7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ 50% ತುಟ್ಟಿಭತ್ಯೆ ಹೆಚ್ಚಳ: ಎಚ್‌ಆರ್‌ಎ ಎಷ್ಟು ಹೆಚ್ಚಾಗುತ್ತದೆ ತಿಳಿಯಿರಿ
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಶೇ.50ಕ್ಕೆ ಏರಿಕೆಯಾಗಿದೆ. ಜನವರಿ 1, 2024ರಿಂದಲೇ ಪರಿಷ್ಕೃತ ಡಿಎ ಜಾರಿಗೆ ಬರಲಿದೆ. ಡಿಎ ಹೆಚ್ಚಳ 50 ಪ್ರತಿಶತ ತಲುಪಿದಾಗ ಮನೆ ಬಾಡಿಗೆ ಭತ್ಯೆ (HRA) ನಂತಹ ಕೆಲವು ಭತ್ಯೆಗಳನ್ನು ಸಹ ಪರಿಷ್ಕರಿಸಲಾಗುತ್ತದೆ.
ಡಿಎ ಹೆಚ್ಚಳದ ನಂತರ ಪರಿಷ್ಕರಿಸಲಾಗುವ ಭತ್ಯೆಗಳ ಪಟ್ಟಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಎಚ್‌ಆರ್‌ಎ ಬದಲಾವಣೆ ಕುರಿತು ಇನ್ನೂ ಯಾವುದೇ ಆದೇಶ ಬಂದಿಲ್ಲ.

ಡಿಎ ಈಗ 50% ತಲುಪಿರುವುದರಿಂದ ಎಚ್‌ಆರ್‌ಎ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಪ್ರತ್ಯೇಕ ಆದೇಶವನ್ನು ಬಿಡುಗಡೆ ಮಾಡುವ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಡಿಎ ಹೆಚ್ಚಳದ ಬಳಿಕ ಎಚ್‌ಆರ್‌ಎ ಎಷ್ಟು ಹೆಚ್ಚಾಗುತ್ತದೆ, ಅದು ಯಾವಾಗಿಂದ ಜಾರಿಗೆ ಬರುತ್ತದೆ ಎನ್ನುವ ಹಲವು ಪ್ರಶ್ನೆಗಳು ಕೇಂದ್ರ ನೌಕರರನ್ನು ಕಾಡುತ್ತಿವೆ.
ಎಚ್‌ಆರ್‌ಎ ಎಷ್ಟು ಹೆಚ್ಚಾಗುತ್ತದೆ?
ಎಚ್‌ಆರ್‌ಎ ಹೆಚ್ಚಳವು ಉದ್ಯೋಗಿ ವಾಸಿಸುವ ನಗರದ ಪ್ರಕಾರವನ್ನು ಅವಲಂಬಿಸಿರುತ್ತದೆ. ಇತರೆ ಅಂಶಗಳ ಜೊತೆಗೆ ಎಚ್‌ಆರ್‌ಎ ಲೆಕ್ಕಾಚಾರ ಮಾಡಲು ಜನಗಣತಿಯ ಆಧಾರದ ಮೇಲೆ ನಗರಗಳನ್ನು X, Y ಮತ್ತು Z ಪ್ರಕಾರಗಳಾಗಿ ವಿಂಗಡಿಸಲಾಗಿದೆ.
ಜುಲೈ 1, 2017 ರಿಂದ ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಕ್ರಮವಾಗಿ 24%, 16% ಮತ್ತು 8% ಮೂಲ ವೇತನಕ್ಕೆ ಎಚ್‌ಆರ್‌ಎ ಅನ್ನು ನಿಗದಿ ಮಾಡಲಾಗಿತ್ತು. ಬಳಿಕ ತುಟ್ಟಿಭತ್ಯೆ 25% ತಲುಪಿದಾಗ ಎಚ್‌ಆರ್‌ಎ ದರಗಳನ್ನು X, Y ಮತ್ತು Z ನಗರಗಳಲ್ಲಿ ಕ್ರಮವಾಗಿ 27%, 18% ಮತ್ತು 9% ಮೂಲ ವೇತನಕ್ಕೆ ಪರಿಷ್ಕರಿಸಲಾಯಿತು.
ಇನ್ನೂ ಸರಳವಾಗಿ ಅರ್ಥಮಾಡಿಕೊಳ್ಳುವುದಾದದರೆ, ₹35,000 ಮೂಲವೇತನ ಹೊಂದಿರುವ ಕೇಂದ್ರ ಸರ್ಕಾರಿ ನೌಕರರಿಗೆ ಅವರು ಇರುವ ನಗರವನ್ನು ಆಧರಿಸಿ ಎಚ್‌ಆರ್‌ಎ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.
ಉದಾಹರಣೆಗೆ:
1) X ವರ್ಗದ ನಗರಕ್ಕೆ: ₹ 35,000 = ₹ 9,450 (27%)
2) Y ಪ್ರಕಾರದ ನಗರಕ್ಕೆ: ₹ 35,000 = ₹ 6,300 (18%)
3) Z ಪ್ರಕಾರದ ನಗರಕ್ಕೆ: ₹ 35,000 = ₹ 3,150 (9%)
7ನೇ ವೇತನ ಆಯೋಗವು ತುಟ್ಟಿಭತ್ಯೆ 50% ತಲುಪಿದಾಗ ಎಚ್‌ಆರ್‌ಎ ದರಗಳನ್ನು 30%, 20% 10% ಗೆ ಪರಿಷ್ಕರಿಸಲು ಶಿಫಾರಸು ಮಾಡಿದೆ. ಹಾಗಾದರೆ ಪರಿಷ್ಕೃತ ದರದ ಪ್ರಕಾರ ಎಚ್‌ಆರ್‌ಎ ಎಷ್ಟು ಹೆಚ್ಚಾಗುತ್ತದೆ ಎಂದು ನೋಡೋಣ.
1) X ವರ್ಗದ ನಗರಕ್ಕೆ: ₹ 35,000 = ₹ 10,550 (30%)
2) Y ಪ್ರಕಾರದ ನಗರಕ್ಕೆ: ₹ 35,000 = ₹ 7,000 (20%)
3) Z ಪ್ರಕಾರದ ನಗರಕ್ಕೆ: ₹ 35,000 = ₹ 3,500 (10%)
ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿದ ಎಚ್‌ಆರ್‌ಎ ಮತ್ತು ಸಂಬಂಧಿತ ಭತ್ಯೆಗಳು ಡಿಎ 50% ತಲುಪಿದಾಗ ತಿಂಗಳ ಸಂಬಳದಿಂದ ಬರುವ ಸಾಧ್ಯತೆಯಿದೆ, ಜನವರಿ 1, 2024 ರಿಂದ ತಮ್ಮ ಎಚ್‌ಆರ್‌ಎ ಹೆಚ್ಚಿಸಲಾಗಿದೆಯೇ ಎಂದು ತಿಳಿಯಲು ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದ ಸ್ಲಿಪ್‌ಗಳನ್ನು ಪರಿಶೀಲಿಸಬಹುದು.












Click it and Unblock the Notifications