Get Updates
Get notified of breaking news, exclusive insights, and must-see stories!

ಚಂದ್ರಗ್ರಹಣ ಅಂತ್ಯ, ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಭಕ್ತಸಾಗರ | Lunar Eclipse

ಬಾಹ್ಯಾಕಾಶ ಲೋಕದಲ್ಲಿ ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಚಂದ್ರಗ್ರಹಣ ಇದೀಗ ಅಂತ್ಯವಾಗಿ, ಗ್ರಹಣದಿಂದ ಮುಕ್ತಿ ಸಿಕ್ಕಿದೆ ಮನುಷ್ಯರಿಗೆ. ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆ ದಿನ ಸಂಭವಿಸಿದ ಚಂದ್ರಗ್ರಹಣ ಸಮಯ ಅಂತ್ಯವಾಗಿದ್ದು, ದೇಶದ ಮೂಲೆ ಮೂಲೆಯಲ್ಲಿ ಇದೀಗ ಭಕ್ತಸಾಗರ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಗ್ರಹಣ ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ ಆರಂಭ ಆಗಿದ್ದರೂ ಭಾರತದಲ್ಲಿ ಗೋಚರಿಸಿದ್ದು ತಡವಾಗಿ. ಚಂದ್ರಗ್ರಹಣ ಮೋಕ್ಷ ಕಾಲ ಇಂದು ಸಂಜೆ 6 ಗಂಟೆ 19 ನಿಮಿಷಕ್ಕೆ ಇತ್ತು, ಇದೀಗ ಗ್ರಹಣ ಮುಕ್ತಾಯವಾದ ಹಿನ್ನೆಲೆ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಕೇತುಗ್ರಸ್ತ ಚಂದ್ರಗ್ರಹಣವು ಮಾರ್ಚ್ 3 ಮಂಗಳವಾರದ ದಿನವಾದ ಇಂದು ಸಂಭವಿಸಿದ್ದು, ಗ್ರಹಣದ 'ಸೂತಕ' ಕಾರಣಕ್ಕೆ ಉತ್ತರದಿಂದ ದಕ್ಷಿಣದ ತನಕ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಪೂಜೆ ಹಾಗೂ ದರ್ಶನದ ಅವಧಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿತ್ತು. ಭಾರತದಲ್ಲಿ ಚಂದ್ರೋದಯದ ಬಳಿಕ ಈ ಗ್ರಹಣ ವಿದ್ಯಮಾನ ಕಣ್ತುಂಬಿಕೊಂಡರು ಭಾರತೀಯರು. ದೇಶದ ಶ್ರೀಮಂತ ದೇಗುಲ ತಿರುಮಲದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 7.30 ತನಕ ದೇಗುಲದ ಬಾಗಿಲು ಬಂದ್ ಮಾಡಲಾಗಿತ್ತು. ಇನ್ನು ಗ್ರಹಣ ಮುಕ್ತಾಯದ ನಂತರ ಸಂಪ್ರೋಕ್ಷಣೆಯು ಮುಗಿದು ರಾತ್ರಿ 8 ಗಂಟೆಯ ನಂತರ ಅಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಎಂದು ತಿಳಿಸಲಾಗಿತ್ತು. ಹಾಗೇ ದೇಶದ ಹಲವು ಪ್ರಮುಖ ದೇವಸ್ಥಾನಗಳಲ್ಲೂ ಸಮಯದಲ್ಲಿ ಭಾರಿ ಬದಲಾವಣೆ ಮಾಡಲಾಗಿತ್ತು.

Lunar Eclipse

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಸಮಯ ಬದಲಾವಣೆ

ತಿರುಮಲ ದೇವಸ್ಥಾನದ ರೀತಿಯಲ್ಲೇ ಕರ್ನಾಟಕದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಸಮಯ ಬದಲಾವಣೆ ಆಗಿತ್ತು ಇಂದು. ಧರ್ಮಸ್ಥಳದಲ್ಲಿ ಇಂದು ಬೆಳಗ್ಗೆ 6.30 ರಿಂದ ಇಂದು ಮಧ್ಯಾಹ್ನ 1.30 ತನಕ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಗೇ ಗ್ರಹಣದ ಅವಧಿ ಮುಗಿದ ನಂತರ ಎಂದರೆ ರಾತ್ರಿ 7.30ಕ್ಕೆ ದೇಗುಲದ ಬಾಗಿಲು ಮತ್ತೆ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಮತ್ತೊಂದು ಕಡೆ ನಾಗಾರಾಧನೆಯ ಪ್ರಮುಖ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕೂಡ ಸಮಯ ಬದಲಾವಣೆ ಮಾಡಲಾಗಿತ್ತು. ಈ ಮೂಲಕ ಗ್ರಹಣದ ಅವಧಿ ಮುಗಿದ ನಂತರ ಹಲವು ದೇಗುಲಗಳ ಬಾಗಿಲು ತೆರೆದಿದ್ದು, ಭಕ್ತರು ಈಗ ದೇವರ ದರ್ಶನ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಕೂಡ ದೇವಸ್ಥಾನಗಳ ಸಮಯ ಬದಲಾವಣೆ ಆಗಿತ್ತು.

