Viral: ಓ..ಹೆಣ್ಮಗು..ಹೆಣ್ಮಗು: ವೈರಲ್ ವಿಡಿಯೋ ಹಿಂದಿನ ಧ್ವನಿ ಇವರೇ, ಯಾರಿವರು ಗೊತ್ತಾ?
ನಾನ್ ರೀ ಲಲ್ಲಿ..ಓ..ಹೆಣ್ಮಗು..ಹೆಣ್ಮಗು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಟ್ರೋಲ್ ಆದ ಆಡಿಯೋ ಇದು. ಅದರಲ್ಲೂ ಓ..ಹೆಣ್ಮಗು..ಹೆಣ್ಮಗು ಎನ್ನುವ ಆಡಿಯೋವಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೆಣ್ಣು ಮಕ್ಕಳು ಅಡ್ಡಾದಿಡ್ಡಿ ಗಾಡಿ ಓಡಿಸುವ ವಿಡಿಯೋಗೆ ಈ ಆಡಿಯೋ ಸಿಂಕ್ ಮಾಡಿ ಸಖತ್ ಟ್ರೋಲ್ ಮಾಡಲಾಗಿತ್ತು. ಈಗಲೂ ಕೂಡ ಈ ಆಡಿಯೋ ಟ್ರೆಂಡ್‌ನಲ್ಲಿದೆ.
ಆದರೆ ಈ ಆಡಿಯೋ ಎಲ್ಲಿಂದ ಬಂತು..? ಈ ಮಾತುಗಳನ್ನು ಹೇಳಿದವರು ಯಾರು..? ಯಾವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿತ್ತು.. ಇದರ ಪೂರ್ತಿ ಒರಿಜಿನಲ್ ಆಡಿಯೋ ಯಾವುದು ಎಂಬೆಲ್ಲಾ ಪ್ರಶ್ನೆಗಳು ಅನೇಕರನ್ನು ಕಾಡಿತ್ತು. ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಈ ಆಡಿಯೋ ಹಿಂದಿನ ಧ್ವನಿ ಬಳ್ಳಾಪುರ ಮೂಲದ ರವಿ ಹಾಗೂ ನರಸಿಂಹ ರಾಜು ಬಳ್ಳಾಪುರ ಅವರದು. ಸ್ನೇಹಿತರಿಬ್ಬರು ಐದಾರು ವರ್ಷಗಳ ಹಿಂದೆ ಫೋನ್‌ನಲ್ಲಿ ಮಾತನಾಡುವ ವೇಳೆ ತಮಾಷೆ ಮಾಡಿದ ಆಡಿಯೋ ರೆಕಾರ್ಡಿಂಗ್ ಈಗ ವೈರಲ್ ಆಗಿದೆ.
ಈ ಬಗ್ಗೆ ನಾನ್ ರೀ ಲಲ್ಲಿ..ಓ..ಹೆಣ್ಮಗು..ಹೆಣ್ಮಗು ಆಡಿಯೋ ಹಿಂದಿನ ಧ್ವನಿ ರವಿ ಅಲಿಯಾಸ್ ಲಲ್ಲಿ ಅವರೇ ಮಾತನಾಡಿದ್ದಾರೆ. ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, 'ನಾನು ನರಸಿಂಹ ರಾಜು 21 ವರ್ಷದಿಂದ ಗೆಳೆಯರು. ಇದು ಯಾವುದು ಸ್ಕ್ರಿಪ್ಟೆಡ್ ಆಡಿಯೋ ಅಲ್ಲ. ನಾವು ತಮಾಷೆಗೆ ಐದು ಆರು ವರ್ಷಗಳ ಹಿಂದೆ ಫೋನ್‌ನಲ್ಲಿ ಮಾತನಾಡಿಕೊಂಡಿದ್ದು ಅಷ್ಟೇ. ಅದು ಈಗ ವೈರಲ್ ಆಗಿದೆ. ತಮಾಷೆಗೆ ಅಂತಾ ನಾನು ರೆಕಾರ್ಡಿಂಗ್ ಮಾಡಿ ಇಟ್ಟುಕೊಂಡಿದ್ದೆ, ಈಗ ಒಬ್ಬರಿಂದ ಒಬ್ಬರಿಗೆ ಅದು ವೈರಲ್ ಆಗಿ ಈ ಮಟ್ಟಕ್ಕೆ ಜನರನ್ನು ನಗಿಸಿದೆ.
ನರಸಿಂಹ ರಾಜು ಅವರಿಗೆ ಏನು ಗೊತ್ತಾಗುತ್ತಿರಲಿಲ್ಲ..ಏನು ಕಾಣಿಸುತ್ತಿರಲ್ಲ ಹಾಗಾಗಿ ಲಲ್ಲಿ ಸೇರಿದಂತೆ ಎಲ್ಲಾ ಧ್ವನಿಯಲ್ಲೂ ನಾನೇ ಅವರ ಜೊತೆ ಮಾತನಾಡುತ್ತಿದೆ. ನಾನೇ ಅವರ ಕಾಲು ಎಳೆಯುತ್ತಿದೆ. ಅವನ್ನು ಗೊಂದಲಕ್ಕೀಡು ಮಾಡುತ್ತಿದೆ. ಹೀಗೆ ಮಾಡಿ ಕೆಲವೊಮ್ಮೆ ರಾತ್ರಿ ರಾತ್ರಿಯೇ ದೇವಸ್ಥಾನಗಳಿಗೂ ಕರೆದುಕೊಂಡು ಹೋಗಿದ್ದೆ. ನಮ್ಮ ಧ್ವನಿ ಮೇಲಿರುವ ಜನರ ಅಭಿಮಾನಕ್ಕೆ ನಾವು ಋಣಿಯಾಗಿರುತ್ತೇವೆ ಎಂದರು.

ಈ ವೇಳೆ ಆಘಾತಕಾರಿ ವಿಷಯವೊಂದನ್ನು ರವಿ ಹಂಚಿಕೊಂಡಿದ್ದಾರೆ. ತಮ್ಮ ಧ್ವನಿಯಿಂದಲೇ ಜನರನ್ನು ನಗಿಸಿರುವ ನರಸಿಂಹ ರಾಜು ಬಳ್ಳಾಪುರ ಅವರು ಸದ್ಯ ಜೀವಂತವಾಗಿಲ್ಲ. ನರಸಿಂಹ ರಾಜು ಬಳ್ಳಾಪುರ ಅವರು ನಿಧನರಾಗಿ ಮೇ 10 ಬಂದರೆ ಮೂರು ವರ್ಷಗಳಾಗುತ್ತದೆ. ಆ ಸುದ್ದಿ ಬಂದ ಬಳಿಕ ನಾನು ಈವರೆಗೂ ಅವರ ಮನೆ ಕಡೆಗೆ ಹೋಗಿಲ್ಲ. ಸುಮಾರು ಒಂದೂವರೆ ವರ್ಷ ನನ್ನ ಕನಸಿನಲ್ಲಿ ಬರುತ್ತಿದ್ದ. ಅವನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಭಾವುಕರಾಗಿದ್ದಾರೆ.












Click it and Unblock the Notifications