Get Updates
Get notified of breaking news, exclusive insights, and must-see stories!

Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ

Lunar Eclipse 2026: ಮಾರ್ಚ್ 3ರಂದು ಮಂಗಳವಾರ ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಎಲ್ಲರ ಗಮನ ಈಗ ದೇವಸ್ಥಾನಗಳತ್ತ ನೆಟ್ಟಿದೆ. ಗ್ರಹಣದ 'ಸೂತಕ'ದ ಕಾರಣದಿಂದಾಗಿ ಕರ್ನಾಟಕದ ಕಾಶಿಯಿಂದ ಹಿಡಿದು ತಿರುಪತಿಯವರೆಗೆ ಬಹುತೇಕ ಪ್ರಮುಖ ದೇವಸ್ಥಾನಗಳ ಪೂಜೆ ಮತ್ತು ದರ್ಶನದ ಅವಧಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಮಂಗಳವಾರ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಈ ಗ್ರಹಣವು ಮಧ್ಯಾಹ್ನ 03:20ಕ್ಕೆ ಆರಂಭವಾಗಿ ಸಂಜೆ 06:47ಕ್ಕೆ ಕೊನೆಗೊಳ್ಳಲಿದೆ. ಭಾರತದಲ್ಲಿ ಚಂದ್ರೋದಯದ ನಂತರ ಅಂದರೆ ಸಂಜೆ 6:22ರಿಂದ 6:47ರವರೆಗೆ ಸುಮಾರು 25 ನಿಮಿಷಗಳ ಕಾಲ ಗೋಚರಿಸಲಿದೆ. ಇದು ವರ್ಷದ ಅತ್ಯಂತ ದೀರ್ಘವಾದ ಗ್ರಹಣ ಎನ್ನಲಾಗಿದ್ದು, ಭಕ್ತಾದಿಗಳ ಮಾಹಿತಿಗಾಗಿ ದೇವಸ್ಥಾನವಾರು ಪರಿಷ್ಕೃತ ಸಮಯದ ವಿವರ ಇಲ್ಲಿದೆ.

Lunar Eclipse 2026

1. ತಿರುಪತಿ ತಿರುಮಲ: 10 ಗಂಟೆ ದರ್ಶನ ಸ್ಥಗಿತ

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಹಾಗೂ ಪ್ರಮುಖ ದೇಗುಲವಾದ ತಿರುಮಲದಲ್ಲಿ ಗ್ರಹಣದ ಪ್ರಭಾವ ದೀರ್ಘವಾಗಿರಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7:30ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಗ್ರಹಣ ಮುಕ್ತಾಯಗೊಂಡು ಸಂಪ್ರೋಕ್ಷಣೆ ನಡೆದ ನಂತರ ರಾತ್ರಿ 8 ಗಂಟೆಯ ನಂತರವಷ್ಟೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು.

2. ಶ್ರೀ ಕ್ಷೇತ್ರ ಧರ್ಮಸ್ಥಳ

ಧರ್ಮಸ್ಥಳದಲ್ಲಿ ಬೆಳಿಗ್ಗೆ 6:30ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1:30ಕ್ಕೆ ದೇಗುಲ ಮುಚ್ಚಲಿದ್ದು, ಗ್ರಹಣದ ಅವಧಿ ಮುಗಿದ ನಂತರ ರಾತ್ರಿ 7:30ಕ್ಕೆ ಪುನಃ ಬಾಗಿಲು ತೆರೆಯಲಾಗುವುದು.

3. ಕುಕ್ಕೆ ಸುಬ್ರಹ್ಮಣ್ಯ: ಸೇವೆಗಳು ರದ್ದು

ನಾಗಾರಾಧನೆಯ ಪ್ರಮುಖ ಕೇಂದ್ರವಾದ ಕುಕ್ಕೆಯಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 2 ಮತ್ತು 3ರಂದು 'ಸರ್ಪ ಸಂಸ್ಕಾರ' ಸೇರಿದಂತೆ ಯಾವುದೇ ಪ್ರಮುಖ ಸೇವೆಗಳು ಇರುವುದಿಲ್ಲ. ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ. ನಂತರ ಬಾಗಿಲು ಮುಚ್ಚಲಾಗುತ್ತದೆ. ಅಂದು ಮಧ್ಯಾಹ್ನದ ಅನ್ನದಾಸೋಹ ವ್ಯವಸ್ಥೆ ಇರುವುದಿಲ್ಲ. ಸಂಜೆ 7ರ ಬಳಿಕ ಮಹಾಪೂಜೆ ನಡೆದು ದರ್ಶನ ಲಭ್ಯವಾಗಲಿದೆ.

ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿಯೂ ದರ್ಶನದ ಸಮಯ ಬದಲು

ನಗರದ ಐತಿಹಾಸಿಕ ದೇವಾಲಯಗಳಲ್ಲಿ ಗ್ರಹಣ ಮೋಕ್ಷದವರೆಗೆ ಪೂಜೆಗಳು ಸ್ಥಗಿತಗೊಳ್ಳಲಿವೆ. ಮಾರ್ಚ್ 3ರ ಮಂಗಳವಾರ ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಪ್ರಮುಖ ಹಾಗೂ ಐತಿಹಾಸಿಕ ದೇವಾಲಯಗಳ ಪೂಜಾ ಮತ್ತು ದರ್ಶನ ಸಮಯವನ್ನು ಪರಿಷ್ಕರಿಸಲಾಗಿದೆ. ಗ್ರಹಣದ ಸೂತಕ ಮತ್ತು ಪುಣ್ಯಕಾಲದ ಕಾರಣದಿಂದಾಗಿ ಮಧ್ಯಾಹ್ನದಿಂದ ಸಂಜೆಯವರೆಗೆ ಭಕ್ತರಿಗೆ ದೇವರ ದರ್ಶನ ಲಭ್ಯವಿರುವುದಿಲ್ಲ. ನಗರದ ಪ್ರಮುಖ ದೇವಾಲಯಗಳಲ್ಲಿ ಪೂಜಾ ವಿವರಗಳು ಇಲ್ಲಿವೆ.

