ಚೀನಾ: 60 ಮಿಲಿಯನ್ ಹಿಂದಿನ ಡೈನೊಸಾರ್ ಭ್ರೂಣ ಪತ್ತೆ
ಬೀಜಿಂಗ್, ಡಿಸೆಂಬರ್ 22: ಅಚ್ಚರಿಯಾದರೂ ಸತ್ಯ, 60 ಮಿಲಿಯನ್ ವರ್ಷಗಳ ಹಿಂದಿನ ಡೈನೊಸಾರ್ ಭ್ರೂಣವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ವಿಶ್ವದ ಇತಿಹಾಸದಲ್ಲೇ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದು ಎಂದು ಹೇಳಲಾಗಿದೆ. ದಕ್ಷಿಣ ಚೀನಾದ ಗಂಝೋದಲ್ಲಿ ಈ ಡೈನೋಸಾರ್ ಭ್ರೂಣವನ್ನು ಪತ್ತೆಹಚ್ಚಲಾಗಿದ್ದು, ಮಣ್ಣಿನಡಿ ಹೂತು ಸಂರಕ್ಷಿಸಿಡಲಾಗಿದ್ದ ಡೈನೋಸಾರ್ ಭ್ರೂಣವನ್ನು ಹೊರಗೆ ತೆಗೆಯಲಾಗಿದೆ.
"ಇತಿಹಾಸದಲ್ಲಿ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ" ಎಂದು ಸಂಶೋಧಕ ಡಾ. ಫಿಯಾನ್ ವೈಸಮ್ ಮಾ ಹೇಳಿದ್ದಾರೆ. ಈ ಭ್ರೂಣದ ಸಂಶೋಧನೆಯು ಡೈನೋಸಾರ್‌ಗಳು ಮತ್ತು ಆಧುನಿಕ ಪಕ್ಷಿಗಳ ನಡುವಿನ ಸಂಬಂಧದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಸಂಶೋಧಕರಿಗೆ ನೀಡಿದೆ. ಪಳೆಯುಳಿಕೆಯು ಭ್ರೂಣವು ಟಕಿಂಗ್ ಎಂದು ಹೇಳುವಂತೆ ಸುರುಳಿಯ ಸ್ಥಿತಿಯಲ್ಲಿದೆ.
ಈ ಡೈನೋಸಾರ್ ಭ್ರೂಣ ಕನಿಷ್ಠ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಕೋಳಿ ಮೊಟ್ಟೆಯ ರೂಪದಲ್ಲಿಯೇ ಇರುವ ಮೊಟ್ಟೆಯೊಳಗೆ ಈ ಭ್ರೂಣವಿದೆ. ಇದು ಹಲ್ಲಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊರೊಸಾರ್ ಎನ್ನಲಾಗಿದ್ದು, ಇದಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ಹೆಸರಿಸಲಾಗಿದೆ.

ಇದು ಮೊಟ್ಟೆಯೊಡೆಯುವ ಸ್ವಲ್ಪ ಸಮಯದ ಮೊದಲು ಪಕ್ಷಿಗಳಲ್ಲಿ ಕಂಡುಬರುವ ನಡವಳಿಕೆಯಾಗಿದೆ. ಇನ್ನೇನು ಮೊಟ್ಟೆಯೊಡೆದು ಡೈನೋಸಾರ್ನ ಮರಿ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಆ ಮೊಟ್ಟೆಯನ್ನು ಸಂರಕ್ಷಿಸಿಡಲಾಗಿದೆ.
ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ 6.7 ಇಂಚು ಉದ್ದದ ಮೊಟ್ಟೆಯೊಳಗೆ ಈ ಭ್ರೂಣವನ್ನು ಇರಿಸಲಾಗಿದೆ.. ಈ ಮೊಟ್ಟೆಯನ್ನು ಮೊದಲು 2000ರಲ್ಲಿ ಹೊರಗೆ ತೆಗೆಯಲಾಯಿತು. ಆದರೆ 10 ವರ್ಷಗಳ ಕಾಲ ಶೇಖರಣೆಯಲ್ಲಿ ಇರಿಸಲಾಯಿತು.
ಈ ಬೇಬಿ ಯಿಂಗ್ಲಿಯಾಂಗ್ ಡೈನೊಸಾರ್ ತಲೆಯಿಂದ ಬಾಲದವರೆಗೆ 10.6 ಇಂಚು ಉದ್ದವಿದೆ. ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾದಾಗ ಮತ್ತು ಹಳೆಯ ಪಳೆಯುಳಿಕೆಗಳನ್ನು ವಿಂಗಡಿಸುವಾಗ ಸಂಶೋಧಕರು ಈ ಮೊಟ್ಟೆಯನ್ನು ಗಮನಿಸಿದರು. ಆ ಮೊಟ್ಟೆಯೊಳಗೆ ಭ್ರೂಣವಿರುವುದು ನಂತರದಲ್ಲಿ ತಿಳಿಯಿತು.
Recommended Video
-
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ? -
Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು -
ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು: ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ ರಜತ್ ದೂರು












Click it and Unblock the Notifications