ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023: 'ವಿಜ್ಞಾನದ ಆಸ್ಕರ್‌' ಸ್ಪರ್ಧೆಯಲ್ಲಿ $4,00,000 ಬಹುಮಾನ ಪಡೆದ ಬೆಂಗಳೂರಿನ ಬಾಲೆ!

ಬೆಂಗಳೂರು, ಫೆಬ್ರವರಿ 07: ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 ಅನ್ನು ಗೆಲ್ಲುವ ಮೂಲಕ ಬೆಂಗಳೂರಿನ 17 ವರ್ಷದ ಸಿಯಾ ಗೋಡಿಕಾ ದಾಖಲೆ ಬರೆದಿದ್ದಾರೆ. 'ವಿಜ್ಞಾನದ ಆಸ್ಕರ್' ಎನ್ನಲಾಗುವ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಸಿಯಾ ಗೋಡಿಕಾ "ಯಮನಕಾ ಫ್ಯಾಕ್ಟರ್ಸ್" ಎಂಬ ವಿಡಿಯೋವನ್ನು ಪ್ರೆಸೆಂಟ್ ಮಾಡಿದ್ದರು. ಅವರಿಗೆ 4,00,000 ಡಾಲರ್ ಬಹುಮಾನ ಬಂದಿದೆ!.

ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಮತ್ತು ರಷ್ಯಾದ ಯೂರಿ ಮಿಲ್ನರ್ ಅವರ ಪತ್ನಿ ಜೂಲಿಯಾ ಮತ್ತು ಅಮೆರಿಕಾದ ವಾಣಿಜ್ಯೋದ್ಯಮಿ ಅನ್ನೆ ವೊಜ್ಸಿಕಿ ಸ್ಥಾಪಿಸಿದ 'ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್' ಎಂಬ ಅಂತರರಾಷ್ಟ್ರೀಯ ವಿಜ್ಞಾನ-ವಿಡಿಯೋ ಸ್ಪರ್ಧೆಯಲ್ಲಿ 17 ವರ್ಷದ ಬೆಂಗಳೂರಿನ ಬಾಲಕಿ ಸಿಯಾ ಗೋಡಿಕಾ $400,000 ( 33,216,672.20 Indian Rupees) ಗೆದ್ದಿದ್ದಾರೆ.

17-Year-old Bengaluru teen wins $400k prize in Breakthrough Junior Challenge

ಜೀವನ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸುತ್ತ ಸೃಜನಶೀಲ ಚಿಂತನೆ ಮತ್ತು ಸಂವಹನ ಕೌಶಲ್ಯಗಳನ್ನು ಪ್ರೇರೇಪಿಸಲು ಈ ಚಾಲೆಂಜ್ ಅನ್ನು ವಿನ್ಯಾಸಗೊಳಿಸಲಾಗಿದೆ, ಈ ಸ್ಪರ್ಧೆಯು ಬ್ರೇಕ್‌ಥ್ರೂ ಪ್ರೈಜ್ ಫೌಂಡೇಶನ್‌ನ ಪ್ರಮುಖ $3 ಮಿಲಿಯನ್ ಬ್ರೇಕ್‌ಥ್ರೂ ಪ್ರಶಸ್ತಿಯ ವಿಸ್ತರಣೆ. ಇದನ್ನು "ವಿಜ್ಞಾನದ ಆಸ್ಕರ್‌ಗಳು" ಎಂದು ಕರೆಯಲಾಗಿದೆ.

ಸಿಯಾ ಗೋಡಿಕಾ ಅವರ "ಯಮನಕಾ ಫ್ಯಾಕ್ಟರ್ಸ್"

ಸಿಯಾ ಗೋಡಿಕಾ ಈ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023ಕ್ಕೆ "ಯಮನಕಾ ಫ್ಯಾಕ್ಟರ್ಸ್" ಎಂಬ ವಿಡಿಯೋ ಪ್ರೆಸೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ, 12 ನೇ ತರಗತಿಯ ವಿದ್ಯಾರ್ಥಿ ಸಿಯಾ ಗೋಡಿಕಾ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಮತ್ತೆ ಹದಿಹರೆಯದ ವಯಸ್ಸಿಗ ಬರುವ ರೀತಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೆಲ್ಯುಲಾರ್ ರಿಪ್ರೊಗ್ರಾಮಿಂಗ್‌ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಶಿನ್ಯಾ ಯಮನಕಾ ಅವರ ಆವಿಷ್ಕಾರಗಳನ್ನು ಜನರ ಮುಂದಿಟ್ಟಿದೆ.

