• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಾದ ಹುಟ್ಟು ಹಾಕಿದ ಕೇರಳದ ಸಂಸದನ ಪತ್ನಿ ನಿಶಾ ಕಥೆ

By Mahesh
|

ತಿರುವನಂತಪುರಂ, ಮಾರ್ಚ್ 19: ಕೇರಳದ ಸಂಸದರೊಬ್ಬರ ಪತ್ನಿ ನಿಶಾ ಜೋಸ್ ಅವರು ತಮ್ಮ ಹಳೆ ನೆನಪುಗಳನ್ನು ಹಂಚಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. #MeToo ಅಭಿಯಾನದ ಭಾಗವಾಗಿ ತಮ್ಮ ಜೀವನ ಚರಿತ್ರೆಯ ಪುಟಗಳಲ್ಲಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ನಿಶಾ ಅವರು, ತಮಗೆ ಕಿರುಕುಳ ನೀಡಿದ ವ್ಯಕ್ತಿಯ ಹೆಸರು, ಗುರುತು, ವಿವರ ನೀಡಿಲ್ಲ. ಆದರೆ, ಶಾಸಕರೊಬ್ಬರ ಮಗ ಶೊನ್ ಜಾರ್ಜ್ ಎಂಬುವವರು ನಿಶಾ ವಿರುದ್ಧ ದೂರು ದಾಖಲಿಸಿದ್ದಾರೆ.

ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆಎಂ ಮಣಿ ಅವರ ಪುತ್ರ ಸಂಸದ ಜೋಸ್ ಮಣಿ ಪತ್ನಿ ನಿಶಾ ಅವರು ತಮ್ಮ 'The Other Side Of This Life-Snippets of my life as a Politician's Wife' ಪುಸ್ತಕದಲ್ಲಿ ತಮಗಾದ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ.

2012ರಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಕಿರುಕುಳ ನೀಡಿದ ವ್ಯಕ್ತಿ ಹೇಗಿಲ್ಲ ನಡೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ. ಆ ವ್ಯಕ್ತಿ ಮುರ್ನಾಲ್ಕು ಸಲ ನನ್ನ ಕಾಲನ್ನು ಮುಟ್ಟಿದರು. ಇದು ಆಕಸ್ಮಿಕ ಕ್ರಿಯೆ ಎಂದೆನಿಸಲಿಲ್ಲ. ಸ್ಪರ್ಶದ ಉದ್ದೇಶ ಏನು ಎಂಬುದು ತಿಳಿಯುತ್ತದೆ.

ನಿಶಾ ಜೋಸ್ ಅವರ ಪುಸ್ತಕದಲ್ಲಿ ಬಂದಿರುವ ಈ ಪ್ರಸಂಗದಲ್ಲಿ ಅಂದು ಜತೆಗಿದ್ದವರು ಯಾರು ಎಂದು ಹೇಳಿಲ್ಲವಾದರೂ, ಶಾಸಕ ಪಿಸಿ ಜಾರ್ಜ್ ಅವರ ಪುತ್ರ ಶಾನ್ ಜಾರ್ಜ್ ಅವರು ನಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಕೇರಳ ಕಾಂಗ್ರೆಸ್ (ಮಣಿ) ನಲ್ಲಿ ಇಬ್ಬರು ಕೂಡಾ ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The wife of a Kerala parliamentarian, Nisha Jose, has touched off a political controversy with #MeToo allegations in her memoir. Though she hasn't named anyone, Shone George, the son of a legislator, has filed a police complaint against her saying the allegations appear to point at him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more