• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭ್ರಷ್ಟಾಚಾರ ; ಆಂಗ್ ಸಾನ್ ಸೂಕಿಗೆ ಮತ್ತೆ 6 ವರ್ಷ ಜೈಲು

|
Google Oneindia Kannada News

ನಾಲ್ಕು ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಮಿಲಿಟರಿ ಆಡಳಿತದ ಮ್ಯಾನ್ಮಾರ್‌ನ ನ್ಯಾಯಾಲಯವು ಮ್ಯಾನ್ಮಾರ್‌ನ ಉಚ್ಚಾಟಿತ ಪ್ರಧಾನಿ ಆಂಗ್ ಸಾನ್ ಸೂಕಿ ಅವರಿಗೆ ಸೋಮವಾರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

77 ವರ್ಷ ವಯಸ್ಸಿನ ನೊಬೆಲ್ ಪ್ರಶಸ್ತಿ ವಿಜೇತೆ ವಿರುದ್ಧ ಚುನಾವಣಾ ಅಕ್ರಮ, ಭ್ರಷ್ಟಾಚಾರ ಸೇರಿದಂತೆ ಕನಿಷ್ಠ 18 ಆರೋಪಗಳ್ನು ಹೊರಿಸಲಾಗಿದೆ. ಇದು ಸುಮಾರು 190 ವರ್ಷಗಳ ಗರಿಷ್ಠ ಜೈಲು ಶಿಕ್ಷೆಯನ್ನು ಹೊಂದಿದೆ.

ಈ ಆರೋಪಗಳನ್ನು ಆಂಗ್ ಸಾನ್ ಸೂಕಿ ಅಸಂಬದ್ಧವೆಂದು ಕರೆದಿದ್ದು, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

ಆರೋಗ್ಯ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಅವರು ಸ್ಥಾಪಿಸಿದ ಸಂಸ್ಥೆಯಾದ ದಾವ್ ಖಿನ್ ಕಿ ಫೌಂಡೇಶನ್‌ನಿಂದ ಮನೆ ನಿರ್ಮಿಸಲು ಮತ್ತು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿದ್ದಕ್ಕಾಗಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.

ರಾಜಧಾನಿ ನೈಪಿಟಾವ್‌ನ ಜೈಲಿನಲ್ಲಿ ಒಂಟಿಯಾಗಿ ಬಂಧನದಲ್ಲಿರುವ ಆಂಗ್ ಸಾನ್ ಸೂಕಿ ಅವರು ಈಗಾಗಲೇ ಇತರ ಪ್ರಕರಣಗಳಲ್ಲಿ 11 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

Corruption Cases: Myanmar Court Sentenced Aung San Suu Kyi to Six years in Prison

ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ಮ್ಯಾನ್ಮಾರ್‌ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿ, ಮ್ಯಾನ್ಮಾರ್‌ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು.

ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿ, ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ. ಆಂಗ್ ಸಾನ್ ಸೂಕಿ ಅವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿಶ್ವಸಂಸ್ಥೆಯು ಕೂಡ ಸೂಕಿ ಅವರ ಬಂಧನದ ಬಗ್ಗೆ ಹಲವು ಬಾರಿ ಹಸ್ತಕ್ಷೇಪ ಮಾಡಿದೆ. ಆದರೆ, ಸೂಕಿ ಅವರಿಗೆ ಸ್ವತಂತ್ರ ನ್ಯಾಯಾಂಗವು ಸರಿಯಾದ ನ್ಯಾಯ ನೀಡುತ್ತಿದೆ. ವಿದೇಶಿಗರ ಹಸ್ತಕ್ಷೇಪ ಬೇಕಿಲ್ಲ ಎಂದು ವಿಶ್ವಸಂಸ್ಥೆ ವಿರುದ್ಧ ಸೇನಾ ಸರಕಾರ ಕಿಡಿಕಾರಿದೆ.

English summary
corruption cases: Myanmar court sentenced deposed leader Aung San Suu Kyi to six years in prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X