Ranjani Raghavan: ನಟನೆಯಲ್ಲಿ ದುಡಿದು ಶ್ರೀಮಂತರಾಗಲು ಸಾಧ್ಯವಿಲ್ಲ: ಕನ್ನಡತಿ ನಟಿ ರಂಜನಿ ಹೀಗಂದಿದ್ಯಾಕೆ?
ಒಂದು ಹೇಳುತ್ತೀನಿ, ಆ್ಯಕ್ಟಿಂಗ್‌ಯಿಂದ ದುಡಿದು ಶ್ರೀಮಂತರಾಗಲು ಸಾಧ್ಯವಿಲ್ಲ. ನಾನಲ್ಲ, ಶಾರುಕ್ ಖಾನ್ ಕೂಡ ಆಗಲ್ಲ ಎಂದು ನಟಿ ರಂಜನಿ ರಾಘವನ್ ಹೇಳಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಿನಿಮಾದವರು ನಮಗೇನೂ ಕೋಟ್ಯಂತರ ರೂಪಾಯಿ ಕೊಡುತ್ತಾರೆ ಎನ್ನುವುದೆಲ್ಲಾ ಹೈಪ್ ಮಾಡಿರೋದು. ಅವರು ದೊಡ್ಡ ಸ್ಟಾರ್ ಆಗಿರಬಹುದು. ಇವತ್ತು ಕೊಡುತ್ತಿರಬಹುದು ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ಒಂದು ಕಾಮನ್ ಸೆನ್ಸ್‌ಯಿಂದ ಹೇಳಬಹುದು. ಯಾವುದೇ ಆ್ಯಕ್ಟರ್ ಆದರೂ ಕೂಡ ನಟಯಿಂದ ದುಡ್ಡು ಮಾಡಲು ಆಗುವುದಿಲ್ಲ ಎಂದರು.

ಹಣ ಎನ್ನುವ ಆಲೋಚನೆ ಮೊದಲು ಬಂದರೆ ನಾವು ನಟ-ನಟಿಯಾರಗಲು ಸಾಧ್ಯವಿಲ್ಲ. ನಟನೆ ಮಾತ್ರವಲ್ಲ ಇಡಿ ಸಿನಿಮಾನೇ ಮಾಡೋಕಾಗಲ್ಲ. ಕಲೆ ಇದು. ಕಲೆಗೆ ಬೆಲೆ ಕೊಟ್ಟು ಬಂದಿರುವುದು ನಾನು. ಜನ ನಮ್ಮನ್ನು ಗೆಲ್ಲಿಸಿದರೆ ಗೆಲ್ಲಿಸುತ್ತಾರೆ. ಕಡಿಮೆ ಪ್ರಮಾಣದ ಯಶಸ್ಸು ಇರುವ ಇಂಡಸ್ಟ್ರಿ. ಸಿಎ ಮಾಡೋಕೆ ನಾಲ್ಕು ಶೇಕಡಾ ಯಶಸ್ಸು ಅಂದರೆ ನಮ್ಮದು ಎಲ್ಲೋ -0.006 ಆ ತರ ಇರುತ್ತೆ. ಬೇಕು ಎನ್ನುವನು ಬಡವ, ಸಾಕು ಎನ್ನುವನು ಶ್ರೀಮಂತ ಎಂದಿದ್ದಾರೆ.
ಕನ್ನಡದವರು ಕೂಡ ಈಗ ಓಪನ್ ಮೈಂಡೆಡ್ ಆಗುತ್ತಿದ್ದಾರೆ. ಮುಂಚಿತರ ಈಗಿಲ್ಲ. ತೆಲುಗುವಲ್ಲಿ ಕೊಡುವಂತಹ ರೀತಿ ಗಾಳ ಹಾಕಿ ಎಲ್ಲಾ ಚಿತ್ರಮಂದಿರಕ್ಕೆ ಕರೆ ತರುವ ಅವಶ್ಯಕತೆ ಇಲ್ಲ. ಜನರಿಗೆ ಮಸಾಲೆ ಕೊಟ್ರೆ, ಐಟಮ್ ಸಾಂಗ್ ಕೊಟ್ರೆ, ರೋಮ್ಯಾನ್ಸ್ ಕೊಟ್ರೆ ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವುದೆಲ್ಲಾ ಇತ್ತು. ಆದರೆ ಈಗ ಯಾರೂ ಯಾಮಾರಲ್ಲ ಇಲ್ಲಿ ಎಂದು ಹೇಳಿದರು.
ನನಗೆ ಯಾರೋ ಒಬ್ಬರು ತುಂಬಾ ಚೆನ್ನಾಗಿ ಹೇಳಿದರು. ತೆಲುಗುನಲ್ಲಿ ಪುಸ್ತಕ ಬಿಡುಗಡೆ ಆದರೆ, ಐನೂರು ಕಾಪಿ ಹೋದರೆ ವಾವ್ ಅಂತಾರೆ. ನನ್ನ ಕತೆ ಡಬ್ಬಿ ಇಪ್ಪತ್ತು ಸಾವಿರ ಕಾಪಿ ಹೋಗಿದೆ. ಅದರೆ ಇಲ್ಲಿನವರ ಬುದ್ಧಿಶಕ್ತಿಯ ಪ್ರಮಾಣ ಅಷ್ಟಿದೆ. ಅಷ್ಟಿಲ್ಲದೇ ನಮಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ ಎಂದು ನಟಿ ರಂಜನಿ ರಾಘವನ್ ಕನ್ನಡಿಗರ ಬುದ್ಧಿಮತ್ತೆಯ ಬಗ್ಗೆ ಹೊಗಳಿದ್ದಾರೆ.












Click it and Unblock the Notifications