RCB: ಹಿಮಾಲಯದ ತಪ್ಪಲಿನಲ್ಲಿ ಆರ್‌ಸಿಬಿ-ಪಂಜಾಬ್‌ ಕಿಂಗ್ಸ್‌ ಹೈವೋಲ್ಟೇಜ್ ಪಂದ್ಯ: ಟಿಕೆಟ್ ದರ ದುಪ್ಪಟ್ಟು, ಹೋಟೆಲ್‌ಗಳು ಫುಲ್..

RCB Vs PBKS Match Ticket: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಮೇ 17) ಮಧ್ಯಾಹ್ನ ನಡೆಯಲಿರುವ ರೋಚಕ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಪ್ರೀಮಿಯಂ ಟಿಕೆಟ್‌ಗಳು ಪ್ರತಿ ಸೀಟಿಗೆ 3,000 ರೂಪಾಯಿನಿಂದ 50,000 ರೂಪಾಯಿವರೆಗೆ ಮಾರಾಟವಾಗುತ್ತಿವೆ ಎಂದು ವರದಿ ಆಗಿದೆ.

ಧರ್ಮಶಾಲಾದ ಈ ಸುಂದರ ಕ್ರೀಡಾಂಗಣವು ಸೀಮಿತ ಆಸನ ಸಾಮರ್ಥ್ಯವನ್ನು ಹೊಂದಿದೆ. ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿರುವುದು ಮತ್ತು ಪ್ಲೇ-ಆಫ್ ಹಂತಕ್ಕೇರಲು ಈ ಗೆಲುವು ನಿರ್ಣಾಯಕವಾಗಿರುವುದು ಈ ಪಂದ್ಯದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಲಭ್ಯವಿರುವ ಟಿಕೆಟ್‌ಗಳಿಗಿಂತ ಬೇಡಿಕೆಯು ಹೆಚ್ಚಾಗಿದೆ.

RCB Vs PBKS IPL 2026 Dharamshala Match Ticket Prices Soar Up to Rs 50 000 Know Statistics

ದುಪ್ಪಟ್ಟಾಯ್ತು ಟಿಕೆಟ್ ದರ

23,000 ಆಸನಗಳ ಸಾಮರ್ಥ್ಯವಿರುವ ಈ ಕ್ರೀಡಾಂಗಣದಲ್ಲಿ ಟಿಕೆಟ್‌ಗಳಿಗೆ ಹಿಂದೆಂದೂ ಕಾಣದಂತಹ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಹಾಸ್ಪಿಟಾಲಿಟಿ ಲಾಂಜ್‌ಗಳು, ಪೆವಿಲಿಯನ್ ಸೀಟುಗಳು ಮತ್ತು ಕಾರ್ಪೊರೇಟ್ ಬಾಕ್ಸ್‌ಗಳಿಗಾಗಿ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಉತ್ತಮ ಸೌಕರ್ಯಗಳನ್ನು ಹೊಂದಿರುವ ಈ ವಿಭಾಗಗಳ ಟಿಕೆಟ್ ದರ ಗರಿಷ್ಠ 50,000 ರೂಪಾಯಿಗಳವರೆಗೆ ಹೆಚ್ಚಾಗಿದೆ

ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಲು ಕಾರಣ ಏನು?

ಇಲ್ಲಿ ಅತ್ಯುತ್ತಮ ವೀಕ್ಷಣೆ ಮತ್ತು ಆಹಾರದ ವ್ಯವಸ್ಥೆ ಇರುವುದರಿಂದ ಪ್ರೇಕ್ಷಕರು ಈ ವಿಭಾಗಕ್ಕೆ ಹೆಚ್ಚಿಮ ಆದ್ಯತೆ ನೀಡುತ್ತಿದ್ದಾರೆ. ಕ್ರೀಡಾಂಗಣವು ಚಿಕ್ಕದಾಗಿರುವುದರಿಂದ ಪ್ರೀಮಿಯಂ ವಿಭಾಗದ ಟಿಕೆಟ್‌ಗಳು ಮಾರಾಟ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಭರ್ತಿಯಾಗುತ್ತಿವೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ವಿಶ್ವದ ಅತ್ಯಂತ ಸುಂದರ ಕ್ರೀಡಾಂಗಣಗಳಲ್ಲಿ ಒಂದೆಂದು ಹೆಸರುವಾಸಿಯಾಗಿದ್ದು, ಇಲ್ಲಿ ಪಂದ್ಯ ನೋಡುವುದೇ ಒಂದು ಸಂಭ್ರಮ.

ಕ್ರೀಡಾಂಗಣದ ಪ್ರತಿಯೊಂದು ಸ್ಟ್ಯಾಂಡ್‌ನಿಂದಲೂ ಪ್ರೇಕ್ಷಕರು ಹಿಮಾಲಯದ ಭವ್ಯ ಪರ್ವತಗಳ ಸುಂದರ ನೋಟವನ್ನು ಸವಿಯಬಹುದು. ಆದರೂ ಹಾಸ್ಪಿಟಾಲಿಟಿ ವಿಭಾಗಗಳು ಮತ್ತು ಕಾರ್ಪೊರೇಟ್ ಎನ್‌ಕ್ಲೋಸರ್ಸ್ ಅಭಿಮಾನಿಗಳು ಹಾಗೂ ಉದ್ಯಮಿಗಳ ನಡುವೆ ಅತ್ಯಂತ ಹೆಚ್ಚಿನ ಬೇಡಿಕೆಯ ವಿಭಾಗಗಳಾಗಿ ಹೊರಹೊಮ್ಮಿವೆ. ಈ ಕಾರಣಕ್ಕಾಗಿಯೇ ಈ ಪಂದ್ಯವನ್ನು ಈ ಸೀಸನ್‌ನ ಹಾಟೆಸ್ಟ್ ಇವೆಂಟ್ ಎಂದು ಕರೆಯಲಾಗುತ್ತಿದೆ.

