ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದತ್ತಾಂಶ ಸೋರಿಕೆ, ಫೇಸ್ಬುಕ್ ಗೆ ನೋಟಿಸ್ ಜಾರಿ ಮಾಡಿದ ಭಾರತ

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 28: ಬಹುಚರ್ಚಿತ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್ಬುಕ್ ಗೆ ಭಾರತ ಸರಕಾರ ನೋಟಿಸ್ ಜಾರಿ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣಾ ರಣತಂತ್ರ ರೂಪಿಸುವ ಪ್ರಮುಖ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾಗೆ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿ ಮಾಡಲಾಗಿದೆ.

ಕಾಂಗ್ರೆಸ್ 'ಕೇಂಬ್ರಿಡ್ಜ್ ಅನಾಲಿಟಿಕಾ'ದ ಗ್ರಾಹಕ: ಮಾಜಿ ಉದ್ಯೋಗಿ ಬಿಚ್ಚಿಟ್ಟ ಸತ್ಯಕಾಂಗ್ರೆಸ್ 'ಕೇಂಬ್ರಿಡ್ಜ್ ಅನಾಲಿಟಿಕಾ'ದ ಗ್ರಾಹಕ: ಮಾಜಿ ಉದ್ಯೋಗಿ ಬಿಚ್ಚಿಟ್ಟ ಸತ್ಯ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಈ ನೋಟಿಸ್ ಜಾರಿ ಮಾಡಿದೆ. ಮತ್ತು ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ಏಪ್ರಿಲ್ 7ರ ಗಡುವು ನೀಡಿದೆ.

IT Ministry has sought information from Facebook over alleged data leak

ದತ್ತಾಂಶ ಸೋರಿಕೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರವಿಶಂಕರ್ ಪ್ರಸಾದ್, ಒಂದೊಮ್ಮೆ ದತ್ತಾಂಶ ಸೋರಿಕೆಯಲ್ಲಿ ಫೇಸ್ಬುಕ್ ಕೈವಾಡ ಇದೆ ಎಂದು ಗೊತ್ತಾದರೆ ಅದರ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಅವರಿಗೂ ಸಮನ್ಸ್ ನೀಡುತ್ತೇವೆ ಎಂದು ಗುಡುಗಿದ್ದರು.

ಇದೀಗ ಮೊದಲ ಬಾರಿಗೆ ನಡೆದಿದೆ ಎನ್ನಲಾದ ದತ್ತಾಂಶ ಸೋರಿಕೆಗೆ ಸಂಬಂಧಿಸಿದಂತೆ ಫೇಸ್ಬುಕ್ ಗೆ ನೋಟಿಸ್ ನೀಡಲಾಗಿದೆ.

English summary
Ministry of Communications and Information Technology has sought information from Facebook over alleged data leak, and has sought details by 7th April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X