Get Updates
Get notified of breaking news, exclusive insights, and must-see stories!

ಯುದ್ಧ ಇನ್ನೂ ನಿಂತಿಲ್ಲ, ಇರಾನ್ ಸೇನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | Operation Roaring Lion

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಭೀಕರ ಯುದ್ಧ ಸಾರಿದ್ದು, ದೊಡ್ಡದಾಗಿ ದಾಳಿ ನಡೆಸುತ್ತಿವೆ. ಇಂತಹ ಸಮಯದಲ್ಲೇ ಅಮೆರಿಕದ ಮುಂದಿನ ನಡೆ ಏನು? ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತ ಯುದ್ಧ ನಿಂತು ಹೋಗುತ್ತಾ? ಎನ್ನುವ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಅಮೆರಿಕ ಅಧ್ಯಕ್ಷರು ಇರಾನ್ ಸೇನೆಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಯುದ್ಧ ಇನ್ನೂ ನಿಂತಿಲ್ಲ ಎಂಬ ಭಾರಿ ದೊಡ್ಡ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಸೇನಾ ಕಾರ್ಯಾಚರಣೆ ಭಾಗವಾಗಿ ಇರಾನ್ ವಿರುದ್ಧ ಮತ್ತೆ ದಾಳಿ ನಡೆಸುವ ಮುನ್ಸೂಚನೆ ಕೂಡ ರವಾನಿಸಿದ್ದಾರೆ.

ಅಮೆರಿಕ ನಡೆಸಿದ ದಾಳಿಗೆ ಇರಾನ್ ನಲುಗಿ ಹೋಗಿದ್ದು, ಇರಾನ್ ರಾಜಧಾನಿ ತೆಹ್ರಾನ್ ಈಗಾಗಲೇ ಸಂಕಷ್ಟದ ಸರಮಾಲೆ ಎದುರಿಸುತ್ತಿದೆ. ನೋಡ ನೋಡುತ್ತಲೇ ಸುಮಾರು 800 ಜನರು ಇರಾನ್‌ನಲ್ಲಿ ಜೀವ ಕಳೆದುಕೊಂಡಿದ್ದು, ನೂರಾರು ಜನರು ಯುದ್ಧದ ಪರಿಣಾಮ ಆಸ್ಪತ್ರೆಗಳಲ್ಲಿ ಒದ್ದಾಡುತ್ತಿದ್ದಾರೆ. ಇಷ್ಟಾದರೂ ಇರಾನ್ ಮಾತ್ರ ಯುದ್ಧದಲ್ಲಿ ಶರಣಾಗಿ ಶಾಂತಿ ಒಪ್ಫಂದ ಮಾಡಿಕೊಳ್ಳಲು ತಯಾರಿಲ್ಲ. ಬದಲಾಗಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಮತ್ತೆ ಮತ್ತೆ ಸೇಡಿನ ಮಾತು ಆಡುತ್ತಿದೆ ಇರಾನ್, ಈ ಹಿನ್ನೆಲೆ ಈಗಾಗಲೇ ಕುವೈತ್, ಯುಎಇ, ಕತಾರ್ ಸೇರಿ ಹಲವು ಅರಬ್ ದೇಶಗಳ ಮೇಲೆ ದಾಳಿ ಮಾಡಿದೆ ಇರಾನ್ ಸೇನೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗುಡುಗಿದ್ದಾರೆ.

Operation Roaring Lion

ಯುದ್ಧಕ್ಕೆ ಶಸ್ತ್ರಾಸ್ತ್ರ ಕೊರತೆ ಕಾಡುತ್ತಿಲ್ಲ!

ಇರಾನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲೇ ಐಡಿಯಾ ಮಾಡಿ & ಆ ಮೂಲಕ ಸೇಡಿಗೆ ಸೇಡು ಅಂತಾ ಮುಂದೆ ನುಗ್ಗಿರುವ ಅಮೆರಿಕ ಹಾಗೂ ಇಸ್ರೇಲ್ ಮಿಲಿಟರಿ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರ ಈ ಮೊದಲೇ ಸಂಗ್ರಹ ಮಾಡಿಕೊಂಡು ಕಾಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದು, ನಮ್ಮ ಬಳಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇರಾನ್ ವಿರುದ್ಧ ಶೀಘ್ರದಲ್ಲೇ ದಿಢೀರ್ ಎಂದು ಮತ್ತೊಂದು ಭಾರಿ ದೊಡ್ಡ ಮಟ್ಟದ ದಾಳಿ ಶುರು ಮಾಡುವ ಮುನ್ಸೂಚನೆ ನೀಡಿದ್ದಾರೆ. ಖುದ್ದಾಗಿ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಈ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಇರಾನ್ ಜನರಿಗೆ ಇನ್ನಷ್ಟು ಆತಂಕ ಹೆಚ್ಚಾಗಿದೆ.

ಮೊದಲು ದಾಳಿ ಮಾಡಿದ್ದು ಇಸ್ರೇಲ್

ಅಮೆರಿಕ ಬೇರೆ ಅಲ್ಲ ಇಸ್ರೇಲ್ ಬೇರೆ ಅಲ್ಲ ಎನ್ನಬಹುದು, ಏಕೆಂದರೆ ಎರಡೂ ಅತ್ಯಾಪ್ತ ದೇಶಗಳು. ಹೀಗಾಗಿಯೇ ಇಸ್ರೇಲ್ ಮತ್ತು ಅಮೆರಿಕ ಸೇರಿ ಯುದ್ಧ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದುಬಿಟ್ಟವು, ಯುದ್ಧಕ್ಕೆ ಮೊದಲು ಇರಾನ್‌ಗೆ ಶಾಂತಿ ಮಾತುಕತೆ ಆಫರ್ ಕೂಡ ಕೊಡಲಾಗಿತ್ತು. ಸತತವಾಗಿ 3 ಸುತ್ತಿನ ಮಾತುಕತೆ ಅಮೆರಿಕ ಮತ್ತು ಇರಾನ್ ನಡುವೆ ನಡೆದಿತ್ತು. ಹೀಗಿದ್ದರೂ ಶಾಂತಿ ಮಾತುಕತೆ ಯಶಸ್ಸು ಕಾಣದ ಹಿನ್ನೆಲೆ ದಿಢಿರ್ ಯುದ್ಧ ಶುರುವಾಗಿತ್ತು.

ಮೊದಲ ದಿನವೇ ತನ್ನ ಗುರಿಯನ್ನ ತಲುಪಿದ್ದ ಇಸ್ರೇಲ್ ಸೇನೆ, ನೇರ ಖಮೇನಿ ಇದ್ದ ಜಾಗಕ್ಕೆ ನುಗ್ಗಿ ದಾಳಿ ಮಾಡಿ ಜೀವವನ್ನೇ ತೆಗೆದಿತ್ತು. ಕೊನೆಗೂ ಇರಾನ್ ಸರ್ವಾಧಿಕಾರಿ ಹತ್ಯೆ ಮಾಡಿ ಇಸ್ರೇಲ್ ಮತ್ತು ಅಮೆರಿಕ ಸಂಭ್ರಮಿಸಿದ್ದವು. ಇನ್ನೊಂದು ಕಡೆ ಇದೇ ವಿಚಾರವಾಗಿ ಇರಾನ್ ಕೊತ, ಕೊತ ಕುದಿಯುತ್ತಾ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ಇರಾನ್ ಸೇಡು ತೀರಿಸಿಕೊಳ್ಳುವ ಒಳಗಾಗಿ ಮತ್ತೊಂದು ಭಾರಿ ದೊಡ್ಡ ದಾಳಿ ಸಂಘಟಿಸಲು ಇದೀಗ ಅಮೆರಿಕ ಹಾಗೂ ಇಸ್ರೇಲ್ ದೇಶಗಳ ಸೇನೆಗಳು ಮುಂದೆ ಬಂದಿವೆ. ಇನ್ನುಳಿದಂತೆ ಅರಬ್ ದೇಶಗಳು ಈಗ ಇರಾನ್ ವಿರುದ್ಧ ರೊಚ್ಚಿಗೆದ್ದಿದ್ದು, ಅಮೆರಿಕ & ಇಸ್ರೇಲ್ ಬೆನ್ನಿಗೆ ನಿಂತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+