ನಿಮ್ಮ ಮನೆ ರಸ್ತೆಗಿಂತ ಕೆಳಗಿದೆಯೇ? ಆರ್ಥಿಕ ಮತ್ತು ಆರೋಗ್ಯ ಸಮಸ್ಯೆ ತಡೆಯಲು ಇಲ್ಲಿದೆ ವಾಸ್ತು ಸಲಹೆಗಳು
ಸರ್ಕಾರಗಳು ಹಳೆಯ ರಸ್ತೆಯ ಮೇಲೆ ಹೊಸ ರಸ್ತೆಯನ್ನು ನಿರ್ಮಿಸುವುದು ಅಥವಾ ಸಿಮೆಂಟ್ ರಸ್ತೆಗಳನ್ನು ಹಾಕುವುದರಿಂದ ರಸ್ತೆಯ ಎತ್ತರ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದಾಗಿ ಅನೇಕ ಮನೆಗಳು ರಸ್ತೆಗಿಂತ ಕೆಳಮಟ್ಟಕ್ಕೆ (ತಗ್ಗು ಪ್ರದೇಶಕ್ಕೆ) ಹೋಗುತ್ತವೆ. ಇದು ಕೇವಲ ನೀರಿನ ಸಮಸ್ಯೆಯಲ್ಲ ವಾಸ್ತು ಪ್ರಕಾರವೂ ಕೆಲವು ಗಂಭೀರ ಸಮಸ್ಯೆಗಳನ್ನು ಅಗುವ ಸಾಧ್ಯತೆ ಇರುತ್ತದೆ.
ರಸ್ತೆ ಎತ್ತರವಾಗಿ ಮನೆ ತಗ್ಗಿನಲ್ಲಿದ್ದರೆ ಆಗುವ ತೊಂದರೆ:
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂಭಾಗದ ರಸ್ತೆ ಮನೆಯ ನೆಲಮಟ್ಟಕ್ಕಿಂತ ಎತ್ತರದಲ್ಲಿರುವುದು ಶುಭವಲ್ಲ.
ಪೂರ್ವ ದಿಕ್ಕಿನ ಮನೆ: ಮನೆಯು ಪೂರ್ವ ದಿಕ್ಕಿನಲ್ಲಿದ್ದು, ರಸ್ತೆಯು ಮನೆಯ ಬುನಾದಿಗಿಂತ ಎತ್ತರದಲ್ಲಿದ್ದರೆ ಅದು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು.
ಆರೋಗ್ಯ ಮತ್ತು ಸಂಪತ್ತು: ಮನೆಯು ತಗ್ಗಿನಲ್ಲಿದ್ದರೆ ಮನೆಯ ಯಜಮಾನನ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಕೊಳಚೆ ನೀರಿನ ಸಮಸ್ಯೆ: ಮಳೆ ನೀರು ಮತ್ತು ಕೊಳಚೆ ನೀರು ಸುಲಭವಾಗಿ ಮನೆಯೊಳಗೆ ಬರುವ ಅಪಾಯವಿರುತ್ತದೆ.

ಇದಕ್ಕೆ ಪರಿಹಾರಗಳೇನು?
ಒಂದು ವೇಳೆ ನಿಮ್ಮ ಮನೆ ಈಗಾಗಲೇ ರಸ್ತೆಗಿಂತ ಕೆಳಮಟ್ಟದಲ್ಲಿದ್ದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ
ಜಾಕ್ ತಂತ್ರಜ್ಞಾನ (House Lifting): ಪ್ರಸ್ತುತ ಆಧುನಿಕ ತಂತ್ರಜ್ಞಾನ ಲಭ್ಯವಿದ್ದು ಮನೆಯ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ 'ಜಾಕ್' ಬಳಸಿ ಇಡೀ ಮನೆಯನ್ನು 3 ರಿಂದ 5 ಅಡಿಗಳವರೆಗೆ ಮೇಲೆತ್ತಬಹುದು. ಇದು ಸ್ವಲ್ಪ ವೆಚ್ಚದಾಯಕವಾದರೂ ಖಾಯಂ ಪರಿಹಾರ ನೀಡುತ್ತದೆ.
ಹೊಸ ಮನೆ ಕಟ್ಟುವ ಮುನ್ನ ಎಚ್ಚರ: ಹೊಸದಾಗಿ ಮನೆ ಕಟ್ಟುವವರು ಭವಿಷ್ಯದಲ್ಲಿ ರಸ್ತೆ ಎಷ್ಟು ಎತ್ತರವಾಗಬಹುದು ಎಂದು ಅಂದಾಜಿಸಿ ಮನೆಯ ಬೇಸ್‌ಮೆಂಟ್ ಅನ್ನು ರಸ್ತೆಗಿಂತ ಕನಿಷ್ಠ 3 ರಿಂದ 5 ಅಡಿ ಎತ್ತರದಲ್ಲಿ ನಿರ್ಮಿಸಬೇಕು.
ಸಂಪ್ ಪಂಪ್ ಅಳವಡಿಕೆ: ಮನೆಯೊಳಗೆ ಬರುವ ನೀರನ್ನು ಹೊರಹಾಕಲು ಶಕ್ತಿಯುತವಾದ 'ಸಂಪ್ ಪಂಪ್' ವ್ಯವಸ್ಥೆ ಮಾಡಿಕೊಳ್ಳಿ.
ಸುತ್ತುಗೋಡೆ: ರಸ್ತೆಯ ಬದಿಯ ಕಾಂಪೌಂಡ್ ಗೋಡೆಯನ್ನು ಸ್ವಲ್ಪ ಎತ್ತರಕ್ಕೆ ನಿರ್ಮಿಸಿ. ಇದು ರಸ್ತೆಯ ಧೂಳು ಮತ್ತು ಶಬ್ದ ಮನೆಯೊಳಗೆ ಬರುವುದನ್ನು ತಡೆಯುತ್ತದೆ.
ಸಣ್ಣ ಕಟ್ಟೆ ನಿರ್ಮಾಣ: ಮನೆಯ ಮುಂಭಾಗದಲ್ಲಿ ರಸ್ತೆಯಿಂದ ನೀರು ಒಳಬರದಂತೆ ಸಣ್ಣ ಕಟ್ಟೆಯಂತಹ ತಡೆಗೋಡೆಯನ್ನು ನಿರ್ಮಿಸಿ.












Click it and Unblock the Notifications