• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್‌ನಲ್ಲಿ 30ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ: ವರದಿ

|
Google Oneindia Kannada News

ಕಯಾಹ್ (ಮ್ಯಾನ್ಮಾರ್‌), ಡಿಸೆಂಬರ್ 26: ಮ್ಯಾನ್ಮಾರ್‌ನಲ್ಲಿ ಶುಕ್ರವಾರದಂದು 30ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು, ಹಿರಿಯರು ಕೊಲ್ಲಲ್ಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು, ಮಾಧ್ಯಮ ವರದಿಗಳು ಮತ್ತು ಸ್ಥಳೀಯ ಮಾನವ ಹಕ್ಕುಗಳ ಗುಂಪು ತಿಳಿಸಿದೆ. ಇದು ಭಯೋತ್ಪಾಕರ ವಿರುದ್ಧ ನಡೆದ ದಾಳಿಯಲ್ಲ ಬದಲಿಗೆ ನಾಗರೀಕರ ಹತ್ಯೆ ಎಂದು ಕರೆಯಲಾಗಿದೆ.

ಮ್ಯಾನ್ಮಾರ್‌ನ ಸಂಘರ್ಷ ಪೀಡಿತ ಕಯಾಹ್ ರಾಜ್ಯದಲ್ಲಿ ಶುಕ್ರವಾರ ಮಹಿಳೆಯರು, ಮಕ್ಕಳು, ಹಿರಿಯರು ಸಹಿತ 30ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿದೆ. ಮೃತದೇಹಗಳು ಸಟ್ಟುಹಾಕಲಾಗಿದೆ ಎಂದು ಸ್ಥಳೀಯರು ಹಾಗೂ ಮಾನವ ಹಕ್ಕು ಹೋರಾಟಗಾರರ ಸಂಘಟನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾನ್ಮಾರ್‌ನ ಸೇನಾಡಳಿತದಿಂದ ಹತ್ಯೆಯಾದ ವೃದ್ಧರು, ಮಹಿಳೆಯರು, ಮಕ್ಕಳ ಸಹಿತ ಹಲವರ ಮೃತದೇಹ ಸುಟ್ಟುಹಾಕಿದ ಸ್ಥಿತಿಯಲ್ಲಿ ಮೊ ಸೊ ಗ್ರಾಮದಲ್ಲಿ ಪತ್ತೆಯಾಗಿದೆ. ಇವರೆಲ್ಲಾ ಸಂಘರ್ಷದಿಂದ ನೆಲೆ ಕಳೆದುಕೊಂಡ ಜನರು ಎನ್ನಲಾಗುತ್ತಿದೆ. ಈ ಅಮಾನವೀಯ ಕೃತ್ಯವನ್ನು ಖಂಡನೀಯ ಎಂದು ಕರೆನ್ನಿ ಮಾನವ ಹಕ್ಕುಗಳ ಸಂಘಟನೆ ಶನಿವಾರ ಹೇಳಿದೆ. ಸುಟ್ಟುಹೋಗಿರುವ ಲಾರಿಗಳಲ್ಲಿ ಬೆಂಕಿಯಲ್ಲಿ ಬೆಂದು ಹೋಗಿರುವ ಮೃತದೇಹಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮೊ ಸೊ ಗ್ರಾಮದಲ್ಲಿ ಸೇನೆಯ ವಿರೋಧಿಗಳ ಸಶಸ್ತ್ರ ಗುಂಪೊಂದು 7 ವಾಹನಗಳಲ್ಲಿ ಸಂಚರಿಸುತ್ತಿತ್ತು. ತಪಾಸಣೆಗೆ ನಿಲ್ಲಿಸಲು ಸೂಚಿಇಸಿದರೂ ವಾಹನದಲ್ಲಿದ್ದವರು ನಿರಾಕರಿಸಿದಾಗ ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ಅನಿರ್ದಿಷ್ಟ ಸಂಖ್ಯೆಯ ಸಶಸ್ತ್ರ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮ್ಯಾನ್ಮಾರ್‌ನ ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರ ಸ್ವಾಮ್ಯದ ಮಾಧ್ಯಮ ವರದಿ ನೀಡಿದೆ. ಸೇನೆಯಿಂದ ಹತರಾದವರು ಸೇನಾಪಡೆಯನ್ನು ವಿರೋಧಿಸುತ್ತಿರುವ 'ದಿ ಕರೆನ್ನಿ ನ್ಯಾಷನಾಲಿಟೀಸ್ ಡಿಫೆನ್ಸ್ ಫೋರ್ಸ್‌ನ ಸದಸ್ಯರಲ್ಲ, ನಾಗರಿಕರು ಎಂದು ಸಂಘಟನೆ ಹೇಳಿದೆ. ಮೃತರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದ್ದು ಮೃತದೇಹಗಳನ್ನು ಕಂಡಾಗ ನಮಗೆ ಅಘಾತವಾಯಿತು ಎಂದು ಸಂಘಟನೆಯ ಕಮಾಂಡರ್ ಹೇಳಿದ್ದಾರೆ.

