Earthquake: ಮ್ಯಾನ್ಮಾರ್‌ನಲ್ಲಿ 4.3 ತೀವ್ರತೆ ಭೂಕಂಪ ಸಂಭವಿಸಿದೆ
ನೈಪಿಡಾವ್, ಅಕ್ಟೋಬರ್ 23: ಸೋಮವಾರ ಬೆಳಗ್ಗೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. 4.3 ತೀವ್ರತೆಯು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (ಎನ್‌ಸಿಎಸ್) ಮಾಹಿತಿ ನೀಡಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವುದ ಪ್ರಕಾರ, ಭೂಕಂಪವು ಸೋಮವಾರ 06:29ರ ಹೊತ್ತಿಗೆ ಮ್ಯಾನ್ಮಾರ್‌ನಲ್ಲಿ ನಡೆದಿದೆ. ಇದು ಭೂಮಿಯ ಗರ್ಭದ 90 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದನ್ನು ಕೇಂದ್ರವು ಪತ್ತೆ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಹಾನಿ ಸಂಭವಿಸಿದ್ದರ ಬಗ್ಗೆ ವರದಿ ಆಗಿಲ್ಲ. ಇಲ್ಲಿನ ಜನರು ಭಯಭೀತರಾಗಿದ್ದರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ. 4.3 ತೀವ್ರತೆಯ ಭೂಕಂಪ ಸೋಮವಾರ ಅಕ್ಟೋಬರ್ 23ರಂದು ಬೆಳಗ್ಗೆ 06:29:16ಕ್ಕೆ ಸಂಭವಿಸಿದೆ. ಈ ಭೂಕಂಪನದ ಲ್ಯಾಟ್ 23.30 ಮತ್ತು ಉದ್ದ 94.03 ಆಗಿದ್ದು, ಆಳ ಭೂಮಿಯ ಒಳಕ್ಕೆ 90 ಕಿಮೀ ಎಂದು ತಿಳಿಸಿದೆ. ಸದ್ಯ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications