ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ?
ಇತ್ತೀಚೆಗೆ ಇರಾನ್‌ನಲ್ಲಿ ನಡೆದ ಹಲವು ಬೆಳವಣಿಗೆಗಳು ಹಾಗೂ ಅಲ್ಲಿನ ಪರಮೋಚ್ಛ ನಾಯಕ ಅಲಿ ಖಮೇನಿ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ಕರ್ನಾಟಕದ ಗೌರಿಬಿದನೂರು ತಾಲ್ಲೂಕಿನ ಅಲಿಪುರ ಗ್ರಾಮಕ್ಕೂ ಇರಾನ್ ನಾಯಕರಿಗೂ ಇರುವ ಅಪರೂಪದ ನಂಟು ಬೆಳಕಿಗೆ ಬಂದಿದೆ. ಈ ಪುಟ್ಟ ಗ್ರಾಮ ಮತ್ತು ಇರಾನ್ ನಡುವಿನ ಧಾರ್ಮಿಕ ಹಾಗೂ ಐತಿಹಾಸಿಕ ಸಂಬಂದ ಸ್ಥಳೀಯರಲ್ಲಿ ವಿಶೇಷ ಬಾಂಧವ್ಯವನ್ನು ಹೊಂದಿದೆ.
ಅಲಿಪುರದ ನಿವಾಸಿಯಾದ ಮೊಹಮ್ಮದ್ ಜಮಾ ಅವರು ನೀಡಿರುವ ಮಾಹಿತಿಯ ಪ್ರಕಾರ ಸುಮಾರು 35 ರಿಂದ 40 ವರ್ಷಗಳ ಹಿಂದೆ ಅಲಿ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ಆಡಿದ ಮಾತುಗಳು ಇಂದಿಗೂ ಇಲ್ಲಿನ ಜನರ ಕಿವಿಯಲ್ಲಿ ಗುನುಗುತ್ತಿವೆ.

ಕುಟುಂಬ ಮತ್ತು ಧಾರ್ಮಿಕ ನಂಟು
ಅಲಿಪುರ ಗ್ರಾಮದಲ್ಲಿ ಶಿಯಾ ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇವರಲ್ಲಿ ಅನೇಕ ಕುಟುಂಬಗಳು ಸಯದ್ ಅಥವಾ ಸಾದಾತ್ ವಂಶಕ್ಕೆ ಸೇರಿದವರಾಗಿದ್ದು, ಧಾರ್ಮಿಕವಾಗಿ ವಿಶೇಷ ಸ್ಥಾನಮಾನ ಹೊಂದಿದ್ದಾರೆ. ಅಲಿ ಖಮೇನಿ ಅವರ ಪೂರ್ಣ ಹೆಸರು ಸಯದ್ ಅಲಿ ಹುಸೇನಿ ಕಾಮಿನಯಿ. ಅವರು ಪ್ರವಾದಿ ಮೊಹಮ್ಮದ್ ಅವರ ಕುಟುಂಬ ವಂಶಕ್ಕೆ ಸೇರಿದವರಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಸರಳತೆ ಮತ್ತು ಕ್ರಾಂತಿಯ ಹಾದಿ
1979 ಇರಾನ್ ಕ್ರಾಂತಿಯಲ್ಲಿ ಮಹತ್ವದ ಪಾತ್ರವಹಿಸಿದ್ದ ಖಮೇನಿ ಪಾಶ್ಚಿಮಾತ್ಯ ಪ್ರಭಾವದಿಂದ ಇರನ್ ಅನ್ನು ಮುಕ್ತಗೊಳಿಸಲು ಹೋರಾಡಿದರು. ಇಷ್ಟೊಂದು ಬಲಾಢ್ಯ ದೇಶದ ನಾಯಕರಾಗಿದ್ದರೂ ಅವರ ಸರಳ ಜೀವನಶೈಲಿ ಅಲಿಪುರ ಜನರಿಗೆ ಮಾದರಿಯಾಗಿತ್ತು. ಅವರ ಒಬ್ಬ ದೊಡ್ಡನಾಯಕರಾಗಿಯೊ ಅವರ ಬಂಗಲೆಯಲ್ಲಿ ಯಾವುದೇ ಐಷಾರಾಮಿ ವಸ್ತುಗಳು ಇರಲಿಲ್ಲ ಅವರೊಬ್ಬರು ಸರಳ ಜೀವಿ ಆಗಿದ್ದರು ಎಂದು ಇಲ್ಲಿನ ನಿವಾಸಿಗಳ ಮಾತು.
ದೇಶಪ್ರೇಮ ಮತ್ತು ಮಾನವೀಯತೆ
ಖಮೇನಿ ಅವರ ನಿಧನದ ಸುದ್ದಿಯಿಂದ ಅಲಿಪುರ ಸ್ತಬ್ದವಾಗಿದ್ದರೂ ಇಲ್ಲಿನ ಜನರ ದೇಶಪ್ರೆಮ ಅಚಲವಾಗಿದೆ. "ನಾವು ಈ ಭೂಮಿಯಲ್ಲಿ ಹುಟ್ಟಿದ್ದೆವೆ ಭಾರತ ದೇಶ ನಮ್ಮ ಪ್ರಾಣ, ಒಬ್ಬ ಮನುಷ್ಯನಾಗಿ ಇನ್ನೂಬ್ಬನಿಗೆ ತೊಂದರೆ ಕೊಡಬಾರದು ಎಂಬುದು ನಮ್ಮ ಧರ್ಮದ ಸಾರವಾಗಿದೆ" ಎನ್ನುವುದು ಅಲಿಪುರ ನಿವಾಸಿಗಳ ಮಾತುಗಳಾಗಿವೆ.
ವ್ಯಕ್ತಿ ಸಾವಿನ ನಂತರವು ಅವರ ವಿಚಾರಗಳು ಸಾಯುವುದಿಲ್ಲ
"ವ್ಯಕ್ತಿ ಸತ್ತರೂ ಅವರ ವಿಚಾರಗಳು ಸಾಯುವುದಿಲ್ಲ" ಎಂಬ ನಂಬಿಕೆ ಅಲಿಪುರದ ಜನರಲ್ಲಿ ಮನೆ ಮಾಡಿದೆ. ಅಮೆರಿಕದ ಹಸ್ತಕ್ಷೇಪದಿಂದ ಅಫ್ಘಾನಿಸ್ತಾನ ಅಥವಾ ಇರಾಕ್ ಅನುಭವಿಸಿದ ದುಸ್ಥಿತಿಗಳನ್ನು ಇರಾನ್ ಅನುಭವಿವಾಸಬಾರದು ಎಂಬುದು ಇವರ ಆಶಯವಾಗಿತ್ತು. ಅಲಿಪುರದ ಇತಿಹಾಸದ ಪುಟಗಳಲ್ಲಿ ಖಮೇನಿ ಅವರ ಆ ಭೇಟಿ ಮತ್ತು ನೆನಪುಗಳು ಎಂದಿಗೂ ಶಾಶ್ವತವಾಗಿ ಉಳಿಯಲಿವೆ ಎಂದು ಅಲಿಪುರದ ನಿವಾಸಿಯಾದ ಮೊಹಮ್ಮದ್ ಜಮಾ ಹೆಳಿದರು.












Click it and Unblock the Notifications