Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
ಬೆಂಗಳೂರು, ಏಪ್ರಿಲ್ 20: ನಗರಗಳ ಹೊರತಾಗಿ ಕೆಲವು ಹಳ್ಳಿ ಭಾಗಗಳಲ್ಲಿ ಬಯಲು ಶೌಚಾಲಯ ಪದ್ಧತಿ ಇನ್ನೂ ಇದೆ. ಸರ್ಕಾರದ ಯೋಜನೆಗಳ ಹೊರತಾಗಿಯೂ ಅನೇಕ ಕಡೆ ಶೌಚಾಲಯ ಇಲ್ಲದ ಮನೆಗಳನ್ನು ನೀವು ಕಾಣಬಹುದು. ಆದರೆ ಇಲ್ಲೊಬ್ಬರು ಕಡಿಮೆ ಬೆಲೆಯ ಶೌಚಾಲಯವನ್ನು ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೌದು, ಇಲ್ಲಿ ಯಾವುದೇ ನೆಲ ಅಗೆದು, ಒಳಚರಂಡಿಗೆ ಸಂಪರ್ಕ ಕಲ್ಪಿಸಿ, ಮೂರು ಬದಿ ಗೊಡೆ ಕಟ್ಟಿ ಶೌಚಾಲಯ ನಿರ್ಮಿಸಿಲ್ಲ. ಆದರೂ ಒಳಗೆ ವೆಸ್ಟರ್ನ್ ಟಾಯ್ಲೆಟ್ ಸೀಟು ನೀವು ನೋಡಬಹುದು. ಇದು ಗೋಡೆ ಕಟ್ಟಿ ಟಾಯ್ಲೆಟ್ ನಿರ್ಮಾಣದ ಕಷ್ಟವನ್ನು, ಹೆಚ್ಚು ಖರ್ಚನ್ನು ತಪ್ಪಿಸುತ್ತದೆ.

ಬ್ಯಾರೆಲ್ ಆಕಾರದ ವಿನೂತನ ಟಾಯ್ಲೆಟ್
ಸಾಮಾಜಿಕ ಜಾಲತಾಣದಲ್ಲಿ ಡ್ರಮ್ (ಬ್ಯಾರೆಲ್) ರೀತಿಯ ವಿಶೇಷದಾದ, ನೀವು ಇದುವರೆಗೂ ನೋಡಿದರೆ ಟಾಯ್ಲೆಟ್ ಫೋಟೋವೊಂದು ಹರಿದಾಡುತ್ತಿದೆ. ನೋಡಲು ಡ್ರಮ್ ಆಕಾರದಲ್ಲಿ ಈ ವಿನೂತನ ಶೈಲಿ ಶೌಚಾಲಯ ಕಾಣುತ್ತದೆ. ಆದರೆ ಇದು ಅದಲ್ಲ. ಬದಲಾಗಿ ಲೀಕೆಜ್ ವಾಟರ್ ಟ್ಯಾಂಕ್‌ನಿಂದ ನಿರ್ಮಿಸಿರುವ ಶೌಚಾಲಯವಾಗಿದೆ.
ನೋಡಲು ಆಕರ್ಷಕ ಈ ಟಾಯ್ಲೆಟ್
ಈ ಶೌಚಾಲಯದ ಒಳಗೆ ವಿದೇಶಿ ಟಾಯ್ಲೆಟ್ ಸೀಟ್ ಅಳವಡಿಸಲಾಗಿದೆ. ಹೊರಗಿನಿಂದ ಶೌಚಾಲಯಕ್ಕೆ ಮೂರು ಬಣ್ಣ ಬಳಿಯಲಾಗಿದೆ. ಒಂದು ಬದಿಯಲ್ಲಿ ಡೋರ್ ಅಳವಡಿಸಿದ್ದು, ನೋಡಲು ಹೊಸ ವಿನ್ಯಾಸದಿಂದ ಕೂಡಿದೆ. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ Homes ಎಂಬ ಪೇಜ್ ಹಂಚಿಕೊಂಡಿದೆ.

ಇದರ ವಿಶೇಷತೆಗಳು ಏನು?
ನೀರಿಗೆ ಬಳಕೆ ಆಗದ ಲೀಕೆಜ್ ಟ್ಯಾಂಕರ್ ಅನ್ನು ಇಲ್ಲಿ ಬಳಸಲಾಗಿದೆ. ಬಾಗಿಲಿನ ಆಕಾರದಲ್ಲಿ ಕೊರೆದು ಅಲ್ಲಿ ಬಾಗಿಲು ಇರಿಸಲಾಗಿದೆ. ನೆಲದ ಸಮತಟ್ಟಿಗಾಗಿ ಬಾಕ್ಸ್ ರೀತಿಯಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಹೊರಗಿನಿಂದ ದೊಡ್ಡ ಡ್ರಮ್ (ಬ್ಯಾರೆಲ್) ರೀತಿಯಲ್ಲಿ ಕಾಣವುಂತೆ ಮಾಡಲಾಗಿದೆ. ಹೊಸ ಮತ್ತು ಒಳಗೆ ಲಾಕ್ ಅಳವಡಿಸಲಾಗಿದೆ. ಹೀಗಾಗಿ ಇದು ಕಡಿಮೆ ಖರ್ಚಿನ ಟಾಯ್ಲೆಟ್ ಆಗಿದೆ. ಮಧ್ಯಮ ವಗ್ದವರಿಗೆ ಹೆಚ್ಚು ಇಷ್ಟವಾಗುವಂತಿದೆ.
ಈ ಫೋಟೋಗೆ ಫೆಸ್‌ಬುಕ್‌ನಲ್ಲಿ ನೆಟ್ಟಿಗರು ಅಮೇಜಿಂಗ್, ಎ ಗುಡ್ ಐಡಿಯಾ, ನೈಸ್, ಅಮೇಜಿಂಗ್ ವರ್ಕ್ ಎಂದು ಕಾಮೆಂಟ್‌ಗಳ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಭಾರತ ಒಂದು ಪ್ರದೇಶದಲ್ಲಿ ನಿರ್ಮಿಸಿದ ಟಾಯ್ಲೆಟ್ ಆಗಿದೆ.
ಬ್ಯಾರೆಲ್ ನಲ್ಲಿ ಸಿಂಕ್, ಕುರ್ಚಿ ನಿರ್ಮಾಣ
ಇದಷ್ಟೇ ಅಲ್ಲದೇ, ಇದೇ ರೀತಿ ಸಣ್ಣ ಡ್ರಮ್, ಬ್ಯಾರೆಲ್ ನಲ್ಲಿ ಮನೆಯಲ್ಲಿ ಬಳಸಬಹುದಾದ ಖುರ್ಚಿ, ಸಣ್ಣ ಡೈನಿಂಗ್ ಚೇರ್‌ಗಳು, ಬ್ಯಾರೆಲ್ ನ ಒಂದು ಭಾಗದಲ್ಲಿ ನಲ್ಲಿ ಮತ್ತು ಸಿಂಕ್ ಅಳವಡಿಸಲಾಗಿದೆ. ಕಡಿಮೆ ಖರ್ಚಿನಲ್ಲಿ ಅಂದದ ವಸ್ತುಗಳನ್ನು ನಿರ್ಮಿಸಲಾಗಿದೆ. ಈ ಫೋಟೋಗಳನ್ನು ಅದೇ ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ. ಈ ಕೌಶಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.












Click it and Unblock the Notifications