ಇರಾನ್ ನೆಲದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಕ್ರಿಯೆ, ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ಮರೀಚಿಕೆ | Operation Roaring Lion
ಮಧ್ಯಪ್ರಾಚ್ಯ ಒಂದು ರೀತಿಯಲ್ಲಿ ಕುಲುಮೆಯಲ್ಲಿ ಬೇಯುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನೇನು ಇಡೀ ಮಿಡಲ್ ಈಸ್ಟ್ ಭವಿಷ್ಯವೇ ನಾಶವಾಗಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ ಹಲವಾರು ಅರಬ್ ಪ್ರದೇಶಗಳ ಮೇಲೆ ಹಿಂದೆ ಮುಂದೆ ಯೋಚನೆ ಮಾಡದೆ ದಾಳಿ ನಡೆಸುತ್ತಿದೆ ಇರಾನ್. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಇರಾನ್ ರಾಜಧಾನಿ ಮತ್ತೊಮ್ಮೆ ಸೇಡಿಗೆ ಸೇಡು ಎಂದು ಗುಡುಗಿದೆ. ಇರಾನ್ ನೆಲದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿದೆ.
ಇಸ್ರೇಲ್ ಸೇನೆ ದಿಢೀರ್ ಇರಾನ್ ಮೇಲೆ ದಾಳಿ ಆರಂಭಿಸಿ ಈಗಾಗಲೇ 4 ದಿನಗಳೇ ಕಳೆದು ಹೋಗಿದೆ. ಇರಾನ್ ವಿರುದ್ಧ ಅಮೆರಿಕ & ಇಸ್ರೇಲ್ ಯುದ್ಧ ಶುರು ಮಾಡಿರುವುದೇ ಪರಮಾಣು ಬಾಂಬ್ ಕಾರಣಕ್ಕೆ. ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದೆ ಕಿರಿಕ್ ಮಾಡಿದ್ದ ಇರಾನ್ ವಿರುದ್ಧ, ದಿಢೀರ್ ದಾಳಿ ಶುರು ಮಾಡಿ ಯುದ್ಧ ಆರಂಭಿಸಿದೆ ಇಸ್ರೇಲ್ ಸೇನೆ. ಮೊದಲ ದಿನದ ಕಾರ್ಯಾಚರಣೆ ಸಮಯದಲ್ಲೇ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿದೆ ಇಸ್ರೇಲ್. ಇದು ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಕ್ಕೂ ಸಿಕ್ಕಾಪಟ್ಟೆ ಖುಷಿ ತರಿಸಿದೆ. ಆದರೆ ಈಗ ಇರಾನ್ ಸೇಡಿನ ಕ್ರಮ ಕೈಗೊಳ್ಳುತ್ತಿದ್ದು, ತಮ್ಮ ಶತ್ರುಗಳ ಮೇಲೆ ಭಾರಿ ಘೋರವಾಗಿ ದಾಳಿ ಮಾಡುತ್ತಿದೆ. ಇಂತಹ ಸಮಯದಲ್ಲೇ ಯುದ್ಧದಲ್ಲಿ ಮೃತಪಟ್ಟಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಕ್ರಿಯೆ ಈಗ ನೆರವೇರಿದೆ.

150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂತ್ಯಕ್ರಿಯೆ
ಯುದ್ಧ ಶುರುವಾದ ಸಮಯದಲ್ಲಿ ಇಸ್ರೇಲ್ ಹಾಗೂ ಅಮೆರಿಕ ಸೇನಾ ಪಡೆಗಳು ಇರಾನ್ ರಾಜಧಾನಿ ತೆಹ್ರಾನ್ ಮೇಲೆ ದಾಳಿ ಆರಂಭಿಸಿದ್ದವು. ಈ ಸಮಯದಲ್ಲಿ ಶಾಲೆ ನಡೆಯುತ್ತಿದ್ದಾಗಲೇ ಕ್ಷಿಪಣಿ ಒಂದು ನೇರವಾಗಿ ಬಂದು ವಿದ್ಯಾರ್ಥಿಗಳು ಇದ್ದ ಶಾಲೆ ಮೇಲೆ ಬಿದ್ದಿತ್ತು. ಆಗ ಶಾಲೆಯಲ್ಲಿ ಇದ್ದ ಸುಮಾರು 165 ವಿದ್ಯಾರ್ಥಿನಿಯರು ಜೀವ ಬಿಟ್ಟಿದ್ದರು. ಈ ಘಟನೆ ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು, ಇಡೀ ಜಗತ್ತಿನಲ್ಲಿ ಈ ಬಗ್ಗೆ ಮರುಕ ವ್ಯಕ್ತವಾಗಿದೆ. ಹೀಗಿದ್ದಾಗ ಮಂಗಳವಾರ ಇರಾನ್ ಪ್ರಜೆಗಳು ಭಾರಿ ದೊಡ್ಡ ಮಟ್ಟದಲ್ಲಿ ಸೇರಿ 165 ವಿದ್ಯಾರ್ಥಿನಿಯರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ಸೇಡಿಗೆ ಸೇಡು ಎಂಬ ಘೋಷಣೆ ಕೂಡ ಮೊಳಗಿದೆ. ಸರ್ವಾಧಿಕಾರಿ ಖಮೇನಿ ಹತ್ಯೆಯ ನಂತರ ಇರಾನ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.
ಪರಮಾಣು ಬಾಂಬ್ ಪರೀಕ್ಷೆ ನಡೆಯಿತಾ?
ಖಮೇನಿ ಹತ್ಯೆಯ ನಂತರ ಇರಾನ್ ಕೊತ ಕೊತ ಕುದಿಯುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡ ರೀತಿಯೇ ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಅಮೆರಿಕದ ದೊಡ್ಡ ಶತ್ರು ಇರಾನ್ ಮೊದಲ ಬಾರಿಗೆ ಭೀಕರ ಆಘಾತ ಎದುರಿಸಿದೆ. ಇಸ್ರೇಲ್ ಈ ವಿಚಾರದಲ್ಲಿ ಮುಂದೆ ನುಗ್ಗಿ ದಾಳಿ ಆರಂಭ ಮಾಡಿ ಅಮೆರಿಕ ಕೂಡ ಎಂಟ್ರಿ ಆಗುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಈಗಾಗಲೇ ಇರಾನ್ ಬಳಿ ಪರಮಾಣು ಬಾಂಬ್ ಇದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಮತ್ತೊಂದೆಡೆ ಇರಾನ್ ನೆಲದಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆದಿರುವ ಅನುಮಾನವೂ ಈಗ ಮೂಡಿದೆ. ಹೀಗಿದ್ದಾಗ ಅಮೆರಿಕ ಕೂಡ ಪರಮಾಣು ಬಾಂಬ್ ಪರೀಕ್ಷೆಯನ್ನ ಮಾಡಿದೆಯಾ? ಎಂಬ ಡೌಟ್ ಕಾಡುತ್ತಿದೆ, ಯಾಕೆ ಅಂದ್ರೆ ದಿಢೀರ್ ಅಮೆರಿಕದಲ್ಲಿ ಕೂಡ ಭೂಕಂಪನ ಸಂಭವಿಸಿದ ಸುದ್ದಿಯು ಕೇಳಿಬಂದಿದೆ.












Click it and Unblock the Notifications