• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರಿಗೂ ಬೇಡವಾದ ಭಟ್ಕಳ ಮೂಲದ ಉಗ್ರ

By ಒನ್ ಇಂಡಿಯಾ ಸಿಬ್ಬಂದಿ
|

ಇಂಡಿಯನ್ ಮುಜಾಹಿದ್ದೀನ್ ಈಗ ಒಡೆದ ಮನೆಯಾಗಿದೆ. ಉಗ್ರ ಸಂಘಟನೆಯ ಸಹ ಸ್ಥಾಪಕ ರಿಯಾಳ್ ಭಟ್ಕಳ ಈಗ ಯಾರಿಗೂ ಬೇಡವಾದ ನಾಯಕನಾಗಿದ್ದಾನೆ. ಇಂಡಿಯನ್ ಮುಜಾಹಿದ್ದೀನ್ ತನ್ನ ಗುಂಪಿಗೆ ಹೊಸ ಸರದಾರನನ್ನು ನೇಮಿಸಿದೆ. ಅವನೇ ಸುಲ್ತಾನ್ ಅಹ್ಮದ್ ಅರ್ಮಾರ್.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಬೆಳೆಸಲು ಯತ್ನಿಸಿದ ರಿಯಾಜ್, ನೆರವಾಗಿ ಅಲ್ ಖೈದಾ ಜೊತೆ ಕೈ ಜೋಡಿಸಿದ ಮಾತುಗಳನ್ನಾಡಿದ್ದ. ಇದಕ್ಕೆ ಗುಂಪಿನಲ್ಲಿ ಬಹುಮತ ಸಿಗಲಿಲ್ಲ. ಐಎಸ್ಐ ಜೊತೆ ಕೈಜೋಡಿಸಿ ರಿಯಾಜ್ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ ಎಂಬ ಗುಮಾನಿ ಹಲವರಲ್ಲಿ ಹುಟ್ಟಿಕೊಂಡಿತ್ತು. [ಮೋಸ್ಟ್ ವಾಂಟೆಡ್ ಟೆರರಿಸ್ಟ್ ಯಾಸಿನ್ ಭಟ್ಕಳ್ ಯಾರು?]

ಅಲ್ ಖೈದಾ ಸೇರಲು ರಿಯಾಜ್ ಬಯಸಿದ್ದ, ಇದಕ್ಕೆ ಗುಂಪಿನಲ್ಲಿ ವ್ಯಕ್ತವಾದ ವಿರೋಧದ ಬಗ್ಗೆ ನಡೆದ ಮಾತುಕತೆ ವಿವರಗಳು ಲಭ್ಯವಾಗಿದೆ. ಐಎಸ್ಐ ನಿರ್ದೇಶನದಂತೆ ಅಲ್ ಖೈದಾ ಜೊತೆ ಕೈಜೋಡಿಸಲು ಮುಂದಾಗಬೇಕಿದೆ ಎಂದು ರಿಯಾಜ್ ತನ್ನ ಗುಂಪಿನ ಜೊತೆ ವಾದಕ್ಕಿಳಿದಿದ್ದ.

ಅದರೆ, ಐಎಸ್ಐ ತಂತ್ರ ಬೇರೆಯದ್ದೇ ಆಗಿತ್ತು. ಐಎಸ್ಐಎಸ್ ಉಗ್ರರ ಜೊತೆ ಕೈ ಜೋಡಿಸಿ ಅಫ್ಘಾನಿಸ್ತಾನ ವಶಪಡಿಸಿಕೊಳ್ಳುವುದು ಹಾಗೂ ಎಲ್ಲಾ ಉಗ್ರ ಸಂಘಟನೆಗಳನ್ನು ತನ್ನ ಹತೋಟಿಯಲ್ಲಿರಿಸಿಕೊಳ್ಳುವುದೇ ಉದ್ದೇಶವಾಗಿತ್ತು.

ರಿಯಾಜ್ ಭಟ್ಕಳನಿಗೇಕೆ ಈ ಸ್ಥಿತಿ?: ಇರಾಕಿ ಉಗ್ರರ ಗುಂಪಾದ ಐಎಸ್ಐಎಸ್ ನಿಂದ ಇಂಡಿಯನ್ ಮುಜಾಹಿದ್ದೀನ್ ಅಕ್ಟೋಬರ್ 7, 2014ರಲ್ಲಿ ಸುಲ್ತಾನ್ ಅರ್ಮಾರ್ ನೇಮಕಗೊಂಡಿದ್ದ. ಐಎಂ ಸೇರಿದ ಮೇಲೆ ತನ್ನ ಹೆಸರನ್ನು ಮೌಲಾನಾ ಅಬ್ದುಲ್ ರೆಹಮಾನ್ ಅಲ್ ನದ್ವಿ ಅಲ್ ಹಿಂದಿ ಎಂದು ಬದಲಾಯಿಸಿಕೊಂಡಿದ್ದ.