ಪರ್ವತಗಳ ಸುಂದರ ನೋಟದೊಂದಿಗೆ ಅತ್ಯುತ್ತಮ ಸೌಕರ್ಯಗಳನ್ನು ಬಯಸುವವರು ಪ್ರೀಮಿಯಂ ಟಿಕೆಟ್‌ಗಳಿಗಾಗಿ ಮುಗಿಬೀಳುತ್ತಿದ್ದಾರೆ. ದೊಡ್ಡ ಉದ್ಯಮ ಸಂಸ್ಥೆಗಳು ತಮ್ಮ ಅತಿಥಿಗಳಿಗಾಗಿ ಕಾರ್ಪೊರೇಟ್ ಬಾಕ್ಸ್‌ಗಳನ್ನು ಬುಕ್ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ. ಧರ್ಮಶಾಲಾದ ತಂಪಾದ ವಾತಾವರಣ ಮತ್ತು ಐಪಿಎಲ್‌ನ ಬಿಸಿ ಏರಿರುವುದು ಈ ಪಂದ್ಯದ ಟಿಕೆಟ್‌ಗಳಿಗೆ ಬಂಗಾರದ ಬೆಲೆ ತಂದುಕೊಟ್ಟಿದೆ.

ಹೋಟೆಲ್ ಬಾಡಿಗೆ ಹೆಚ್ಚಳ

ಧರ್ಮಶಾಲಾ ಮತ್ತು ಮೆಕ್ಲಿಯೋಡ್‌ಗಂಜ್‌ನಲ್ಲಿ ಎಲ್ಲಾ ಹೋಟೆಲ್‌ಗಳು ಈಗಾಗಲೇ ಭರ್ತಿಯಾಗಿವೆ. ಬೇಡಿಕೆ ಹೆಚ್ಚಾದ ಕಾರಣ ಹೋಟೆಲ್ ಬಾಡಿಗೆಗಳು ದುಪ್ಪಟ್ಟಾಗಿವೆ. ಕೊಠಡಿಗಳ ಕೊರತೆಯಿಂದಾಗಿ ಅನೇಕರು ಕಾಂಗ್ರಾ ಮತ್ತು ಪಾಲಂಪುರಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಕಾಂಗ್ರಾ ವಿಮಾನ ನಿಲ್ದಾಣದಿಂದ ಸ್ಟೇಡಿಯಂಗೆ ಹೋಗುವ ಟ್ಯಾಕ್ಸಿ ದರಗಳು ಗಗನಕ್ಕೇರಿವೆ. ಪಂದ್ಯದ ದಿನದ ಮುಂಗಡ ಬುಕ್ಕಿಂಗ್‌ಗಳು ಒಂದು ವಾರ ಮುಂಚಿತವಾಗಿಯೇ ಆರಂಭವಾಗಿವೆ.

ವಿಮಾನ ಟಿಕೆಟ್ ದರಗಳ ಏರಿಕೆ

ಸಾಮಾನ್ಯವಾಗಿ 5,000ರಿಂದ 7,000 ರೂಪಾಯಿ ಇರುವ ವಿಮಾನ ಟಿಕೆಟ್ ದರಗಳು ಪಂದ್ಯದ ಸಮಯದಲ್ಲಿ 18,000 ರೂಪಾಯಿನಿಂದ 24,000 ರೂಪಾಯಿವರೆಗೆವರೆಗೆ ತಲುಪಿವೆ. ಅಂದರೆ ಸುಮಾರು ಮೂರು ಪಟ್ಟು ಹೆಚ್ಚಳ ಆದಂತಾಗಿದೆ. ಕಾಂಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸೀಮಿತವಾಗಿರುವುದು ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ದಿನಕ್ಕೆ 8-10 ವಿಮಾನಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಇಲ್ಲಿ ಕೇವಲ 23,000 ಆಸನಗಳ ಸಾಮರ್ಥ್ಯವಿರುವುದರಿಂದ ಟಿಕೆಟ್‌ಗಳು ಕೇವಲ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ ಎಂದು ತಿಳಿದುಬಂದಿದೆ. ಕ್ರಿಕೆಟ್ ಪ್ರೇಮಿಗಳಿಗೆ ಇದು ಕೇವಲ ಪಂದ್ಯವಲ್ಲ, ಹಿಮಾಲಯದ ತಪ್ಪಲಿನಲ್ಲಿ ಐಪಿಎಲ್ ಸಂಭ್ರಮವನ್ನು ಸವಿಯುವ ಒಂದು ಸುಂದರ ಅನುಭವ ಅಂದ್ರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+