Aishwarya Shivakumar: ಒನಕೆ ಓಬವ್ವನ ರೂಪದಲ್ಲಿ ಡಿ.ಕೆ ಶಿವಕುಮಾರ್ ಪುತ್ರಿ, ಯಾಕೆ ಗೊತ್ತಾ?

ಸದಾ ಜನರೊಂದಿಗೆ ಸಂಪರ್ಕದಲ್ಲಿರುವ, ಒಂದಿಲ್ಲ ಒಂದು ಕ್ರಿಯೇಟಿವಿಟಿ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಪುತ್ರಿ ಐಶ್ವರ್ಯಾ ಡಿ.ಕೆ ಶಿವಕುಮಾರ್‌ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಶಿವಕುಮಾರ್ ಅವರು ಒನಕೆ ಓಬವ್ವ ಅವರ ವೇಷ ತೊಟ್ಟು ಫೋಟೋಶೂಟ್ ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ಒನಕೆ ಓಬವ್ವ ಅವರ ವೇಷ ತೊಟ್ಟ ಬಗ್ಗೆ ಐಶ್ವರ್ಯ ಶಿವಕುಮಾರ್ ಅರ್ಥ ಪೂರ್ಣ ಕ್ಯಾಪ್ಷನ್‌ವೊಂದನ್ನು​ ಬರೆದುಕೊಂಡಿದ್ದಾರೆ.

DCM D K Shivakumar Daughter Aishwarya Shivakumar Dress Up Like A Onake Obavva

'ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ. ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. 'ಧೈರ್ಯಂ ಸರ್ವತ್ರ ಸಾಧನಂ.' ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ.

ನನ್ನ ಬಾಲ್ಯದ ರೋಲ್ ಮಾಡೆಲ್ ಒನಕೆ ಓಬವ್ವ, ನಾನು ಮೊದಲು 6ನೇ ತರಗತಿಯಲ್ಲಿ ನಾಟಕವೊಂದರಲ್ಲಿ ಓಬವ್ವನ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ ಐಕಾನಿಕ್ ವುಮೆನ್ ಪಾಡ್‌ಕ್ಯಾಸ್ಟ್ ಸೀಸನ್ 2ಗೆ ಇತ್ತೀಚಿಗೆ ನೀಡಿದ ಸಂದರ್ಶನದ ಸಂಚಿಕೆಗಾಗಿ ಆ ಪ್ರಮುಖ ಕ್ಷಣವನ್ನು ಮರುಸೃಷ್ಟಿಸಲು ನಾನು ಗೌರವ ಮತ್ತು ಸ್ಫೂರ್ತಿ ಪಡೆದಿದ್ದೇನೆ. ಓಬವ್ವನ ಸಾಂಪ್ರದಾಯಿಕ ಪರಂಪರೆಯನ್ನು ಗೌರವಿಸುವುದು ಮತ್ತು ನನ್ನ ಪ್ರಯಾಣಕ್ಕೆ ಸ್ಫೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯ ಶಿವಕುಮಾರ್ ಅವರ ಒನಕೆ ಓಬವ್ವ ವೇಷ ತೊಟ್ಟ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+