Cyclone Asani : ಅಂಡಮಾನ್ ಬಳಿಕ ಮ್ಯಾನ್ಮಾರ್‌ನತ್ತ ಅಸನಿ ಚಂಡಮಾರುತ: IMD

ನವದೆಹಲಿ, ಮಾರ್ಚ್ 21: ಅಂಡಮಾನ್ ದ್ವೀಪಗಳ ನಿವಾಸಿಗಳಿಗೆ ದೊಡ್ಡ ನೆಮ್ಮದಿ ಸುದ್ದಿಯನ್ನು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ನೀಡಿದ್ದಾರೆ. ಚಂಡಮಾರುತ ಅಸನಿ ಅಂಡಮಾನ್ ದ್ವೀಪದಲ್ಲಿ ಅಪ್ಪಳಿಸುವುದಿಲ್ಲ(Landfall), ಭಾರಿ ಹಾನಿಗೊಳಿಸುವ ಮುನ್ಸೂಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಂಡಮಾರುತವು ಅಂಡಮಾನ್ ದ್ವೀಪಗಳ ಉದ್ದಕ್ಕೂ ಸಾಗಿ, ಮ್ಯಾನ್ಮಾರ್ ಮತ್ತು ದಕ್ಷಿಣ ಬಾಂಗ್ಲಾದೇಶದ ಕರಾವಳಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ಮೊಹಾಪಾತ್ರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಆದರೆ, ಚಂಡಮಾರುತ ಈಗಾಗಲೇ ತನ್ನ ಪ್ರಭಾವ ಬೀರಿದ್ದು, ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ಪ್ರಬಲ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದಲ್ಲಿ ಮಾರ್ಚ್ 24ರ ತನಕ ಮಳೆ ಸುರಿಯಲಿದೆ. ದಕ್ಷಿಣ ಅಂಡಮಾನ್ ದ್ವೀಪದಲ್ಲಿ ಸೋಮವಾರ ಭಾರಿ ಮಳೆ ನಿರೀಕ್ಷಿಸಬಹುದು ಎಂದು ಮೊಹಾಪಾತ್ರ ತಿಳಿಸಿದ್ದಾರೆ.

ಆಗ್ನೇಯ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಉತ್ತರದ ಕಡೆಗೆ ಚಲಿಸಿದೆ. ಸೋಮವಾರ ಸಂಜೆ ವೇಳೆಗೆ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಗಳಿವೆ. ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ: IMD ವಿಜ್ಞಾನಿ ಆರ್‌ಕೆ ಜೆನಮಣಿ ಹೇಳಿದ್ದಾರೆ.

IMD’s latest bulletin on Cyclone Asani, Will Move Off Towards Myanmar

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಸೋಮವಾರದಂದು ಭಾರಿ ಗಾಳಿ ಮಳೆ ಮುನ್ಸೂಚನೆ ಸಿಕ್ಕಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ದ್ವೀಪದ ಕೆಲ ಭಾಗಗಳಲ್ಲಿ ಪ್ರಭಾವ ಬೀರಲಿದ್ದು, ದೇಶದ ಇತರೆ ಪ್ರದೇಶಗಳಲ್ಲಿ ಹೆಚ್ಚಿನ ಪರಿಣಾಮ ಇರುವುದಿಲ್ಲ, ಆದರೆ, ನಾಲ್ಕೈದು ದಿನ ಗಾಳಿ ಮಳೆ ಇರಲಿದೆ.

ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಅಂಡಮಾನ್ ಸೇರಿದಂತೆ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 150 ಸಿಬ್ಬಂದಿ ನಿಯೋಜಿಸಲಾಗಿದೆ. ಅಂಡಮಾನ್ ದ್ವೀಪದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಮಾರ್ಚ್ 22ರ ವೇಳೆಗೆ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ತೆರಳಿ ತನ್ನ ಪ್ರಭಾವ ತಗ್ಗಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+