ಸುಮಾರು 11 ತಿಂಗಳ ಹಿಂದೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಮಿಲಿಟರಿಯು ಉರುಳಿಸಿದಾಗಿನಿಂದ ಮ್ಯಾನ್ಮಾರ್ ನಲ್ಲಿ ದಾಳಿ ಪ್ರತಿದಾಳಿಗಳು ನಡೆಯುತ್ತಿವೆ. ನವೆಂಬರ್ ಚುನಾವಣೆಯಲ್ಲಿ ವಂಚಿಸುವ ಮೂಲಕ ಈ ಪಕ್ಷವು ಗೆದ್ದಿದೆ ಎನ್ನಲಾಗುತ್ತಿದೆ. ಆದರೂ ಮತದಾನ ನ್ಯಾಯಯುತವಾಗಿತ್ತು ಎಂದು ಅಂತಾರಾಷ್ಟ್ರೀಯ ವೀಕ್ಷಕರು ಹೇಳಿದ್ದಾರೆ. ಇದರ ಬೆನ್ನಲ್ಲೇ ದಾಳಿ ಪ್ರತಿದಾಳಿಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗಿವೆ.

ಕಳೆದ ವಾರ ಗಡಿಯ ಸಮೀಪವಿರುವ ಕರೆನ್ ನ್ಯಾಷನಲ್ ಯೂನಿಯನ್ (ಕೆಎನ್‌ಯು) ನಿಯಂತ್ರಿತ ಪ್ರದೇಶದ ಮೇಲೆ ಮ್ಯಾನ್ಮಾರ್ ಮಿಲಿಟರಿ ವೈಮಾನಿಕ ದಾಳಿಗಳನ್ನು ನಡೆಸಿತು. ಇದಾದ ನಂತರ ಸಾವಿರಾರು ಜನರನ್ನು ಥೈಲ್ಯಾಂಡ್‌ಗೆ ಪಲಾಯನ ಮಾಡಿದರು. ಕೆರಳಿದ ನಾಗರಿಕರು ಮತ್ತು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆಯಿಂದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶಾದ್ಯಂತ ಅನೇಕ ಸ್ಥಳೀಯ ಪ್ರತಿರೋಧ ಶಕ್ತಿಗಳು ಹುಟ್ಟಿಕೊಂಡಿವೆ.

ಆದರೆ ಸೇನೆ ಅಪರಿಚಿತ ಉಗ್ರರನ್ನು ಹತ್ಯೆ ಮಾಡಿದ್ದೇವೆ. ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಏಳು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ನಾವು ಹೇಳಿದರೂ ವಾಹನಗಳನ್ನು ನಿಲ್ಲಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಗುಂಡಿನ ದಾಳಿ ನಡೆಸಲಾಯಿತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮ್ಯಾನ್ಮಾರ್‌ ಮಿಲಿಟರಿಯು ಥಾಯ್‌ ಗಡಿ ಸಮೀಪದಲ್ಲಿ ಬಂಡುಕೋರರ ಗುಂಪಿನೊಂದಿಗೆ ಘರ್ಷಣೆ ನಡೆಸುತ್ತಿದೆ.

ದಾಳಿ ವೇಳೆ ರಾಕೆಟ್‌ ಚಾಲಿತ ಗ್ರೆನೇಡ್‌ಗಳು ದಾರಿ ತಪ್ಪಿ ನಾಗರಿಕರ ಕೆಲವು ಮನೆಗಳನ್ನು ಹಾನಿಗೊಳಿಸಿವೆ ಎಂದು ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳಿಂದ ಮ್ಯಾನ್ಮಾರ್‌ ಗಡಿ ಭಾಗಗಳಲ್ಲಿ ಮಿಲಿಟರಿ ದಾಳಿ ವ್ಯಾಪಕವಾಗಿದೆ. ಇದರಿಂದ ಜನವಸತಿಗಳಿಗೆ ಸಮಸ್ಯೆಯಾಗುತ್ತಿದ್ದು, ಜನರು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಮಿಲಿಟರಿಯು ಅನೇಕ ವಿರೋಧಿಗಳನ್ನು ಕಾನೂನುಬಾಹಿರಗೊಳಿಸಿದೆ. ಅವರನ್ನು ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದು ಹೆಸರಿಸಿದೆ. ಲಾಬಿ ಮಾಡಲು ಮತ್ತು ಭಯೋತ್ಪಾದಕತೆಯನ್ನು ಬಲಪಡಿಸುವುದನ್ನು ತಡೆಯಲು ಪ್ರಯತ್ನಿಸುತ್ತದೆ.

Recommended Video

   Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada
   English summary
   More than 30 people, including women and children, were killed and their bodies burnt in Myanmar's conflict-torn Kayah state on Friday, according to a local resident, media reports and a local human rights group.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X