ಬೆಂಗಳೂರಿನ ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್‌

ಭಾರತೀಯ ಚಿತ್ರರಂಗದ "ನ್ಯಾಷನಲ್ ಕ್ರಶ್" ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಹಿಂದೆ ಕೇವಲ ಅದೃಷ್ಟವಷ್ಟೇ ಅಲ್ಲ, ಅವರ ಶಿಕ್ಷಣ ಮತ್ತು ಕಠಿಣ ಪರಿಶ್ರಮವೂ ಇದೆ. ಕೊಡಗಿನಲ್ಲಿ ಹುಟ್ಟಿ ಶಾಲಾ ಶಿಕ್ಷಣ ಪಡೆದು, ನಂತರ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟ ರಶ್ಮಿಕಾ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ಓದಿದರು. ಕಾಲೇಜು ದಿನಗಳಲ್ಲಿ ರಶ್ಮಿಕಾ ಹೇಗಿದ್ದರು ಎನ್ನುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವಿಡಿಯೋ ನೋಡಿ ಇವರೇನಾ ಇಂದು ಟಾಪ್‌ ನಟಿಯಾಗಿ ಮಿಂಚುತ್ತಿರುವ ನಮ್ಮ ರಶ್ಮಿಕಾ? ಎಂದು ಅವರ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ರಾಮಯ್ಯ ಕಾಲೇಜಿನಲ್ಲಿ ಪದವಿ

1996ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ಸುಮನ್ ಮತ್ತು ಮದನ್ ಮಂದಣ್ಣ ದಂಪತಿಗೆ ಜನಿಸಿದ ರಶ್ಮಿಕಾ, ಬಾಲ್ಯದಿಂದಲೇ ಚುರುಕಾಗಿದ್ದರು. ಕೊಡಗಿನ ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರಿನಲ್ಲಿ ಓದಿದ ನಂತರ ಪದವಿ ಪೂರೈಸಲು ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಕಾಲೇಜಿಗೆ ಸೇರಿದರು.

Rashmika Mandanna

ಮನಃಶಾಸ್ತ್ರ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯ ವಿಷಯಗಳಲ್ಲಿ ರಶ್ಮಿಕಾ ಪದವಿ ಪಡೆದರು. ಇನ್ನು ರಾಮಯ್ಯ ಕಾಲೇಜಿನಲ್ಲಿ ಓದುವಾಗ ರಶ್ಮಿಕಾ ಡ್ಯಾನ್ಸ್‌ ತರಬೇತಿ ಪಡೆಯುತ್ತಿರುವ ಅಪರೂಪದ ವಿಡಿಯೋವೊಂದು ವೈರಲ್‌ ಆಗಿದೆ. ಅದರಲ್ಲಿ ರಶ್ಮಿಕಾ ಎಲ್ಲರಂತೆ ಮೋಜು ಮಸ್ತಿ ಮಾಡುತ್ತಾ ಕುಣಿದಾಡಿದ್ದಾರೆ. ಆ ಹುಡುಗಾಟ ಕಂಡು ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ವೈರಲ್ ಆಗಿರುವ ರಶ್ಮಿಕಾ ತಮ್ಮ ಕಾಲೇಜು ಜೀವನದ ತುಂಟಾಟದ ವಿಡಿಯೋ ನೋಡಿ ಈಗಿನ ರಾಮಯ್ಯ ಕಾಲೇಜು ವಿದ್ಯಾರ್ಥಿಗಳು "ನಮ್ಮ ಕಾಲೇಜಿನ ಸೀನಿಯರ್ ಈಗ ನ್ಯಾಷನಲ್ ಕ್ರಶ್" ಎಂದು ಹೆಮ್ಮೆಯಿಂದ ಕಾಮೆಂಟ್ ಮಾಡುತ್ತಿದ್ದಾರೆ.

ಮಾಡಲಿಂಗ್‌ನಲ್ಲಿ ಆಸಕ್ತಿ

ಚಿಕ್ಕವಯಸ್ಸಿನಿಂದಲೇ ನಟನೆಯತ್ತ ಒಲವು ಹೊಂದಿದ್ದ ರಶ್ಮಿಕಾಗೆ ದಾರಿ ಮಾಡಿಕೊಟ್ಟಿದ್ದು ಮಾಡೆಲಿಂಗ್. 2014ರಲ್ಲಿ 'ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್' ಸ್ಪರ್ಧೆಯಲ್ಲಿ ವಿಜೇತರಾಗಿ ಬ್ರ್ಯಾಂಡ್ ಅಂಬಾಸಿಡರ್ ಆದರು. 2015ರಲ್ಲಿ ಬೆಂಗಳೂರಿನ 'ಟಾಪ್ ಮಾಡೆಲ್ ಹಂಟ್'ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದರು. ಇದು ಅವರ ಜೀವನದ ದೊಡ್ಡ ತಿರುವು ನೀಡಿತು.

Rashmika Mandanna

ರಶ್ಮಿಕಾ ಅವರ ಫೋಟೋಗಳನ್ನು ನೋಡಿ ಇಂಪ್ರೆಸ್ ಆದ 'ಕಿರಿಕ್ ಪಾರ್ಟಿ' ಚಿತ್ರತಂಡ ಅವರನ್ನು ಆಡಿಷನ್‌ಗೆ ಕರೆಸಿತ್ತು. 2016ರಲ್ಲಿ ತೆರೆಕಂಡ 'ಕಿರಿಕ್ ಪಾರ್ಟಿ' ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. 'ಸಾನ್ವಿ' ಎಂಬ ಪಾತ್ರದ ಮೂಲಕ ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ದ ರಶ್ಮಿಕಾ, ನಂತರ ಹಿಂದಿರುಗಿ ನೋಡಲೇ ಇಲ್ಲ. ಅಂದು ಶುರುವಾದ ಅವರ ಪಯಣ ಇಂದು ಬಾಲಿವುಡ್‌ವರೆಗೆ ಮುಟ್ಟಿದೆ.

ರಶ್ಮಿಕಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಅವರು ಪದವೀಧರೆ ಕೂಡ. ಇದು ಆ ಕಾಲೇಜಿನ ವಿದ್ಯಾರ್ಥಿಗಳು ಒಂದು ರೀತಿ ಹೆಮ್ಮೆಯ ವಿಷಯವಾಗಿದೆ. ಸದ್ಯ ಅವರು ವಿಜಯ್ ದೇವರಕೊಂಡ ಜೊತೆಗಿನ ವಿವಾಹದ ಸಂಭ್ರಮದಲ್ಲಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಇವರ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ಹೊತ್ತಿನಲ್ಲೇ ರಶ್ಮಿಕಾ ಅವರ ಕಾಲೇಜಿನ ವಿಡಿಯೋ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+