• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಮ್ಯಾನ್ಮಾರ್-ಭಾರತದ ಗಡಿಯಲ್ಲಿ ಪ್ರಬಲ ಭೂಕಂಪನ

|
Google Oneindia Kannada News

ನವದೆಹಲಿ, ನವೆಂಬರ್ 26: ಮ್ಯಾನ್ಮಾರ್-ಭಾರತದ ಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.1ರಷ್ಟು ದಾಖಲಾಗಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ನ (EMSC) ವೆಬ್‌ಸೈಟ್‌ನಲ್ಲಿ ಮತ್ತು Twitter ನಲ್ಲಿ ಬಳಕೆದಾರರು ಮಾಡಿರುವ ಪೋಸ್ಟ್ ಪ್ರಕಾರ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತು ಕೋಲ್ಕತ್ತಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

 ಬೆಂಗಳೂರು: ಭಾರೀ ಮಳೆಗೆ ರಸ್ತೆ ಕಾಣದೆ ಡಿವೈಡರ್‌ಗೆ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು ಬೆಂಗಳೂರು: ಭಾರೀ ಮಳೆಗೆ ರಸ್ತೆ ಕಾಣದೆ ಡಿವೈಡರ್‌ಗೆ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು

ಶುಕ್ರವಾರ ಸಂಭವಿಸಿದ ಭೂಕಂಪನವು "ಬಹಳ ಪ್ರಬಲವಾಗಿದೆ," ಎಂದು ಚಿತ್ತಗಾಂಗ್‌ನಿಂದ ಘಟನೆಗೆ ಸಾಕ್ಷಿಯಾದವರೊಬ್ಬರು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಭೂಕಂಪನದ ಕೇಂದ್ರಬಿಂದುದಿಂದ ಪಶ್ಚಿಮಕ್ಕೆ 184 ಕಿಮೀ (115 ಮೈಲುಗಳು) ದೂರದಲ್ಲಿದೆ ಎಂದು ಗೊತ್ತಾಗಿದೆ.

ಭೂಕಂಪನದ ತೀವ್ರತೆ 5.8:

ಭೂಕಂಪನದ ಕಂಪನದ ತೀವ್ರತೆಯನ್ನು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ 5.8ಕ್ಕೆ ನಿಗದಿಪಡಿಸಿದೆ. ಈ ಮೊದಲು 6.0 ತೀವ್ರತೆಯನ್ನು ನೀಡಿದ ನಂತರ ಭೂಕಂಪನವು ಮಿಜೋರಾಂನ ಐಜ್ವಾಲ್‌ನಿಂದ ಆಗ್ನೇಯಕ್ಕೆ 126 ಕಿಮೀ ದೂರದಲ್ಲಿದೆ ಎಂದು ಹೇಳಿದೆ.

English summary
Strong Earthquake Of 6.1 Magnitude Strikes India-Myanmar Border Region on Friday Morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X