Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್‌ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ
Gold Rate: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಈ ಎರಡು ಲೋಹಗಳ ದರ ಸಹಜ ಸ್ಥಿತಿಯತ್ತ ಮರಳಿವೆ ಎನ್ನುವಷ್ಟರಲ್ಲಿ ಯುದ್ಧಗಳು ಆರಂಭ ಪರಿಣಾಮವಾಗಿ ಬೆಳ್ಳಿ-ಬಂಗಾರದ ದರ ಮತ್ತೆ ಹೆಚ್ಚಾಗುತ್ತಿವೆ. ಒಂದೇ ದಿನದಲ್ಲಿ ಏರಿಳಿತ ಮುಂದುವರಿದಿದೆ. ಇಂದು ಸೋಮವಾರ (ಮಾರ್ಚ್ 2) ರಂದು ಬೆಳಗ್ಗೆ ಏರಿಕೆ ಕಂಡಿದ್ದ ಚಿನ್ನ ಮಧ್ಯಾಹ್ನ ಹೊತ್ತಿಗೆ ಮತ್ತೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇನ್ನೊಂದೆಡೆ ಬೆಳ್ಳಿ ದರದಲ್ಲಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಇವುಗಳ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುವ ನಿರೀಕ್ಷೆಗಳು ಇವೆ.
ಮೂರು ದೇಶಗಳ ಪೈಕಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಎರಡು ದೇಶಗಳು ವೈಮಾನಿಕ ದಾಳಿ ಮುಂದುವರಿಸಿವೆ. ಅದಕ್ಕೆ ಪ್ರತಿಯಾಗಿ ಇರಾನ್ ಸಹ ಪ್ರತಿದಾಳಿ ಮೂಲಕ ಉತ್ತರ ನೀಡುತ್ತಿದೆ. ಈ ಯುದ್ಧದ ಪರಿಣಾಮ ಈಗಾಗಲೇ ಕೆಲವೆಡೆ ನಾಗರಿಕ ವಾಯುಯಾನ, ತೈಲ ಸಾಗಣೆ ಹಾಗೂ ಇನ್ನಿತರ ಆರ್ಥಿಕ ವಹಿವಾಟು ಮೇಲೆ ದುಷ್ಪರಿಣಾಮ ಬೀರಿದೆ. ಜಾಗತಿಕವಾಗಿ ಪರಿಸ್ಥಿತಿ ಬಿಗಡಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಪಾಕಿಸ್ತಾನ-ಅಫ್ಘಾನಿಸ್ತಾನ್ ಮಧ್ಯ ಯುದ್ಧ ಆರಂಭಿಸಿದ್ದಾರೆ, ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಿಂತಿಲ್ಲ.

ಜಾಗತಿಕವಾಗಿ ಒಟ್ಟಾರೆ ಏಳು ದೇಶಗಳು ಯುದ್ಧದಲ್ಲಿ ನಿರತವಾಗಿದೆ. ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಪ್ರಭಾವವು ದೇಶದ ಆರ್ಥಿಕತೆ, ದರ ಏರಿಳಿಕೆಗಳಿಗೆ ಕಾರಣವಾಗಲಿದೆ. ಭಾರತ ಶಾಂತಿ ಕಾಯ್ದುಕೊಳ್ಳುವಂತೆ ಕೋರಿದೆ.
ಯುದ್ಧದ ಪರಿಣಾಮವೆಂಬಂತೆ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಚಿನ್ನ-ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಲ್ಲಿ ಮಾತ್ರವೇ ಚಿನ್ನಾಭರಣ ವ್ಯಾಪಾರ, ಹೂಡಿಕೆ, ಗ್ರಾಹಕರು ಖರೀದಿಗೆ ಮನಸು ಮಾಡುತ್ತಾರೆ. ಇಲ್ಲವಾದರೆ ತಟಸ್ಥ ನಿಲುವು ಕಾಯ್ದುಕೊಳ್ಳಬಹುದು. ಮಾರುಕಟ್ಟೆಗೆ ಚಿನ್ನ-ಬೆಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿ ದರಗಳು ಹೆಚ್ಚಾಗಲೂಬಹುದೆಂದು ಊಹಿಸಿದ್ದಾರೆ.
