ಫ್ಯಾಷನ್, ಟ್ರಾವೆಲ್‌ನಂತೆ ಕೃಷಿ ಇನ್‌ಫ್ಲುಯೆನ್ಸರ್‌ಗಳು ಯಾಕಿಲ್ಲಾ? ಚರ್ಚೆ ಹುಟ್ಟುಹಾಕಿದ ಶ್ರೀಪಡ್ರೆ ಪೋಸ್ಟ್
ಬೆಂಗಳೂರು: ಪ್ರಚಲಿತದಲ್ಲಿರುವ ಹಾಗೂ ಹೆಚ್ಚು ಪರಿಣಾಮಕಾರಿಯಾದ ಸಾಮಾಜಿಕ ಜಾಲತಾಣದಲ್ಲಿ 'ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್', 'ಟ್ರಾವೆಲ್ ಇನ್‌ಫ್ಲುಯೆನ್ಸರ್' ಸೇರಿ ಅನೇಕರನ್ನು ನೋಡುತ್ತೇವೆ. ಅನೇಕ ವಿಷಯಗಳ ಮೇಲೂ ವಿಡಿಯೋ, ರೀಲ್ಸ್ ಮಾಡಿ ವಿಷಯ ಪ್ರಸಾರ ಮಾಡುವ, ಮಾಹಿತಿ ನೀಡುವ ಇನ್ಫ್ಲುಯೆನ್ಸರ್‌ಗಳು ಇದ್ದಾರೆ. ಆದರೆ ನಿತ್ಯ ಅಗತ್ಯವಾಗಿರುವ ಆಹಾರದ ಸುರಕ್ಷತೆ, ಗುಣಮಟ್ಟದ ಆಹಾರ, ಅದನ್ನು ಬೆಳೆಯುವ ಕೃಷಿ ಬಗ್ಗೆ ಅದೆಷ್ಟು ಜನರು ಇನ್‌ಫ್ಲುಯೆನ್ಸರ್‌ಗಳು ಇದ್ದಾರೆ ಎಂದು ಹಿರಿಯ ಕೃಷಿ ಬರಹಗಾರ, ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಇದೀಗ ಚರ್ಚೆ ಹುಟ್ಟುಹಾಕಿದೆ.
ದೇಶದ ಬೆನ್ನೆಲುಬು ಆಗಿರುವ ರೈತ ಮಾಡುವ ಕೃಷಿಯಿಂದಲೇ ದೇಶಕ್ಕೆ ಆಹಾರ ಪೂರೈಕೆ ಆಗುತ್ತದೆ. ಕೃಷಿಯೇ ದೇಶದ ಜನರ ಜೀವಾಳ. ಇದೆಲ್ಲ ಗೊತ್ತಿದ್ದರು ಕೃಷಿಗೆ ಸಂಬಂಧಿಸಿದ ಇನ್‌ಫ್ಲುಯೆನ್ಸರ್ ಮತ್ತವರ ವಿಡಿಯೋಗಳನ್ನು ಕಾಣುವುದು ತುಂಬಾ ಕಡಿಮೆ. 'ನಾವು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ (ಪ್ರಭಾವಿ), ಪ್ರಯಾಣ ಇನ್‌ಫ್ಲುಯೆನ್ಸರ್ ಸೇರಿ ಮುಂದಾದ ಇನ್‌ಫ್ಲುಯೆನ್ಸರ್‌ಗಳನ್ನು ಹೊಂದಿದ್ದೇವೆ. ಆದರೆ ಕೃಷಿ ಪ್ರಭಾವಿಗಳು, ಆಹಾರ ಸುರಕ್ಷಿತ ಕುರಿತಂತೆ ಪ್ರಭಾವಿಗಳು ಯಾಕಿಲ್ಲ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಟ್ಟಾರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

ಲೈಕ್ಸ್, ವಿವ್ಸ್‌ಗೆ ವಿಷಯ ಆಯ್ಕೆ ಬೇರೆಯದ್ದೇ ಇರುತ್ತದೆ
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಈ ಎಲ್ಲಾ ಇನ್ಫ್ಲುಯೆನ್ಸರ್ ತಮಗೆ ಬರುವ ಲೈಕ್‌ಗಳು ಮತ್ತು ಶೇರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಟಿವಿ ಚಾನೆಲ್‌ಗಳಂತೆ ಇನ್ಫ್ಲುಯೆನ್ಸರ್‌ಗಳು ಕೂಡ ಲೈಕ್‌ಗಳನ್ನು ಬರುವಂತಹ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ಲೈಕ್ ಪಡೆಯಲು ಮಾತ್ರ ಹೆಚ್ಚಿನವರು AI ಮೂಲಕ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ' ಎಂದು ಒಬ್ಬರು ಹೇಳಿದ್ದಾರೆ.
'ನಮ್ಮಲ್ಲಿ ಕೃಷಿ ಪ್ರಭಾವಿಗಳು ಇಲ್ಲ ಎಂದಲ್ಲ, ಆದರೆ ಇಂದು ದೇಶಕ್ಕೆ ಅಗತ್ಯವಿರುವ ಪ್ರಮುಖ ವಲಯ ಇದಾಗಿದ್ದು, ನಿಜವಾದ ಕೃಷಿ ಪ್ರಭಾವಿಗಳು ಬೇಕಾಗಿದ್ದಾರೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಕೃಷಿಗೆ ಸೇರಿ ಪ್ರಮುಖ ವಲಯಗಳ ಇನ್ಲ್ಫುಯೆನ್ಸರ್‌ಗಳನ್ನು ಹುಡುಕಬೇಕಿದೆ. ಮತ್ತೊಂದೆಡೆ ಕೃತಕ ಬುದ್ಧಿಮತ್ತೆ (AI) ತನ್ನದೇ ಆದ ಪ್ರಭಾವ ಹೊಂದಿದೆ' ಎಂದು ಮೂರನೇಯವರು ತಿಳಿಸಿದ್ದಾರೆ.
'ನಾನು ಭೇಟಿಯಾದ ವ್ಯಕ್ತಿಗಳಲ್ಲಿ ಒಬ್ಬರು ಅಭಿಜಿತ್ ಬಿ. ಅವರು ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರಸಾರ ಮಾಡುತ್ತಾರೆ. ಅಗತ್ಯವುಳ್ಳವರಿಗೆ ತಮ್ಮ ವಿಡಿಯೋ ಮೂಲಕ ಮಾಹಿತಿ ನೀಡುತ್ತಾರೆ. ಹೊಸ ತಂತ್ರಜ್ಞಾನಗಳು ಮತ್ತು ವಿವಿಧ ನೀರಾವರಿ ವಿಧಾನಗಳ ಸಾಧ್ಯತೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಾರೆ. ಅವರ ವಿಷಯವು ಉಪಯುಕ್ತವಾಗಿದೆ ಎಂದು ನಾಲ್ಕನೇಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ












Click it and Unblock the Notifications