ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

|
Google Oneindia Kannada News

Recommended Video

Lok Sabha Elections 2019 : 2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು! | Oneindia Kannada

ಬೆಂಗಳೂರು, ಮಾರ್ಚ್ 11: ಕೇಂದ್ರ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಏಪ್ರಿಲ್ 18 ರಂದು 14 ಸ್ಥಾನ, ಏಪ್ರಿಲ್ 23ರಂದು ಉಳಿದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 23ರಂದು ಘೋಷಣೆಯಾಗಲಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 23ರಂದು ಮತಗಳ ಎಣಿಕೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ಏಪ್ರಿಲ್‌ 18ರಂದು ನಡೆಯಲಿದೆ.

3ನೇ ಹಂತದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. 4ನೇ ಹಂತ 29 ಏಪ್ರಿಲ್, 5ನೇ ಹಂತ ಮೇ6ರಂದು, ಮೇ 12ಕ್ಕೆ 6ನೇ ಹಂತ, 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.

ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಆಂಧ್ರ, ಅರುಣಾಚಲ, ಗೋವಾ, ಗುಜರಾತ್‌, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್- ನಿಕೋಬಾರ್, ದಾದ್ರಾ ನಗರ್‌ಹವೇಲಿ, ದಮನ್ ಅಂಡ್ ದಿಯು, ಲಕ್ಷದ್ವೀಪ, ದಿಲ್ಲಿ, ಪುದುಚೇರಿ, ಚಂಡೀಗಢ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ.

ಮೂರು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಅಸ್ಸಾಂ, ಛತ್ತೀಸ್‌ಗಢ

ನಾಲ್ಕುಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ

ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಮ್ಮು ಮತ್ತು ಕಾಶ್ಮೀರ

ಏಳು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ

ಹಾಗಾದರೆ 2019ರ ಲೋಕಸಭಾ ಚುನಾವಣೆಯ ವಿಶೇಷತೆಗಳೇನು ಎನ್ನುವುದನ್ನು ಮುಂದೆ ನೋಡೋಣ..

ಪ್ರತಿ ಮನೆಗೂ ಮತ ಮಾರ್ಗದರ್ಶಿ

ಪ್ರತಿ ಮನೆಗೂ ಮತ ಮಾರ್ಗದರ್ಶಿ

ಈ ಬಾರಿ ಮತದಾರ ಮಾರ್ಗದರ್ಶಿಯನ್ನು ಪ್ರತಿ ಮನೆ ಮನೆಗೂ ಹಂಚಲಾಗುವುದು. ಇದರಲ್ಲಿ ದಿನಾಂಕ, ಸಮಯ, ಬೂತ್ ಮಟ್ಟದ ಅಧಿಕಾರಿಗಳ ವಿವರ, ಮಹತ್ವದ ವೆಬ್‌ಸೈಟ್‌ಗಳು, ಸಹಾಯವಾಣಿ ಸಂಖ್ಯೆ, ಮತಗಟ್ಟೆಯಲ್ಲಿ ಗುರುತಿಗೆ ನೀಡಬೇಕಾದ ದಾಖಲೆ, ಮತದಾರರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ವಿವರಗಳನ್ನು ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ನೀಡಲಾಗುತ್ತದೆ.

ಜಿಪಿಎಸ್ ಮೂಲಕ ಇವಿಎಂ ಮೇಲೆ ನಿಗಾ

ಜಿಪಿಎಸ್ ಮೂಲಕ ಇವಿಎಂ ಮೇಲೆ ನಿಗಾ

ಮತದಾನಕ್ಕೆ ಬಳಸಿದ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಮೇಲೆ ನಿಗಾ ಇಡುವ ಸಲುವಾಗಿ ಚುನಾವಣಾ ಆಯೋಗ ಜಿಪಿಎಸ್ ತಂತ್ರಜ್ಞಾನ ಬಳಸಿಕೊಳ್ಳಳಿದೆ. ಚುನಾವಣೆಗೆ ಮೀಸಲಿಟ್ಟ ಎಲ್ಲಾ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಚಲನೆಯ ಮೇಲೆ ಆರಂಭದಿಂದ ಅಂತ್ಯದವರೆಗೂ ನಿಗಾ ಇಡಲಿದೆ. ವಿವಿಪ್ಯಾಟ್ ತುಂಬಿದ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ.

ಲೋಕಸಭಾ ಚುನಾವಣೆ ಘೋಷಣೆ : ಮಾದರಿ ನೀತಿ ಸಂಹಿತೆ ಎಂದರೇನು? ಲೋಕಸಭಾ ಚುನಾವಣೆ ಘೋಷಣೆ : ಮಾದರಿ ನೀತಿ ಸಂಹಿತೆ ಎಂದರೇನು?

ಮೈಕ್ ಬಳಕೆ ಮೇಲೆ ನಿಷೇಧ

ಮೈಕ್ ಬಳಕೆ ಮೇಲೆ ನಿಷೇಧ

ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಅವುಗಳ ಏಜೆಂಟ್‌ಗಳು ಬಳಸುವ ಮೈಕ್‌ಗಳ ಬಳಕೆಯ ಮೇಲೆ ಕೆಲವು ನಿರ್ಬಂಧಗಳನ್ನು ಆಯೋಗ ಹೇರಿದೆ. ಮೈಕ್‌ಗಳ ಮೂಲಕ ಪ್ರಚಾರದಿಂದಾಗಿ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳು, ಕಾಯಿಲೆ ಪೀಡಿತರು ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು, ಹೆಚ್ಚು ಹಿರಿಯ ನಾಗರಿಕರು ವಾಸವಾಗಿರುವ ಸ್ಥಳಗಳಲ್ಲಿ ಮೈಕ್‌ಗಳನ್ನು ಬಳಸುವಂತಿಲ್ಲ.

ಒಟ್ಟ 90 ಕೋಟಿ ಮತದಾರರು

ಒಟ್ಟ 90 ಕೋಟಿ ಮತದಾರರು

ದೇಶದ ಒಟ್ಟು ಮತದರಾರರ ಸಂಖ್ಯೆ 90 ಕೋಟಿಗೆ ಏರಿಕೆಯಾಗಿದೆ. ಜ.1ರಂದು ಪ್ರಕಟವಾದ ಮತದಾರರ ಪಟ್ಟಿ ಪ್ರಕಾರ 2014ರಲ್ಲಿ 81.45 ಕೋಟಿ ಮತದಾರರಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 90 ಕೋಟಿಯಷ್ಟಾಗಿದೆ.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?

ಮತಯಂತ್ರದ ಮೇಲೆ ಅಭ್ಯರ್ಥಿಯ ಫೋಟೊ

ಮತಯಂತ್ರದ ಮೇಲೆ ಅಭ್ಯರ್ಥಿಯ ಫೋಟೊ

ವಿವಿಪ್ಯಾಟ್ ಹಾಗೂ ಅಂಚೆ ಮತದಾನದ ಪೇಪರ್‌ನಲ್ಲಿ ಆಯಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಫೋಟೊವನ್ನು ಪ್ರಕಟಿಸಲಾಗುತ್ತದೆ. ಒಂದೇ ಹೆಸರಿನ ಅಭ್ಯರ್ಥಿಗಳು ಒಂದೇ ಕ್ಷೇತ್ರದಿಂದ ವಿವಿಧ ಪಕ್ಷಗಳಿಂದ ಚುನಾವಣೆ ಸ್ಪರ್ಧೆಯಲ್ಲಿರುವ ಸಂದರ್ಭದಲ್ಲಿ ಮತದಾರರಿಗೆ ತಾವು ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತಿದ್ದೇವೆ ಎನ್ನುವ ಗೊಂದಲ ಉಂಟಾಗುತ್ತದೆ ಹಾಗಾಗಿ ಎಲ್ಲಾ ಅಭ್ಯರ್ಥಿಗಳ ಫೋಟೊವನ್ನು ಮತಯಂತ್ರದ ಮೇಲೆ ಅಂಟಿಸಲಾಗುತ್ತದೆ.

ಫಲಿತಾಂಶ ವಿಳಂಬ? ಎಲ್ಲೆಡೆ ವಿವಿ ಪ್ಯಾಟ್ ಬಳಕೆ

ಫಲಿತಾಂಶ ವಿಳಂಬ? ಎಲ್ಲೆಡೆ ವಿವಿ ಪ್ಯಾಟ್ ಬಳಕೆ

ಈ ಬಾರಿ ದೇಶದ ಎಲ್ಲಾ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಈ ಲೋಕಸಭಾ ಚುನಾವಣೆ ಮತ ಎಣಿಕೆ ವೇಳೆ ಒಂದು ಲೋಕಸಭಾ ಕ್ಷೇತ್ರದಲ್ಲಿ ಬರುವ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 1 ಮತಗಟ್ಟೆಯ ವಿವಿಪ್ಯಾಟ್‌ನಲ್ಲಿರುವ ಮುದ್ರಿತ ಮತಪತ್ರಗಳನ್ನು ಎಣಿಸಿ ಇವಿಎಂ ಜೊತೆ ತಾಳೆ ಹಾಕಲು ನಿರ್ಧರಿಸಲಾಗಿದೆ.

1950 ನಂಬರ್‌ಗೆ ಎಸ್‌ಎಂಎಸ್ ಕಳುಹಿಸಿ ಪಟ್ಟೀಲಿ ಹೆಸರಿದೆಯೇ ನೋಡಬಹುದು

1950 ನಂಬರ್‌ಗೆ ಎಸ್‌ಎಂಎಸ್ ಕಳುಹಿಸಿ ಪಟ್ಟೀಲಿ ಹೆಸರಿದೆಯೇ ನೋಡಬಹುದು

ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಇಲ್ಲವೇ ಎಂಬುದನ್ನು ಜನತೆಗೆ ಖಚಿತಪಡಿಸಲು ಕೇಂದ್ರೀಯ ಚುನಾವಣಾ ಆಯೋಗ ಮತದಾರರ ಪರಿಶೀಲನೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಆರಂಭಿಸಿದೆ. ಇದರಡಿ 1950ಕ್ಕೆ ಎಸ್‌ಎಂಎಸ್ ಮಾಡುವ ಮೂಲಕ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.

English summary
election commission of India is taking some good initiative in this Lok sabha elections. Voters should aware of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X