಯಲ್ಲಿ 3 ತಿಂಗಳವರೆಗೂ ನೋಟಿಸ್ ಅವಧಿಯನ್ನು ಪೂರ್ಣಗೊಳಿಸುವುದಕ್ಕೆ ಉದ್ಯೋಗಿಗಳಿಗೆ ಅವಕಾಶ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಉದ್ಯೋಗಿಯು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರೆ ಅಥವಾ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಿಸುವ ಸವಾಲುಗಳಿದ್ದರೆ, ಈ ವೇತನ ಹೆಚ್ಚಳವು ಅಂಥವರಿಗೆ ಸಹಕಾರಿ ಆಗಲಿದೆ. ಇದೇ ಅವಧಿಯಲ್ಲಿ ಕಂಪನಿಯ ಬಗ್ಗೆ ಉದ್ಯೋಗಿಗಳಲ್ಲಿ ಗೌರವ ಭಾವನೆ ಹೆಚ್ಚಾಗುತ್ತದೆ. ಅಲ್ಲದೇ ಆ ಉದ್ಯೋಗಿಯು ಹೊರ ನಡೆದ ನಂತರದಲ್ಲಿ ಯಾವ ರೀತಿಯ ಸವಾಲು ಎದುರಾಗಬಹುದು ಎಂಬುದನ್ನು ಅರಿತುಕೊಳ್ಳುವುದಕ್ಕೆ ಕಂಪನಿಗೂ ಅವಕಾಶ ಸಿಕ್ಕಂತೆ ಆಗುತ್ತದೆ ಎಂಬುದು ಫ್ರಾಂಕೊ ಮಾತು.

ಉದ್ಯೋಗಿಯೊಬ್ಬರ ಬಗ್ಗೆ ಉದಾಹರಣೆ ನೀಡಿದ ಫ್ರಾಂಕೊ

ಉದ್ಯೋಗಿಯೊಬ್ಬರ ಬಗ್ಗೆ ಉದಾಹರಣೆ ನೀಡಿದ ಫ್ರಾಂಕೊ

"ಇತ್ತೀಚೆಗೆ ವೇತನ ಹೆಚ್ಚಳದ ಪ್ರಯೋಗವನ್ನು ಒಬ್ಬ ಉದ್ಯೋಗಿಯ ರಾಜೀನಾಮೆ ಸಂದರ್ಭದಲ್ಲಿ ಜಾರಿಗೆ ತರಲಾಗಿದೆ. ಗೊರಿಲ್ಲಾ ಕಂಪನಿಯ ಹಿರಿಯ ಹಾಗೂ ಪ್ರಮುಖ ಪಾತ್ರ ವಹಿಸಿದ್ದ ಉದ್ಯೋಗಿಯೊಬ್ಬರು ತಮ್ಮ ವೃತ್ತಿ ಜೀವನದ ಮತ್ತೊಂದು ಮಜಲಿಗೆ ತಲುಪುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಕಂಪನಿಯನ್ನು ತೊರೆಯುವುದಾಗಿ ಹೇಳಿದರು. ಮೂರು ತಿಂಗಳು ನೋಟಿಸ್ ಅವಧಿಯನ್ನು ಮಾಡುವುದಾಗಿ ಹೇಳಿದ ತಕ್ಷಣವೇ ಅವರ ವೇತನದಲ್ಲಿ ಶೇ.10ರಷ್ಟು ಏರಿಕೆ ಮಾಡಲಾಯಿತು. ಅಲ್ಲಿಂದ ಅದೇ ಸ್ಥಾನಕ್ಕೆ ಮತ್ತೊಬ್ಬ ಉದ್ಯೋಗಿಯನ್ನು ಹುಡುಕುವುದಕ್ಕೆ ಶುರು ಮಾಡಿದೆವು. ಹಳೆಯ ಉದ್ಯೋಗಿ ಹಾಗೂ ಹೊಸ ಉದ್ಯೋಗಿಯ ಮಧ್ಯೆ ಉತ್ತಮ ಪರಿವರ್ತನೆಯನ್ನು ತರುವುದರಲ್ಲಿ ಈ ವೇತನ ಹೆಚ್ಚಳವು ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ ಎಂದು ಫ್ರಾಂಕೊ ತಿಳಿಸಿದ್ದಾರೆ.

English summary
This company gives 10 percent salary Hike to employees during notice period; Here's why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X