Get Updates
Get notified of breaking news, exclusive insights, and must-see stories!

ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತೆ ಹೆಚ್ಚಳ ಯಾವಾಗ? ಇಲ್ಲಿದೆ ಸುಳಿವು

ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಲಾಗಿತ್ತು. ನೌಕರರಿಗೆ ಕೇಂದ್ರ ಸರ್ಕಾರವು ಕೊಂಚ ತಡವಾದರೂ ನಿರೀಕ್ಷಿತ ಗಿಫ್ಟ್ ಕೊಟ್ಟಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ.

ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ ಡೇಟಾದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ ಮತ್ತು 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗಿದೆ. ಡಿಎ ಹೆಚ್ಚಳ ಘೋಷಣೆಯಾಗಿ ಜುಲೈ 1, 2022 ರಂತೆ ಡಿಎ ಶೇಕಡ 38ರಷ್ಟು ಪಡೆದಿದ್ದಾರೆ. ಜೊತೆಗೆ ನೌಕರರು ಎರಡು ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ.

ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಲಿದೆ. ಸೆಪ್ಟೆಂಬರ್ 2022 ರ ಸಂಬಳವು ಹೊಸ ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್‌ ಎರಡು ತಿಂಗಳ ಡಿಎ ಬಾಕಿಯನ್ನು ಪಡೆಯುತ್ತಾರೆ. ಡಿಎ ಹೆಚ್ಚಳವು ಜುಲೈ 1, 2022 ರಿಂದ ಜಾರಿ ಮಾಡಲಾಗುತ್ತಿದೆ. ಮುಂದಿನ ಬೇಸಿಗೆ ರಜೆಯ ದಿನಗಳಲ್ಲಿ ಕೇಂದ್ರ ಸರ್ಕಾರದ ನೌಕರರು ದೊಡ್ಡ ಮೊತ್ತದ ಸಂಬಳವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳವಾಗುವುದರಿಂದ ಮುಂದಿನ ಕಂತಿನ ಡಿಎ ಹೆಚ್ಚಳ ಯಾವಾಗ ಎಂಬುದು ಕುತೂಹಲ ಮೂಡಿದೆ. ಈ ಬಗ್ಗೆ ಲಭ್ಯ ಮಾಹಿತಿ ಇಲ್ಲಿದೆ.

ಹಲವು ರಾಜ್ಯಗಳಲ್ಲಿ ಡಿಎ ಹೆಚ್ಚಳ

ಹಲವು ರಾಜ್ಯಗಳಲ್ಲಿ ಡಿಎ ಹೆಚ್ಚಳ

ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದ ನಂತರ, ಅಸ್ಸಾಂ, ಹರ್ಯಾಣ, ಉತ್ತರ ಪ್ರದೇಶ, ಒಡಿಶಾ, ಕರ್ನಾಟಕ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು 7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ ತಮ್ಮ ರಾಜ್ಯ ನೌಕರರ ಡಿಎ ಹೆಚ್ಚಿಸಿವೆ. ಇದೀಗ ದೀಪಾವಳಿ ಹಬ್ಬ ಮುಗಿದು ಡಿಎ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರಿ ನೌಕರರು ಮುಂದಿನ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಯಾವಾಗ ಪಡೆಯುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.

ವೇತನದ ಲೆಕ್ಕಾಚಾರ ಹೀಗಿರಲಿದೆ

ವೇತನದ ಲೆಕ್ಕಾಚಾರ ಹೀಗಿರಲಿದೆ

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ. ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಜೊತೆಗೆ ಡಿಎ ಪರಿಹಾರ ಮೊತ್ತ, ಬಾಕಿ ಮೊತ್ತ ಎಲ್ಲವನ್ನು ನಿರೀಕ್ಷಿಸಬಹುದು. ಇದರ ಜೊತೆಗೆ ಸಂಬಳ ಹೆಚ್ಚಳವನ್ನು ಪಡೆಯುತ್ತಾರೆ.

ನಿರೀಕ್ಷೆ ಏನು?

ನಿರೀಕ್ಷೆ ಏನು?

ಮುಂದಿನ ಡಿಎ ಹೆಚ್ಚಳ ಮಾರ್ಚ್ 2023ಕ್ಕೆ ಸಿಗಬಹುದು ಎಂಬ ಮಾಹಿತಿಯಿದೆ. ಆದರೆ, ಈ ವರ್ಷದಲ್ಲಿ ವಿಳಂಬವಾಗಿ ಡಿಎ ಹೆಚ್ಚಳ ಮಾಡಿರುವುದರಿಂದ ಆರು ತಿಂಗಳಿಗೂ ಮುನ್ನವೇ ಡಿಎ ಹೆಚ್ಚಳ ಮಾಡಿ 2022ರ ವರ್ಷಾಂತ್ಯಕ್ಕೆ ಅಥವಾ 2023ರ ಆರಂಭದಲ್ಲೇ ಸಿಹಿ ಸುದ್ದಿ ನಿರೀಕ್ಷಿಸಬಹುದು ಎಂಬ ಸುದ್ದಿಯಿದೆ. ಇನ್ನು ಶೇ 3 ರಿಂದ 5 ರಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆಯಿದೆ. ಆದರೆ, ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮಾಣ, 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಡಿಎ ಹೆಚ್ಚಳ ಪ್ರಮಾಣ ನಿಗದಿಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+