Lunar Eclipse 2026

ಗವಿಗಂಗಾಧರೇಶ್ವರ ದೇವಾಲಯ, ಗವಿಪುರಂ: ಗವಿಪುರಂನ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದಲ್ಲಿ ಗ್ರಹಣದ ಪ್ರಯುಕ್ತ ಬೆಳಿಗ್ಗೆಯಿಂದಲೇ ಪೂಜಾ ವ್ಯತ್ಯಯವಾಗಲಿದೆ. ಬೆಳಿಗ್ಗೆ 9:00 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಿದ್ದು, ಗ್ರಹಣ ಮೋಕ್ಷದ ನಂತರ ರಾತ್ರಿ 7:45ಕ್ಕೆ ಪುನಃ ತೆರೆಯಲಿದೆ. ಲೋಕಕಲ್ಯಾಣಕ್ಕಾಗಿ ಮತ್ತು ಗ್ರಹಣದೋಷ ನಿವಾರಣೆಗಾಗಿ ಮಾರ್ಚ್ 4ರಂದು ದೇಗುಲದಲ್ಲಿ ವಿಶೇಷ 'ಗ್ರಹಣ ಶಾಂತಿ ಹೋಮ' ಹಮ್ಮಿಕೊಳ್ಳಲಾಗಿದೆ.

ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರ: ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇಗುಲದಲ್ಲಿ ಗ್ರಹಣದ ಕುರಿತು ಭಕ್ತರಿಗೆ ಮಾಹಿತಿ ನೀಡಲು ಈಗಾಗಲೇ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ 11:00 ಗಂಟೆಗೆ ಬಾಗಿಲು ಮುಚ್ಚಲಾಗುತ್ತದೆ. ಸಂಜೆ 7:30ಕ್ಕೆ ಶುದ್ಧೀಕರಣದ ಬಳಿಕ ದರ್ಶನ ಆರಂಭವಾಗಲಿದೆ. ಮಧ್ಯಾಹ್ನ 3:10ರಿಂದ ಸಂಜೆ 6:47ರವರೆಗೆ ಗ್ರಹಣ ಕಾಲವಿರುವುದರಿಂದ, ದೋಷವಿರುವ ರಾಶಿಯವರು ಶಾಂತಿ ಪೂಜೆ ಮಾಡಿಸುವಂತೆ ಸೂಚಿಸಲಾಗಿದೆ.

ದೊಡ್ಡ ಗಣೇಶ ದೇವಾಲಯ: ಬಸವನಗುಡಿಯ ಪ್ರಸಿದ್ಧ ದೊಡ್ಡ ಗಣೇಶ ಮತ್ತು ಮಡಲೆ ಬಸವಣ್ಣ ದೇಗುಲಗಳ ಸಮಯದಲ್ಲೂ ಬದಲಾವಣೆಯಾಗಿದೆ. ಮಧ್ಯಾಹ್ನದ ನಂತರ ದರ್ಶನ ಸ್ಥಗಿತಗೊಳ್ಳಲಿದೆ. ಗ್ರಹಣ ಮುಕ್ತಾಯವಾದ ನಂತರ ರಾತ್ರಿ 7:45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಾಗುವುದು. ಸಾಮಾನ್ಯವಾಗಿ ಸಂಜೆ 5:30ಕ್ಕೆ ಆರಂಭವಾಗುತ್ತಿದ್ದ ದರ್ಶನ ಇಂದು ಗ್ರಹಣದ ಕಾರಣ ತಡವಾಗಲಿದೆ.

ಬನಶಂಕರಿ ದೇವಾಲಯ: ಪ್ರಸಿದ್ಧ ಬನಶಂಕರಿ ದೇಗುಲದಲ್ಲಿ ಗ್ರಹಣದ ಅವಧಿಯಲ್ಲಿ ಯಾವುದೇ ವಿಶೇಷ ಪೂಜೆಗಳು ಇರುವುದಿಲ್ಲ. ಮಧ್ಯಾಹ್ನ ದೇಗುಲದ ಬಾಗಿಲು ಮುಚ್ಚಲಿದ್ದು, ಗ್ರಹಣದೋಷ ನಿವಾರಣಾ ಪೂಜೆಗಳ ನಂತರ ಸಂಜೆ 7:00 ಗಂಟೆಯಿಂದ ನಿತ್ಯ ಪೂಜೆ ಮತ್ತು ದರ್ಶನಕ್ಕೆ ಅವಕಾಶ ನೀಡಲಾಗುವುದು.

ಗ್ರಹಣದ ಅವಧಿಯಲ್ಲಿ ದೇವಸ್ಥಾನಗಳು ಮುಚ್ಚಿರುವುದರಿಂದ ಭಕ್ತರು ಈ ಮೇಲಿನ ಸಮಯವನ್ನು ಗಮನಿಸಿ ತಮ್ಮ ಭೇಟಿಯನ್ನು ಯೋಜಿಸಬೇಕೆಂದು ದೇವಾಲಯದ ಆಡಳಿತ ಮಂಡಳಿಗಳು ವಿನಂತಿಸಿವೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ದೇವಾಲಯದ ಸೂಚನಾ ಫಲಕಗಳನ್ನು ಗಮನಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+