ಇಂದು ಚಿನ್ನದ ದರ ಭಾರಿ ಕುಸಿತ
ಮೂರು ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ 22ಕ್ಯಾರಟ್ ಚಿನ್ನದ 10 ಗ್ರಾಂ ದರವು 2350 ರೂಪಾಯಿ ಇಳಿಕೆ ಕಂಡು, ದರವು 1,25,040 ರೂಪಾಯಿ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯು 2580 ರೂಪಾಯಿಗೆ ಇಳಿದು ಅದರ ಬೆಲೆಯು 1,70,510 ರೂ. ಮುಟ್ಟಿದೆ. ಇಳಿ ಮುಖದತ್ತ ಸಾಗಿದ್ದ ಚಿನ್ನವು ಕಳೆದ ಮೂರು ದಿನಗಳಲ್ಲಿ ಗಗನದತ್ತ ಮುಖ ಮಾಡಿತ್ತು. ಇಂದು ಸೋಮವಾರ ಮತ್ತೆ ಕುಸಿತ ಕಂಡಿತು. ಮುಂದಿನ ಒಂದು ವಾರದಲ್ಲಿ ಇನ್ನಷ್ಟು ದುಬಾರಿ ಆಗುವ ಸಾಧ್ಯತೆ ಇದೆ. ಇದು ಹೂಡಿಕೆದಾರರಿಗೆ ವರದಾನ ಆಗಬಹುದು.
ಇಂದು ಬೆಳ್ಳಿ ದರ ಎಷ್ಟಿದೆ?
ಫೆಬ್ರವರಿ 23ರಂದು ಒಂದು ಕೆಜಿಗೆ 25,000 ರೂ. ಏರಿಕೆ ಆಗಿದ್ದ ಒಂದು ಕೆಜಿ ಬೆಳ್ಳಿ ಬೆಲೆ ಮಾರನೇ ದಿನ 15,000 ರೂಪಾಯಿ ಕುಸಿಯಿತು. ನಂತರ ಯಥಾ ಸ್ಥಿತಿ ಕಾಯ್ದುಕೊಂಡಿದ್ದ ಬೆಳ್ಳಿಯ ಬೆಲೆಯಲ್ಲಿ ಫೆ.28ರಂದು ಬರೋಬ್ಬರಿ 10,000 ರೂ. ಹೆಚ್ಚಾಯಿತು. ಮಾಚ್ 1ರಂದು ಸ್ಥಿರವಾಗಿದ್ದು, ಇಂದು ಮಾರ್ಚ್ 2ರಂದು ಸೋಮವಾರ ಮತ್ತು ಭರ್ಜರಿ 20,000 ರೂಪಾಯಿ ಹೆಚ್ಚಾಗಿದ್ದು, ಇಂದು ಒಂದು ಕೆಜಿ ಬೆಳ್ಳಿ ಬೆಲೆ 3,15,000 ರೂಪಾಯಿ ಇದೆ. ಮುಂದಿನ ಒಂದು ವಾರದಲ್ಲಿ ಮತ್ತಷ್ಟು ಬೆಳ್ಳಿಯ ಮೌಲ್ಯದ ಇನ್ನಷ್ಟು ಏರಿಕೆ ಆಗುವ ಸಂಭವವಿದೆ. ಇದಕ್ಕೆ ನಡೆಯುತ್ತಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕ ಮಧ್ಯದ ಯುದ್ಧ ಹಾಗೂ ಇನ್ನಿತರ ಕಾರಣಗಳು ಎಂದು ಹೇಳಲಾಗುತ್ತಿದೆ.












Click it and Unblock the Notifications