ಅಬು ಬಕಾರ್ ಅಲ್ ಭಾಗ್ದಾದಿ ನೇತೃತ್ವದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದ. ರಿಯಾಜ್ ಸೋದರ ಸಮಾನ ಸಂಘಟನೆ ಸ್ಥಾಪಕ ಯಾಸಿನ್(halwa.wala@yahoo.com ) ಜೊತೆ ಸುಲ್ತಾನ್ ಅರ್ಮಾರ್ ಚಾಟ್ ಮಾಡುತ್ತಿದ್ದ ಐಡಿ (afarafe546@yahoo.com ) ಬಹಿರಂಗವಾಗಿದೆ. [ಫೇಸ್ಬುಕ್, ಟ್ವಿಟ್ಟರ್ ಬಳಸಿ ಉಗ್ರರಿಂದ ಸಂಚು']

ಪಾಕಿಸ್ತಾನ ಮೂಲದ ಆರ್ಮಾರ್ ಐಎಂ ಸೇರಿದ ದಿನದಿಂದಲೇ ರಿಯಾಜ್ ಭಟ್ಕಳನ ಮೇಲೆ ಕತ್ತಿ ಮಸೆಯತೊಡಗಿದ್ದ, ಐಎಂ ಸಂಪೂರ್ಣ ಐಎಸ್ ಐ ಸ್ವಾದೀನಗೊಳಿಸಲು ರಿಯಾಜ್ ಬಯಸುತ್ತಿದ್ದಾನೆ ಎಂದು ಆಪಾದಿಸಿದ. ರಿಯಾಜ್ ವಿರುದ್ಧ ಎಲ್ಲರನ್ನು ಒಟ್ಟು ಮಾಡತೊಡಗಿದ. ರಿಯಾಜ್ ಭಟ್ಕಳ ಹಾಗೂ ಐಎಸ್ಐ ನೆರಳಿಲ್ಲದ ಇಂಡಿಯನ್ ಮುಜಾಹಿದ್ದೀನ್ ಮುನ್ನಡೆಸಲು ಸಜ್ಜಾದ.

ಮತ್ತೊಂದು ಚಾಟ್ ಮಾಹಿತಿ ಪ್ರಕಾರ lovesam361@yahoo.com ಐಡಿ ಮೂಲಕ ರಿಯಾಜ್ ಭಟ್ಕಳ ಚಾಟ್ ಮಾಡುತ್ತಾ ಅರ್ಮಾರ್ ಗೆ ಅಲ್ ಖೈದಾ ಜೊತೆ ಸೇರುವಂತೆ ಪ್ರೇರಿಪಿಸುತ್ತಾನೆ. ಆದರೆ, ಅಫ್ಘಾನಿ ಉಗ್ರರ ಗುಂಪು ಸೇರುವ ಐಎಸ್ಐಎಸ್ ಜೊತೆ ಕೈಜೋಡಿಸಿ ಸಿರಿಯಾದಲ್ಲಿ ಇಸ್ಲಾಂ ಪರ ಹೋರಾಟ ಮಾಡೋಣ ಎಂದು ಅರ್ಮಾರ್ ವಾದಿಸುತ್ತಾನೆ. [ನಮ್ಮ ಮೊದಲ ಟಾರ್ಗೆಟ್ ನರೇಂದ್ರ ಮೋದಿ: ಐಎಂ]

Yasin Bhatkal

ಐಎಸ್ಐಎಸ್ ಜೊತೆ ಸೇರಲು ಅಡ್ಡಿ: ಸಿರಿಯಾದಲ್ಲಿ ಹೋರಾಟ ನಡೆಸಲು ಇಚ್ಛಿಸಿರುವಾಗ ಐಎಂ ಸಂಘಟನೆಯನ್ನು ಐಎಸ್ ಐ ನಿಯಂತ್ರಿಸುವುದಕ್ಕೆ ಬಿಡುವುದು ಸರಿಯಲ್ಲ ಎಂದು ರಿಯಾಜ್ ಭಟ್ಕಳ,ಆತನ ಸೋದರ ಇಕ್ಬಾಲ್ ಭಟ್ಕಳನನ್ನು ಯಾಸಿನ್ ಭಟ್ಕಳ ತರಾಟೆಗೆ ತೆಗೆದುಕೊಂಡಿದ್ದಾನೆ. ಐಎಸ್ ಐ ಹಾಗೂ ರಿಯಾಜ್ ಇಲ್ಲದ ಉಗ್ರ ಸಂಘಟನೆ ಸ್ಥಾಪಿಸಲು ಮುಂದಾಗಿರುವ ಅರ್ಮಾರ್ ಬೆಂಬಲಕ್ಕೆ ಯಾಸಿನ್ ಕೂಡಾ ನಿಲ್ಲುತ್ತಾನೆ. ಪಾಕಿಸ್ತಾನಕ್ಕೆ ತೆರಳಲು ಮುಂದಾಗಿದ್ದ ಯಾಸಿನ್ ಭಾರತ ಹಾಗೂ ನೇಪಾಳದ ಗಡಿಯಲ್ಲಿ ಸೆರೆಯಾಗುತ್ತಾನೆ.[ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಸಿಮಿ-ಐಎಂ ಸ್ನೇಹ?]