ಯಾವ ಭಾಗದಲ್ಲಿ ಚಂದ್ರಗ್ರಹಣ ದರ್ಶನ?

ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣವಾಗಿ ಕಾಣಿಸಿದರೂ, ಕರ್ನಾಟಕದಲ್ಲಿ ಮಾತ್ರ ಭಾಗಶಃ ಗೋಚರವಾಗಿದೆ. ಕರ್ನಾಟಕದಲ್ಲಿ ಕೇವಲ 9 ನಿಮಿಷಗಳ ಕಾಲ ಚಂದ್ರಗ್ರಹಣ ಗೋಚರವಾಗಿ ಜನರು ಕಣ್ತುಂಬಿಕೊಂಡರು. 2026ರ ಪ್ರಮುಖ ಚಂದ್ರಗಹಣ ಇದಾಗಿದ್ದು, ಜಗತ್ತಿನಾದ್ಯಂತ ಖಗೋಳ ವಿಜ್ಞಾನಿಗಳು & ಸಂಶೋಧಕರು ಈ ಸಮಯಕ್ಕಾಗಿ ಕಾದು ಕುಳಿತಿದ್ದರು. ಸಂಜೆ 6 ಗಂಟೆ 47 ನಿಮಿಷಕ್ಕೆ ಈ ಚಂದ್ರಗ್ರಹಣವು ಕೊನೆಗೊಂಡಿತು. ಅದರಲ್ಲೂ ಸಂಜೆ 6 ಗಂಟೆ 33 ನಿಮಿಷಕ್ಕೆ ಚಂದ್ರಗ್ರಹಣ ಅತಿ ಉತ್ತುಂಗದ ಸ್ಥಿತಿಗೆ ತಲುಪಿ, ನಂತರ 6 ಗಂಟೆ 40 ನಿಮಿಷದ ನಂತರ ಗ್ರಹಣ ಮುಕ್ತವಾಗುತ್ತಾ ಬಂತು.

ಚಂದ್ರನ ಮೇಲೆ ನೆಲೆಸಲು ಪ್ಲಾನ್!

ಕೆಲವು ದಿನದ ಹಿಂದಷ್ಟೇ ಸೂರ್ಯಗ್ರಹಣ ಕೂಡ ಸಂಭವಿಸಿತ್ತು, ಈಗ ಚಂದ್ರಗ್ರಹ ಕೂಡ ಸಂಭವಿಸಿದೆ. ಈ ಮೂಲಕ ಖಗೋಳ ವಿಜ್ಞಾನಿಗಳು ಮತ್ತೊಮ್ಮೆ ಬಾಹ್ಯಾಕಾಶದಲ್ಲಿ ವಿಸ್ಮಯ ಕಣ್ತುಂಬಿಕೊಂಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಗ್ರಹಣ ಅಧ್ಯಯನ ಬಹುಮುಖ್ಯ ಮನುಷ್ಯರು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ನೆಲೆಸಲು ಕೂಡ ಇದು ಸಹಾಯ ಮಾಡುತ್ತದೆ. ಹೀಗಾಗಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣದ ಅಧ್ಯಯನಕ್ಕೆ ವಿಜ್ಞಾನಿಗಳು ಒತ್ತು ನೀಡುತ್ತಾರೆ. ಈಗಾಗಲೇ ನಡೆದಿರುವ ಅಧ್ಯಯನಗಳ ಪ್ರಕಾರ ಚಂದ್ರನ ಮೇಲೆ ನೀರು ಕೂಡ ಲಭ್ಯವಿದ್ದು, ಮನುಷ್ಯರು ಬದುಕಲು ಆಗುತ್ತಾ? ಎಂಬ ಅಧ್ಯಯನ ನಡೆಯುತ್ತಾ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+