ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7th Pay Commission: ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಶುಭ ಸುದ್ದಿ

|
Google Oneindia Kannada News

ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಈಗ ಹೊಸ ವರ್ಷದ ವೇಳೆಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡುವ ನಿರೀಕ್ಷೆಯಿದೆ.

ಕೇಂದ್ರ ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ. ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳವಾಗುವುದರಿಂದ ಮುಂದಿನ ಕಂತಿನ ಡಿಎ ಹೆಚ್ಚಳ ಯಾವಾಗ ಎಂಬ ಕುತೂಹಲ ಮೂಡಿದೆ.

ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?

ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಿದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್‌ ಎರಡು ತಿಂಗಳ ಡಿಎ ಬಾಕಿಯನ್ನು ಪಡೆದಿದ್ದಾರೆ. ಡಿಎ ಹೆಚ್ಚಳವು ಜುಲೈ 1, 2022 ರಿಂದ ಜಾರಿ ಮಾಡಲಾಗಿದೆ. ಮತ್ತೊಮ್ಮೆ ಡಿಎ ಹೆಚ್ಚಳದ ಬಗ್ಗೆ ಇನ್ನೇನು ಮಾಹಿತಿ ಇದೆ ತಿಳಿಯಲು ಮುಂದೆ ಓದಿ...

7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ

7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ

ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದ ನಂತರ, ಅಸ್ಸಾಂ, ಹರ್ಯಾಣ, ಉತ್ತರ ಪ್ರದೇಶ, ಒಡಿಶಾ, ಕರ್ನಾಟಕ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು 7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ ತಮ್ಮ ರಾಜ್ಯ ನೌಕರರ ಡಿಎ ಹೆಚ್ಚಿಸಿವೆ. ಇದೀಗ ದೀಪಾವಳಿ ಹಬ್ಬ ಮುಗಿದು ಡಿಎ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರಿ ನೌಕರರು ಮುಂದಿನ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ಡಿಎ ಕೂಡಾ ಇದೇ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಎಷ್ಟು ಡಿಎ ಹೆಚ್ಚಳ

ಎಷ್ಟು ಡಿಎ ಹೆಚ್ಚಳ

ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮಾಣ, AICPI ಸೂಚ್ಯಂಕ ಪ್ರಮಾಣ, 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಡಿಎ ಹೆಚ್ಚಳ ಪ್ರಮಾಣ ನಿಗದಿಯಾಗಲಿದೆ. 2022ರ ವರ್ಷಾಂತ್ಯಕ್ಕೆ ಅಥವಾ 2023ರ ಆರಂಭದಲ್ಲೇ ಸಿಹಿ ಸುದ್ದಿ ನಿರೀಕ್ಷಿಸಬಹುದು ಎಂಬ ಸುದ್ದಿಯಿದೆ. ಆದರೆ. ಇತ್ತೀಚಿನ ಮಾಹಿತಿಯಂತೆ ಜನವರಿ ಆರಂಭದಲ್ಲಿ ಈ ಕುರಿತಂತೆ ಘೋಷಣೆಯಾಗಲಿದೆ. ಆದರೆ, ಒಂದೆರಡು ತಿಂಗಳುಗಳ ಬಳಿಕ ಡಿಎ ಹೆಚ್ಚಳ ಲಭ್ಯವಾಗಲಿದೆ.

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಜೊತೆಗೆ ಡಿಎ ಪರಿಹಾರ ಮೊತ್ತ, ಬಾಕಿ ಮೊತ್ತ ಎಲ್ಲವನ್ನು ನಿರೀಕ್ಷಿಸಬಹುದು. ಇದರ ಜೊತೆಗೆ ಸಂಬಳ ಹೆಚ್ಚಳವನ್ನು ಪಡೆಯುತ್ತಾರೆ.

ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ

ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ.

ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ಇಂದಿನ ಸುದ್ದಿಯಂತೆ ಉದ್ಯೋಗಿಗಳು ಸಂಬಳದಲ್ಲಿ ಕನಿಷ್ಠ 720 ರು ಪ್ರತಿ ತಿಂಗಳಿನಿಂದ ಹಿಡಿದು 2276 ಸರಾಸರಿ ಗರಿಷ್ಠ ಏರಿಕೆ ಕಾಣಬಹುದಾಗಿದೆ

English summary
7th Pay Commission: According to reports Govt employees dearness allowance will rise to 42 per cent if the employee DA is hiked by 4 per cent likely in January 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X