ರಾಜ್ಯದ ವಾಹನ ಸವಾರರಿಗೆ ಸರ್ಕಾರ ಗುಡ್‌ ನ್ಯೂಸ್, ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ 50% ರಿಯಾಯಿತಿ

ಬೆಂಗಳೂರು, ಜೂನ್ 5: ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಸಲು ಕಾಯುತ್ತಿದ್ದ ವಾಹನ ಸವಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಮತ್ತೊಮ್ಮೆ ಶೇಕಡಾ 50ರಷ್ಟು ರಿಯಾಯಿತಿಯನ್ನ ಗುರುವಾರ (ಜೂನ್ 4) ಘೋಷಣೆ ಮಾಡಿದೆ. ಹಾಗಾದ್ರೆ ಯಾರಿಗೆಲ್ಲಾ ಅನ್ವಯ ಹಾಗೂ ಎಲ್ಲಿಯವರೆಗೂ ಸಮಯಾವಕಾಶ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಟ್ರಾಫಿಕ್ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರಾಜ್ಯದ ವಾಹನ ಮಾಲೀಕರಿಗೆ ಕರ್ನಾಟಕ ಸರ್ಕಾರವು ಮತ್ತೊಮ್ಮೆ ಭರ್ಜರಿ ವಿನಾಯಿತಿ ನೀಡಿದೆ. ಸಂಚಾರಿ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಪ್ರಕಟಿಸಿ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಹಿಂದಿನ ರಿಯಾಯಿತಿ ಅವಧಿಯಲ್ಲಿ ಭಾರಿ ಪ್ರಮಾಣದ ದಂಡದ ಮೊತ್ತ ಸಂಗ್ರಹವಾಗಿದ್ದನ್ನು ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

Traffic Fine Discount 2026 50 Penalty Waiver Announced in Karnataka Check Eligibility amp amp Dates

ದಂಡ ಪಾವತಿಗೆ 20 ದಿನಗಳ ಕಾಲಾವಕಾಶ

ಬಾಕಿ ಇರುವ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವಾಹನ ಸವಾರರಿಗೆ ಕೇವಲ 20 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ರಿಯಾಯಿತಿಯು ಜೂನ್ 21, 2026ರಂದು ಆರಂಭವಾಗಲಿದ್ದು, ಕೊನೆಯ ದಿನಾಂಕ ಜುಲೈ 10, 2026 ಆಗಿದೆ ಎಂದು ಸಾರಿಕೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ರಿಯಾಯಿತಿ ಎಲ್ಲಿಂದ ಎಲ್ಲಿವರೆಗೂ ಇರಲಿದೆ?

* ರಿಯಾಯಿತಿ ಆರಂಭವಾಗುವ ದಿನಾಂಕ: 21 ಜೂನ್ 2026

* ರಿಯಾಯಿತಿ ಕೊನೆಗೊಳ್ಳುವ ದಿನಾಂಕ: 10 ಜುಲೈ 2026

ಸಾರಿಗೆ ಇಲಾಖೆ ಆದೇಶದಲ್ಲಿ ಏನಿದೆ?

ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಯಾದ ಪುಷ್ಪ ವಿ.ಎಸ್.ಅವರು ಹೊರಡಿಸಿರುವ ಆದೇಶದ ಪ್ರಕಾರ, ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ಪ್ರಕರಣ ದಾಖಲಾಗಿ ದಂಡ ಬಾಕಿ ಉಳಿಸಿಕೊಂಡಿರುವವರು ಶೇಕಡ 50 ರಷ್ಟು ದಂಡ ಪಾವತಿ ಮಾಡಿ, ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ಮೇ 2026ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯ ಆಗುವಂತೆ ಮತ್ತೊಮ್ಮೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾವೆಲ್ಲಾ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯ?

* ಪೊಲೀಸ್ ಇಲಾಖೆಯ ಇ-ಚಲನ್ ಪ್ರಕರಣಗಳು: ಮೇ 2026ರ ಒಳಗಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿರುವ ಎಲ್ಲಾ ಬಾಕಿ ಪ್ರಕರಣಗಳಿಗೆ ಶೇಕಡ 50 ರಷ್ಟು ರಿಯಾಯಿತಿ ಅನ್ವಯವಾಗುತ್ತದೆ.

* ಸಾರಿಗೆ ಇಲಾಖೆಯ ಹಳೇ ಪ್ರಕರಣಗಳು: 1991 ರಿಂದ 2022ರ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ದಾಖಲಾಗಿ ದಂಡ ಪಾವತಿಸದೆ ಬಾಕಿ ಉಳಿದಿರುವ ಪ್ರಕರಣಗಳನ್ನು ಅರ್ಧದಷ್ಟು ದಂಡ ಕಟ್ಟಿ ಇತ್ಯರ್ಥಪಡಿಸಿಕೊಳ್ಳಬಹುದು.

ಒಟ್ಟಿನಲ್ಲಿ ಹೇಳುವುದಾದರೆ ತುಂಬಾ ವರ್ಷಗಳಿಂದ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ರಿಯಾಯಿತಿ ಘೋಷಣೆ ಮಾಡಲಾಗಿದೆ. ಆದರೆ ಮೇ 2026ರ ನಂತರ ದಾಖಲಾಗಿರುವ ಹೊಸ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಈ ರಿಯಾಯಿತಿ ಸದ್ಯಕ್ಕೆ ಅನ್ವಯಿಸುವುದಿಲ್ಲ. ಅಂತಹ ಹೊಸ ಪ್ರಕರಣಗಳಿಗೆ ಮುಂದಿನ ವರ್ಷಗಳಲ್ಲಿ ರಿಯಾಯಿತಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಿಮ್ಮ ವಾಹನಗಳ ಮೇಲಿರುವ ಹಳೇ ದಂಡದ ವಿವರಗಳನ್ನು ಪರಿಶೀಲಿಸಿ ಜೂನ್ 21 ರಿಂದ ಜುಲೈ 10ರ ಒಳಗೆ ಈ ರಿಯಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+