• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್: ಸೂಕಿ ಆಪ್ತೆ ಸೇರಿ 5,744 ಯುದ್ಧ ಕೈದಿಗಳ ಬಿಡುಗಡೆ

|
Google Oneindia Kannada News

ನವದೆಹಲಿ, ನವೆಂಬರ್ 17: ಮ್ಯಾನ್ಮಾರ್ ಜುಂಟಾ ಎಂದೂ ಕರೆಯಲ್ಪಡುವ ಮ್ಯಾನ್ಮಾರ್ ಸೇನೆಯು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ದೇಶದ ರಾಷ್ಟ್ರೀಯ ವಿಜಯ ದಿನದ ಸಂದರ್ಭದಲ್ಲಿ ಮ್ಯಾನ್ಮಾರ್ ಜುಂಟಾ ಕೈದಿಗಳ ಕ್ಷಮಾದಾನವನ್ನು ಘೋಷಿಸಿದೆ. 1 ಫೆಬ್ರವರಿ 2021ರಂದು ಸರ್ಕಾರದ ದಂಗೆಯಿಂದ ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತ ಜಾರಿಯಲ್ಲಿದೆ. ಅಂದಿನಿಂದ ಅನೇಕ ಜನರು ಜೈಲು ಪಾಲಾಗಿದ್ದಾರೆ. ಆದರೆ, ಈಗ ಮ್ಯಾನ್ಮಾರ್‌ನ ರಾಷ್ಟ್ರೀಯ ವಿಜಯ ದಿನವನ್ನು ಗುರುತಿಸಲು ಸೇನೆಯು ಈ ದಿನದಂದು ಸುಮಾರು 6,000 ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ.

ಮ್ಯಾನ್ಮಾರ್ ಸೇನೆಯು ಒಟ್ಟು 5,744 ಕೈದಿಗಳನ್ನು ಬಿಡುಗಡೆ ಮಾಡಲಿದೆ. ಈ ಕೈದಿಗಳಲ್ಲಿ ಮಾಜಿ ಯುಕೆ ರಾಯಭಾರಿ ವಿಕ್ಕಿ ಬೌಮನ್, ಆಸ್ಟ್ರೇಲಿಯಾದ ಆರ್ಥಿಕ ಸಲಹೆಗಾರ ಸೀನ್ ಟರ್ನೆಲ್ ಮತ್ತು ಜಪಾನಿನ ಪತ್ರಕರ್ತ ಟೊರು ಕುಬೊಟಾ ಕೂಡ ಸೇರಿದ್ದಾರೆ. ಈ ಕೈದಿಗಳಲ್ಲಿ 600-700 ಮಹಿಳೆಯರಿದ್ದಾರೆ. ಇನ್ನು ಈ ಮೂವರನ್ನೂ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುವುದು. ಆದರೆ, ಸೇನಾ ವಕ್ತಾರರು ಅದರ ಬಿಡುಗಡೆಯ ನಿಖರ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇದರೊಂದಿಗೆ ಜೈಲು ಪಾಲಾದ ಹಿಂದಿನ ಸರ್ಕಾರದ ಅಧಿಕಾರಿಗಳನ್ನೂ ಬಿಡುಗಡೆ ಮಾಡಲಾಗುವುದು ಎಂದು ಸೈನ್ಯ ಅಧಿಕಾರಿಗಳು ಹೇಳಿದ್ದಾರೆ.

Breaking News: ಮ್ಯಾನ್ಮಾರ್-ಭಾರತದ ಗಡಿಯಲ್ಲಿ ಪ್ರಬಲ ಭೂಕಂಪನ Breaking News: ಮ್ಯಾನ್ಮಾರ್-ಭಾರತದ ಗಡಿಯಲ್ಲಿ ಪ್ರಬಲ ಭೂಕಂಪನ

ಆಂಗ್ ಸಾನ್ ಸೂಕಿ ಅವರ ಉಚ್ಚಾಟಿತ ಸರ್ಕಾರದ ಮಾಜಿ ಬ್ರಿಟಿಷ್ ರಾಯಭಾರಿ, ಜಪಾನಿನ ಪತ್ರಕರ್ತ ಮತ್ತು ಆಸ್ಟ್ರೇಲಿಯಾದ ಸಲಹೆಗಾರ ಸೇರಿದಂತೆ 700 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಮ್ಯಾನ್ಮಾರ್‌ನ ಜುಂಟಾ ಗುರುವಾರ ಹೇಳಿದೆ.

ಮಾಜಿ ಬ್ರಿಟಿಷ್ ರಾಯಭಾರಿ ವಿಕ್ಕಿ ಬೌಮನ್, ಆಸ್ಟ್ರೇಲಿಯಾದ ಅರ್ಥಶಾಸ್ತ್ರ ಸಲಹೆಗಾರ ಸೀನ್ ಟರ್ನೆಲ್ ಮತ್ತು ಜಪಾನಿನ ಪತ್ರಕರ್ತ ಟೊರು ಕುಬೋಟಾ ಅವರನ್ನು "ರಾಷ್ಟ್ರೀಯ ದಿನವನ್ನು ಗುರುತಿಸಲು ಬಿಡುಗಡೆ ಮಾಡಲಾಗುತ್ತದೆ" ಎಂದು ಮ್ಯಾನ್ಮಾರ್ ಸೇನೆಯ ಹಿರಿಯ ಅಧಿಕಾರಿ ಅಂತಾರಾಷ್ಟ್ರೀಯ ಎಎಫ್‌ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

English summary
Former British envoy Vicky Bowman, Australian economics adviser Sean Turnell and Japanese journalist Toru Kubota will be released to mark National Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X