ಸಿಯಾ ಗೋಡಿಕಾಗೆ $250,000 ಕಾಲೇಜು ವಿದ್ಯಾರ್ಥಿವೇತನ

ಸಿಯಾ ಗೋಡಿಕಾ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 ಅಂತರಾಷ್ಟ್ರೀಯ ವಿಜ್ಞಾನ-ವಿಡಿಯೋ ಸ್ಪರ್ಧೆಯಲ್ಲಿ $400,000 ಗೆದ್ದಿದ್ದಾರೆ. "ಯಮನಕಾ ಫ್ಯಾಕ್ಟರ್ಸ್" ಶೀರ್ಷಿಕೆಯ ವೀಡಿಯೊಗಾಗಿ ಸಿಯಾ ಗೋಡಿಯಾ $ 250,000 ಕಾಲೇಜು ವಿದ್ಯಾರ್ಥಿವೇತನ ಪಡೆಯುತ್ತಾರೆ. ಆಕೆಯ ಶಿಕ್ಷಕರು ಪ್ರಶಸ್ತಿಯ $ 50,000 ಪಡೆಯುತ್ತಾರೆ. ಮತ್ತೊಂದೆಡೆ, ಸಿಯಾ ಶಾಲೆ, ನೀವ್ ಅಕಾಡೆಮಿಯು $ 100,000 ಮೊತ್ತವನ್ನು ಪಡೆಯುತ್ತದೆ ಎಂದು ಬ್ರೇಕ್‌ಥ್ರೂ ಪ್ರೈಜ್ ಫೌಂಡೇಶನ್ ಅನ್ನು 'ಟೈಮ್ಸ್ ಆಫ್ ಇಂಡಿಯಾ' ಉಲ್ಲೇಖಿಸಿದೆ.

17-Year-old Bengaluru teen wins $400k prize in Breakthrough Junior Challenge

ಸಿಯಾ ಗೋಡಿಕಾ ಅವರ ಸ್ಫೂರ್ತಿ

ಕ್ಯಾನ್ಸರ್ ಮತ್ತು ನರವೈಜ್ಞಾನಿಕ ಸಮಸ್ಯೆಗಳ ವಿರುದ್ಧ ತನ್ನ ಅಜ್ಜಿಯರ ಹೋರಾಟವನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ ಎಂದು 17 ವರ್ಷದ ಬೆಂಗಳೂರಿನ ಬಾಲೆ ಸಿಯಾ ಗೋಡಿಕಾ ಹೇಳಿದ್ದಾರೆ. ಈ ಭವಿಷ್ಯವನ್ನು ರಿಯಾಲಿಟಿ ಮಾಡುವ ಶಿನ್ಯಾ ಯಮನಕಾ ಅವರ ಆವಿಷ್ಕಾರಗಳಿಗೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ ಎಂದು ಸಿಯಾ ಗೋಡಿಕಾ ಹೇಳಿದ್ದಾರೆ.

ಸಿಯಾ ಗೋಡಿಕಾಗೆ ಬಹುಮಾನದ ಹಣವನ್ನು ಯಾವಾಗ ಸಿಗುತ್ತದೆ?

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಲಾಸ್ ಏಂಜಲೀಸ್‌ನಲ್ಲಿ 2024 ರ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್‌ನ ವಿಜೇತರೊಂದಿಗೆ ಸಿಯಾ ಗೋಡಿಕಾ ಬಹುಮಾನ ಸ್ವೀಕರಿಸುತ್ತಾರೆ. ಇನ್ನು, ಸಿಯಾ ಗೋಡಿಕಾ ಅವರ ಹಿರಿಯ ಸಹೋದರ ಸಮಯ್ ಗೋಡಿಕಾ ಅವರು ಆರು ವರ್ಷಗಳ ಹಿಂದೆ ಜೂನಿಯರ್ ಚಾಲೆಂಜ್ ಗೆದ್ದಿದ್ದರು.

ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್

ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ ಅನ್ನು ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್, ಯುಎಸ್ ಉದ್ಯಮಿ ಆನ್ನೆ ವೊಜ್ಸಿಕಿ, ರಷ್ಯಾದ ಯೂರಿ ಮಿಲ್ನರ್ ಮತ್ತು ಅವರ ಪತ್ನಿ ಜೂಲಿಯಾ ಮತ್ತು ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಸ್ಥಾಪಿಸಿದ್ದಾರೆ. ಜೂನಿಯರ್ ಚಾಲೆಂಜ್‌ಗೆ ಈ ವರ್ಷ 2,400 ಮಂದಿ ಅರ್ಜಿ ಸಲ್ಲಿಸಿದ್ದರು. ಬಹುಮಾನದ ಹಣವನ್ನು ವಿದ್ಯಾರ್ಥಿ, ಶಿಕ್ಷಕ ಮತ್ತು ಶಾಲೆಯ ನಡುವೆ ಹಂಚಲಾಗುತ್ತದೆ. ಬ್ರೇಕ್ಥ್ರೂ ಜೂನಿಯರ್ ಚಾಲೆಂಜ್ ಅನ್ನು "ಆಸ್ಕರ್ ಆಫ್ ಸೈನ್ಸ್" ಎಂದೂ ಕರೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+