ಡಿಕೆಶಿ ಸಂಪುಟದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಏನು? ಇಲ್ಲಿದೆ ಮಾಹಿತಿ

ಬೆಂಗಳೂರು, ಜೂನ್‌ 4: ರಾಜ್ಯದ ನೂತನ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ಹಂತದಲ್ಲಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರಮುಖ ಇಲಾಖೆಗಳ ಹಂಚಿಕೆಯಲ್ಲಿ ಹಿರಿಯ ನಾಯಕರು ಬಯಸಿದ ಖಾತೆಗಳು ಕೈತಪ್ಪಿರುವುದು ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಯಾರಿಗೆ ಯಾವ ಖಾತೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಸಚಿವರ ಇಲಾಖೆಗಳ ಅಧಿಕೃತ ಪಟ್ಟಿಯನ್ನು ಅಂಕಿತಕ್ಕಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರವಾನಿಸಲಾಗಿದೆ. ಸಚಿವರ ಬೇಡಿಕೆಗಳನ್ನು ಅಳೆದು ತೂಗಿರುವ ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್ ಖಾತೆಗಳ ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Karnataka Cabinet Portfolio Allocation 2026 Who Got Which Ministry in DK Shivakumar Government

ಇದೆಲ್ಲದರ ನಡುವೆ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ನನಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಖಾತೆ ಬೇಕು. ಇದನ್ನ ಬಿಟ್ಟು ಬೇರೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಇದೀಗ ಮಾಹಿತಿ ಪ್ರಕಾರ ಅವರಿಗೆ ಜಲ ಸಂಪನ್ಮೂಲ ಇಲಾಖೆ ಖಾತೆ ನೀಡಲಾಗಿದೆ. ರೆಡ್ಡಿ ಅವರ ಮುಂದಿನ ನಡೆ ಭಾರಿ ಕುತೂಹಲ ಹುಟ್ಟುಹಾಕಿದೆ.

ಯಾರಿಗೆ ಯಾವ ಖಾತೆ ಹಂಚಿಕೆ?

* ಡಾ. ಜಿ. ಪರಮೇಶ್ವರ್‌ - ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆ
* ಪ್ರಿಯಾಂಕ್‌ ಖರ್ಗೆ - ಗೃಹ ಸಚಿವ & ಐಟಿ ಬಿಟಿ ಇಲಾಖೆ
* ರಾಮಲಿಂಗಾ ರೆಡ್ಡಿ - ಜಲ ಸಂಪನ್ಮೂಲ ಇಲಾಖೆ
* ಯು.ಟಿ. ಖಾದರ್‌ - ಆರೋಗ್ಯ ಇಲಾಖೆ
* ಕೃಷ್ಣ ಬೈರೇಗೌಡ - ಬೆಂಗಳೂರು ನಗರಾಭಿವೃದ್ಧಿ (ಜಿಬಿಎ)
* ಯತೀಂದ್ರ ಸಿದ್ದರಾಮಯ್ಯ - ನಗರಾಭಿವೃದ್ಧಿ ಇಲಾಖೆ
* ಎಂ.ಬಿ. ಪಾಟೀಲ್‌ - ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ
* ಸತೀಶ್‌ ಜಾರಕಿಹೊಳಿ - ಲೋಕೋಪಯೋಗಿ ಇಲಾಖೆ
* ಡಾ. ಶರಣಪ್ರಕಾಶ ಪಾಟೀಲ್‌ - ವೈದ್ಯಕೀಯ ಶಿಕ್ಷಣ ಇಲಾಖೆ
* ಕೆ.ಎಚ್‌. ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
* ಕೆ.ಜೆ. ಜಾರ್ಜ್‌ - ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
* ಈಶ್ವರ್‌ ಖಂಡ್ರೆ - ಗ್ರಾಮೀಣಾಭಿವೃದ್ಧಿ ಇಲಾಖೆ
* ಬೈರತಿ ಸುರೇಶ್‌ - ಸಾರಿಗೆ ಇಲಾಖೆ
* ಡಿ.ಕೆ. ಶಿವಕುಮಾರ್‌ - ಮುಖ್ಯಮಂತ್ರಿ, ಹಣಕಾಸು, ಡಿಪಿಎಆರ್‌ ಮತ್ತು ಇತರ ಎಲ್ಲಾ ಖಾತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+