
ಮ್ಯಾನ್ಮಾರ್‌ನ ಜೇಡ್ ಗಣಿಯಲ್ಲಿ ಭೀಕರ ಭೂಕುಸಿತ, 70ಕ್ಕೂ ಹೆಚ್ಚು ಮಂದಿ ನಾಪತ್ತೆ
ಯಾಂಗೋನ್, ಡಿಸೆಂಬರ್ 22: ಉತ್ತರ ಮ್ಯಾನ್ಮಾರ್‌ನ ಜೇಡ್ ಗಣಿಗಾರಿಕೆ ಸ್ಥಳದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಜೊತೆಗೆ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರ ಮ್ಯಾನ್ಮಾರ್‌ನ ಜೇಡ್ ಗಣಿಯಲ್ಲಿ ಬುಧವಾರ ಭೂಕುಸಿತ ಸಂಭವಿಸಿದ ನಂತರ ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ಸುದ್ದಿ ಸಂಸ್ಥೆ ಎಎನ್‌ಐ ಕ್ಸಿನ್ಹುವಾ ನ್ಯೂಸ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದರೆ ಈ ಅಪಘಾತದಲ್ಲಿ ಎಷ್ಟು ಹಾನಿಯಾಗಿದೆ ಮತ್ತು ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಬಂದಿಲ್ಲ. ಆದರೆ ವರದಿಯ ಪ್ರಕಾರ, ಗಣಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮ್ಯಾನ್ಮಾರ್‌ನ ಜೇಡ್ ಗಣಿಯಲ್ಲಿ ಭೂಕುಸಿತ ಸಂಭವಿಸಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಅತಿವೃಷ್ಟಿಯಿಂದ ಭೂಕುಸಿತ ಉಂಟಾಗಿ ಒಂದು ಭಾಗ ಮುಳುಗಡೆಯಾಗಿತ್ತು. ಭೂಮಿ ಮುಳುಗಿದ್ದರಿಂದ ನೂರಕ್ಕೂ ಹೆಚ್ಚು ಮಂದಿ ಭೂಮಿಯೊಳಗೆ ಸಿಲುಕಿದ್ದು, ಹಲವು ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಮೃತದೇಹಗಳನ್ನು ಹೊರತೆಗೆಯಲು ಸಾಧ್ಯವಾಯಿತು.
ನಾಪತ್ತೆಯಾದವರಲ್ಲಿ ಹೆಚ್ಚಿನವರು ಅಕ್ರಮ ಜೇಡ್ ಗಣಿಗಾರರೆಂದು ನಂಬಲಾಗಿದೆ. ಬುಧವಾರ (21:30 GMT ಮಂಗಳವಾರ) ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ ಕಚಿನ್ ರಾಜ್ಯದ ಹ್ಪಕಾಂತ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಮ್ಯಾನ್ಮಾರ್ ವಿಶ್ವದ ಅತಿದೊಡ್ಡ ಜೇಡ್ ಮೂಲವಾಗಿದೆ ಆದರೆ ಅದರ ಗಣಿಗಳು ವರ್ಷಗಳಲ್ಲಿ ಹಲವಾರು ಅಪಘಾತಗಳನ್ನು ಕಂಡಿವೆ. ತೆರೆದ ಗುಂಡಿಗಳಿಗೆ ಎಸೆಯಲ್ಪಟ್ಟ ಅವಶೇಷಗಳಿಂದ ನದಿ ನೀರು ಉಕ್ಕಿ ಹರಿದು ಭೂಕುಸಿತ ಸಂಭವಿಸಿದೆ ಎಂದು ನಂಬಲಾಗಿದೆ.
ಗಣಿಗಾರಿಕೆಯ ಕಲ್ಲುಮಣ್ಣುಗಳು ದೊಡ್ಡ ಇಳಿಜಾರುಗಳನ್ನು ಸೃಷ್ಟಿಸುತ್ತವೆ. ಅದು ಮರಗಳಿಂದ ಕೂಡಿದ ಪ್ರದೇಶದಲ್ಲಿ ಅಪಾಯಕಾರಿಯಾಗಿದೆ. ಹೀಗಾಗಿ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡದಿರಲಿ ಜನರಿಗೆ ಒತ್ತಾಯಿಸಲಾಗುತ್ತದೆ. ಅದಾಗ್ಯೂ Hpakant ನಲ್ಲಿ ಜೇಡ್ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. Hpakant ವಿಶ್ವದ ಅತಿದೊಡ್ಡ ಜೇಡ್ ಗಣಿ ಸ್ಥಳವಾಗಿದೆ. ಆದರೆ ಸ್ಥಳೀಯರು ಸಾಮಾನ್ಯವಾಗಿ ನಿಯಮಾವಳಿಗಳನ್ನು ಧಿಕ್ಕರಿಸುತ್ತಾರೆ. ಉದ್ಯೋಗದ ಕೊರತೆ ಮತ್ತು ಕೋವಿಡ್ -19 ಸಾಂಕ್ರಾಮಿಕದಿಂದ ಹದಗೆಟ್ಟಿರುವ ಬಡ ಪರಿಸ್ಥಿತಿಗಳು ಅಕ್ರಮ ಜೇಡ್ ಗಣಿಗಾರಿಕೆಗೆ ಪ್ರೇರೇಪಿಸಲ್ಪಡುತ್ತಿವೆ.