7th Pay Commission: ಸರ್ಕಾರಿ ನೌಕರರ ವೇತನ ಶೀಘ್ರ ಏರಿಕೆ?
ಶೀಘ್ರವೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಲಭಿಸುವ ಸಾಧ್ಯತೆಯಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಮತ್ತು ಫಿಟ್‌ಮೆಂಟ್ ಅಂಶವನ್ನು ಏರಿಕೆ ಮಾಡುವ ಘೋಷಣೆಯನ್ನು ಮಾಡಲಿದೆ. ಈ ಡಿಎ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರ ವೇತನವು ಏರಿಕೆಯಾಗಲಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನವು 18 ಸಾವಿರ ರೂಪಾಯಿ ಆಗಿದೆ. ಆದರೆ ಕೇಂದ್ರ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು ಏರಿಕೆ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನವು 18 ಸಾವಿರ ರೂಪಾಯಿಯಿಂದ 26 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ.

ಸರ್ಕಾರವು ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಣೆ ಮಾಡುವ ನಿರ್ಧಾರವನ್ನು ಮಾಡಿದೆ. ಶೀಘ್ರವೇ ಡಿಎ ಹೆಚ್ಚಳವಾಗಲಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಸರ್ಕಾರದ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫಿಟ್‌ಮೆಂಟ್ ಅಂಶ ಎಷ್ಟಿದೆ ನೋಡಿ
ಸಾಮಾನ್ಯ ಫಿಟ್‌ಮೆಂಟ್ ಅಂಶವು ಪ್ರಸ್ತುತ ಶೇಕಡ 2.57ರಷ್ಟಿದೆ. ಅಂದರೆ ಯಾವುದೇ ಸರ್ಕಾರಿ ಉದ್ಯೋಗಿಯ ಮೂಲ ಆದಾಯವು 15,500 ರೂಪಾಯಿ ಎಂದಾದರೆ 4200 ಗ್ರೇಡ್ ಪೇ ಆಗಿರಲಿದೆ. ಆತನ ಒಟ್ಟು ವೇತನ ಪ್ರಮಾಣ 15,500×2.57 ಅಥವಾ 39,835 ರೂಪಾಯಿ ಆಗಿರುತ್ತದೆ.
6ನೇ ಕೇಂದ್ರ ವೇತನ ಆಯೋಗವು 1.86 ರೆಷಿಯೋ ಫಿಟ್‌ಮೆಂಟ್ ಅಂಶವನ್ನು ಶಿಫಾರಸು ಮಾಡುತ್ತದೆ. ಆದರೆ ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಏರಿಕೆ ಮಾಡಬೇಕು ಎಂಬ ಆಗ್ರಹವನ್ನು ಮಾಡುತ್ತಿದ್ದಾರೆ. ಈ ಬೆಲೆ ಏರಿಕೆಯು ಕನಿಷ್ಠ ವೇತನವನ್ನು 18,000 ರೂಪಾಯಿಯಿಂದ 26,000 ರೂಪಾಯಿಗೆ ಹೆಚ್ಚಳ ಮಾಡಲಿದೆ.
ತುಟ್ಟಿಭತ್ಯೆ ಏರಿಕೆ
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಏರಿಕೆಯು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಈ ವರ್ಷದ ಜುಲೈನಲ್ಲಿ ತುಟ್ಟಿಭತ್ಯೆಯನ್ನು ಇನ್ನೂ ಶೇಕಡ 4ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಕಳೆದ ಬಾರಿಗೆ ಡಿಎಯನ್ನು ಮಾರ್ಚ್‌ನಲ್ಲಿ ಶೇಕಡ 4ರಷ್ಟು ಏರಿಕೆ ಮಾಡಲಾಗಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ. ಇದಕ್ಕೂ ಮೊದಲು, ಡಿಎಯನ್ನು ಸೆಪ್ಟೆಂಬರ್ 2022 ರಲ್ಲಿ ಶೇಕಡ 4ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಜುಲೈ 2022 ರಿಂದ ಜಾರಿಗೆ ಬಂದಿದೆ.
ಮಾಧ್ಯಮಗಳ ವರದಿ ಪ್ರಕಾರ ಫಿಟ್‌ಮೆಂಟ್ ಅಂಶ ಮಾತ್ರವಲ್ಲದೆ ಸರ್ಕಾರವು ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಅನ್ನು ಶೀಘ್ರ ಏರಿಕೆ ಮಾಡಲಿದೆ.












Click it and Unblock the Notifications