ಐಎಂ ಇಬ್ಭಾಗ: ಪೊಲೀಸರ ಬಂಧನದಲ್ಲಿ ಬೆಂಗಳೂರು, ಪುಣೆ ಸೇರಿದಂತೆ ಅನೇಕ ಸ್ಫೋಟ ಪ್ರಕರಣದ ಬಗ್ಗೆ ಭಟ್ಕಳ, ಮಂಗಳೂರಿನ ಚಟುವಟಿಕೆ ಬಗ್ಗೆ ಯಾಸಿನ್ ಬಾಯ್ಬಿಡುತ್ತಾನೆ. ಈ ನಡುವೆ ಸ್ಥಾಪಕ ಯಾಸಿನ್ ಭಟ್ಕಳ ಇಲ್ಲದ ಕಾರಣ ಐಎಂನಲ್ಲಿ ಅರಾಜಕತೆ ಮುಂದುವರೆಯುತ್ತದೆ. ರಿಯಾಜ್ ಹಾಗೂ ಅರ್ಮಾರ್ ನಡುವಿನ ಗುಂಪು ತನ್ನ ಪ್ರಭುತ್ವ ಸ್ಥಾಪನೆಗೆ ಮುಂದಾಗುತ್ತದೆ.

ಅನ್ಸಾರ್ ಉತ್ ತಾವ್ಹಿದ್ ಹೆಸರಿನ ಬ್ಯಾನರ್ ಅಡಿಯಲ್ಲಿ ಅರ್ಮಾರ್ ತನ್ನ ಭಿನ್ನಮತ ಸ್ಫೋಟಿಸುತ್ತಾನೆ. ಇಂಡಿಯನ್ ಮುಜಾಹಿದ್ದೀನ್ ಅಧಿಕೃತವಾಗಿ ಒಡೆದು ಎರಡು ಹೋಳಾಗುತ್ತದೆ. ಭಾರತದ ಬೇಹುಗಾರರ ಮಾಹಿತಿ ಪ್ರಕಾರ, ರಿಯಾಜ್ ಗಿಂತ ಅರ್ಮಾರ್ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಗುಪ್ತವಾಗಿ ಮಾಡಿ ಮುಗಿಸುತ್ತಾನೆ. [ಸೌದಿಯಲ್ಲೂ ಐಎಂ ನಿಷೇಧ: ಅಡಗುತ್ತಾ ಉಗ್ರರ ಸದ್ದು?]

ಪಾಕಿಸ್ತಾನ ಮೂಲದವನಾದರೂ ಐಎಸ್ ಐ ಜೊತೆ ಕೈಜೋಡಿಸಲು ಮುಂದಾಗದ ಅರ್ಮಾರ್ ಈಗ ಐಎಸ್ಐಎಸ್ ಉಗ್ರರ ಸಂಪರ್ಕ ಬೆಳೆಸಿದ್ದಾನೆ. ಮುಂದೊಂದು ದಿನ ಆಲ್ ಖೈದಾ ಹಾಗೂ ಐಎಸ್ಐಎಸ್ ಒಟ್ಟುಗೂಡಿದರೆ ಅರ್ಮಾರ್ ಎರಡು ಗುಂಪಿಗೆ ಆಪ್ತನಾಗಿ ಬೆಳೆಯಲಿದ್ದಾನೆ. ಅನ್ಸಾರ್ ಉತ್ ತಾವ್ಹಿಡ್ ನ ಉಪ ಸಂಘಟನೆ ತೆಹ್ರಿಕ್ ಇ ತಾಲಿಬಾನ್ ಕೂಡಾ ಅರ್ಮಾರ್ ಅಣತಿಯಂತೆ ಕಾರ್ಯಾಚರಣೆ ಆರಂಭಿಸಿರುವುದು ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Riyaz who initially wanted the Indian Mujahideen to side with the al-qaeda was dumped by other members of the IM as they felt he was just playing along with the ISI which ran nothing but its own agenda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more