Get Updates
Get notified of breaking news, exclusive insights, and must-see stories!

Sanju Samson: ವೆಸ್ಟ್‌ ಇಂಡೀಸ್‌ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್‌ಗೆ ಗೌತಮ್‌ ಗಂಭೀರ್ ಶಹಭಾಸ್‌ಗಿರಿ

Sanju Samson: ಟಿ20 ವಿಶ್ವಕಪ್‌ 2026ರ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವು ಭಾರತಕ್ಕೆ ಜಯ ತಂದುಕೊಟ್ಟಿದ್ದಲ್ಲದೆ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳನ್ನೂ ಬದಲಿಸುವಂತೆ ಮಾಡಿದೆ. ಹಲವು ಬಾರಿ ತಂಡದಿಂದ ಹೊರಗಿಟ್ಟಿದ್ದ ಕೋಚ್ ಗಂಬೀರ್ ಅವರೇ ಅವರ ಆಟಕ್ಕೆ ಮನಸೋತು ಬಿರುದೊಂದನ್ನು ಕೊಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ತಂಡದಿಂದ ಹಲವು ಬಾರಿ ಹೊರಬಿದ್ದಿದ್ದ ಸಂಜು ಸ್ಯಾಮ್ಸನ್, ಈಗ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಂಭೀರ್ ಅವರ ಮನಗೆದ್ದಿದ್ದಾರೆ. ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ನೋಡಿದ ಗಂಭೀರ್, ಅವರನ್ನು "ವಿಶ್ವದರ್ಜೆಯ ಬ್ಯಾಟರ್" ಎಂದು ಕರೆದಿದ್ದಾರೆ.

Sanju Samson s 97 vs West Indies Forces Gambhir s U-Turn India Storm Into T20 World Cup Semifinals

ಭಾರತ್ ಸೆಮಿಫೈನಲ್‌ ಎಂಟ್ರಿಗೆ ಕಾರಣರಾದ ಸಂಜು

ಭಾರತದ ಟಾಪ್‌ ಆರ್ಡರ್ ಬ್ಯಾಟರ್‌ಗಳ ವೈಫಲ್ಯದ ನಡುವೆ, ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಅಜೇಯ 97 ರನ್ ಕಲೆಹಾಕಿದರು. ಈ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಮತ್ತೊಂದೆಡೆ, ಅವರು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು (ಟಿ20 ವಿಶ್ವಕಪ್ ಚೇಸಿಂಗ್‌ನಲ್ಲಿ ಗರಿಷ್ಠ ರನ್) ಹಿಂದಿಕ್ಕಿದರು.

ಹಲವು ಬಾರಿ ಹೊರಗುಳಿದಿದ್ದ ಸ್ಯಾಮ್ಸನ್‌

ಏಷ್ಯಾ ಕಪ್ 2025 ವೇಳೆ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಕಾರಣ ಸಂಜು ಸ್ಯಾಮ್ಸನ್ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಲಾಯಿತು. ನಂತರ ಜಿತೇಶ್ ಶರ್ಮಾ ಅವರು ಆಡುವ 11ರ ಬಳಕ್ಕೆ ಸೇರಿಕೊಂಡ ನಂತರ ಅವರನ್ನು ಸಂಪೂರ್ಣವಾಗಿ ತಂಡದಿಂದ ಹೊರಗಿಡಲಾಯಿತು.

ಸಂಜು ವಿಚಾರದಲ್ಲಿ ಗಂಭೀರ್ ಯು-ಟರ್ನ್

ಟೀಮ್ ಇಂಡಿಯಾದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಗುತ್ತಿತ್ತು ಎಂಬ ಚರ್ಚೆಯ ನಡುವೆಯೇ, ಪರಿಸ್ಥಿತಿಗಳು ಗಂಭೀರ್ ಅವರ ನಿರ್ಧಾರವನ್ನು ಬದಲಿಸುವಂತೆ ಮಾಡಿದವು. ಆರಂಭಿಕ ಆಟಗಾರನಾಗಿ ಶುಭಮನ್ ಗಿಲ್ ಸತತವಾಗಿ ರನ್ ಗಳಿಸಲು ವಿಫಲರಾದಾಗ, ಅವರ ಜಾಗಕ್ಕೆ ಇಶಾನ್ ಕಿಶನ್ ಅವರನ್ನು ಕರೆತರಲಾಯಿತು. ಈ ಸಂದರ್ಭದಲ್ಲೂ ಸಂಜು ಸ್ಯಾಮ್ಸನ್ ಬೆಂಚ್ ಕಾಯಬೇಕಾಯಿತು.

ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯಗಳ ವೇಳೆ, ಫಾರ್ಮ್‌ನಲ್ಲಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆಗೆ ಒಳಗಾದರು. ಅಭಿಷೇಕ್ ಅಲಭ್ಯತೆಯಿಂದಾಗಿ ಅನಿವಾರ್ಯವಾಗಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಯಿತು. ಸಿಕ್ಕ ಅಲ್ಪ ಅವಕಾಶದಲ್ಲೇ ಅಬ್ಬರಿಸಿದ ಕೇರಳದ ಈ ಬ್ಯಾಟರ್, ಕೇವಲ 8 ಎಸೆತಗಳಲ್ಲಿ 22 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಏನೆಂಬುದನ್ನು ಸಾಬೀತುಪಡಿಸಿದರು.

ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 76 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿತು. ಈ ಸೋಲು ಭಾರತವನ್ನು ಟೂರ್ನಿಯಿಂದ ಹೊರಬೀಳುವ ಭೀತಿಗೆ ತಳ್ಳಿತು. ಈ ಕಠಿಣ ಪರಿಸ್ಥಿತಿಯಲ್ಲಿ ತಂಡದಲ್ಲಿ ಬದಲಾವಣೆ ಕೋಚ್ ಮತ್ತು ಮ್ಯಾನೇಜ್‌ಮೆಂಟ್‌ಗೆ ಅನಿವಾರ್ಯವಾಯಿತು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಭಾರತಕ್ಕೆ ದೊಡ್ಡ ತಲೆನೋವಾಯಿತು. ತಂಡದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಬಲಪಡಿಸಲು ಮತ್ತು ಅಗ್ರ ಕ್ರಮಾಂಕದಲ್ಲಿ ಸ್ಥಿರತೆ ತರಲು, ಅನಿವಾರ್ಯವಾಗಿ ಫಿನಿಶರ್ ರಿಂಕು ಸಿಂಗ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡಲಾಯಿತು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ಅವರಿಗೆ ಆರಂಭಿಕ ಆಟಗಾರನ ಜವಾಬ್ದಾರಿಯನ್ನು ನೀಡಲಾಯಿತು.

ಟೀಂ ಇಂಡಿಯಾಗೆ ವರದಾನವಾದ ಸಂಜು

ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಿದ ನಿರ್ಧಾರವು ಭಾರತ ತಂಡಕ್ಕೆ ವರದಾನವಾಗಿ ಪರಿಣಮಿಸಿತು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ 24 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಟಿ20 ವಿಶ್ವಕಪ್ ಅಭಿಯಾನವು ಜೀವಂತವಾಗಿರುವಂತೆ ನೋಡಿಕೊಂಡರು. ಆದರೆ, ಅವರ ಅಸಲಿ ಬ್ಯಾಟಿಂಗ್‌ ಪ್ರದರ್ಶನ ಕಂಡುಬಂದಿದ್ದು ಭಾನುವಾರದ ಪಂದ್ಯದಲ್ಲಿ. ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಿ ಅಜೇಯ 97 ರನ್ ಸಿಡಿಸಿದರು. ಈ ಅಮೋಘ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡವು ಜಯಭೇರಿ ಬಾರಿಸಿ ಅಧಿಕೃತವಾಗಿ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿತು.

ಸಂಜು 'ವಿಶ್ವದರ್ಜೆ'ಯ ಆಟಗಾರ ಎಂದ ಗಂಭೀರ್

ವೆಸ್ಟ್ ಇಂಡೀಸ್ ವಿರುದ್ಧದ ಭರ್ಜರಿ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಅವರನ್ನು "ವಿಶ್ವದರ್ಜೆಯ" ಆಟಗಾರ ಎಂದು ಘೋಷಿಸಿದರು. ವಿಶೇಷ ಅಂದ್ರೆ, ಇದೇ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಸ್ಯಾಮ್ಸನ್ ಅವರು ಹೆಚ್ಚಿನ ಬಾರಿ ಬೆಂಚ್ ಕಾಯುವ ಮೂಲಕ ಆಡುವ 11ರ ಬಳಗದಿಂದ ಹೊರಗುಳಿದಿದ್ದರು. ಆದರೆ ಈಗ ಅವರ ಅಮೋಘ ಪ್ರದರ್ಶನವು ಕೋಚ್ ಅವರ ನಿಲುವನ್ನೇ ಬದಲಿಸುವಂತೆ ಮಾಡಿದೆ.

"ಅವರು ಒಬ್ಬ ವಿಶ್ವದರ್ಜೆಯ ಆಟಗಾರ, ಸಂಜು ಎಂತಹ ಅದ್ಭುತ ಆಟಗಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ತಂಡ ಸಂಕಷ್ಟದಲ್ಲಿ ಸಿಲುಕಿದಾಗ ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಒತ್ತಡದ ಸಮಯದಲ್ಲಿ ಅವರು ಯಾವ ರೀತಿ ಆಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಆಡುವವರ ಬಾಯಲ್ಲಿ ಹೊಗಳಿಸಿಕೊಳ್ಳುವ ಕೆಲಸವನ್ನು ಸಂಜು ಸ್ಯಾಮ್ಸನ್‌ ಅವರು ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+