ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಸಿಮಿ-ಐಎಂ ಸ್ನೇಹ?

By Kiran B Hegde
|
Google Oneindia Kannada News

ಸತ್ತಿದ್ದಾನೆ ಎಂದು ತಿಳಿದಿದ್ದ ಐಎಸ್ಐಎಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಮಾತನಾಡಿರುವ ಮುದ್ರಿತ ಆಡಿಯೋ ದಾಖಲೆ ಬಿಡುಗಡೆಯಾಗಿದೆ ಹಾಗೂ ಸಿರಿಯಾದಲ್ಲಿ ಐಎಸ್ಐಎಸ್ ಮತ್ತು ಅಲ್ ಖೈದಾ ಜತೆಯಾಗಿ ಯುದ್ಧ ನಡೆಸಲು ತೀರ್ಮಾನಿಸಿವೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಐಎಸ್ಐಎಸ್ ಹಾಗೂ ಅಲ್ ಖೈದಾ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿತ್ತು. ಐಎಸ್ಐಎಸ್ ಸಂಘಟನೆಗೆ ಸದಸ್ಯರನ್ನು ನೇಮಿಸುವ ಜವಾಬ್ದಾರಿ ಹೊತ್ತಿದ್ದ ಸುಲ್ತಾನ್ ಅಹ್ಮದ್ ಅರ್ಮರ್ ಕೂಡ ಅನೇಕ ಬಾರಿ ನೇಮಕಾತಿಯು ಅತ್ಯಂತ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದ್ದು ಬಹಿರಂಗವಾಗಿತ್ತು. ಆದರೆ, ಈ ಬೆಳವಣಿಗೆ ಭಾರತದ ಉಗ್ರ ಸಂಘಟನೆಗಳಾದ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್‌ಗಳಿಗೆ ಅಚ್ಚರಿ ಮೂಡಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. [ಇರಾಕ್ ಉಗ್ರರ ಜತೆ ಬೆಂಗಳೂರು ಯುವಕ]

ಸಿಮಿ, ಐಎಂ ಒಂದಾಗಲಿವೆಯೇ?
ಇಂಡಿಯನ್ ಮುಜಾಹಿದೀನ್ ಸಂಘಟನೆ ಸದಸ್ಯನಾಗಿದ್ದ ಅರ್ಮರ್ ಮೊದಲು ಅಲ್ ಖೈದಾ ಸಂಘಟನೆಗೆ ಸದಸ್ಯರನ್ನು ನೇಮಿಸುತ್ತಿದ್ದ. ಆದರೆ, ಐಎಸ್ಐಎಸ್ ಹುಟ್ಟಿಕೊಂಡ ನಂತರ ಅದಕ್ಕೆ ನಿಷ್ಠೆ ತೋರತೊಡಗಿದ. ಈಗ ಎರಡೂ ಸಂಘಟನೆಗಳು ಸಿರಿಯಾದಲ್ಲಿ ಜತೆಯಾಗಿ ಯುದ್ಧ ಮಾಡಲು ನಿರ್ಧರಿಸಿರುವ ಕಾರಣ ಅರ್ಮರ್ ಹಾಗೂ ಪಾಕಿಸ್ತಾನದಲ್ಲಿ ಸದಸ್ಯರ ನೇಮಕಾತಿ ನೋಡಿಕೊಳ್ಳುತ್ತಿದ್ದ ಕಮ್ರಾನ್ ಶಾ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ. [ಭಾರತಕ್ಕೆ ಒಕ್ಕರಿಸಿದ ಅಲ್ ಖೈದಾ, ಮೋದಿಗೆ ಆತಂಕ]

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಜತೆ ಸೇರುವ ಭೀತಿ ಎದುರಾಗಿದೆ. ಅಲೈ ಖೈದಾ ಅಂಗವಾದ ಸಿಮಿ ಹಾಗೂ ಐಎಸ್ಐಎಸ್ ಅಂಗವಾದ ಇಂಡಿಯನ್ ಮುಜಾಹಿದೀನ್ ಸೇರಿದರೆ ಅಪಾಯಕಾರಿ ಶಕ್ತಿಯಾಗಲಿವೆ. ಆಗ ಭಾರತದಲ್ಲಿ ವಿಧ್ವಂಸಕ ಕೃತ್ಯಗಳು ಹೆಚ್ಚುವ ಅಪಾಯವಿದೆ ಎಂದು ನಿರೀಕ್ಷಿಸಲಾಗಿದೆ. [ಭಾರತದ ಮೇಲೆ ದಾಳಿಯ ಕಾರ್ಮೋಡ]

ಸಿಮಿ, ಐಎಂ ಇನ್ನೂ ಸೇರಿಲ್ಲ
ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸುತ್ತಿರುವವರು ಹೇಳುವಂತೆ ಸದ್ಯಕ್ಕೆ ಸಿಮಿ ಹಾಗೂ ಐಎಂ ಬೇರೆಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಸಿಮಿ ಸ್ವತಂತ್ರವಾಗಿದ್ದು, ಅಲ್ ಖೈದಾ ಪರ ವಾಲುತ್ತಿದೆ. ಐಎಂ ಸಂಘಟನೆ ಐಎಸ್ಐಎಸ್‌ಗೆ ಮಾತ್ರ ಬೆಂಬಲ ನೀಡುತ್ತಿದೆ ಹಾಗೂ ಅನ್ಸಾರ್ ಉಲ್ ತಾವ್‌ಹಿದ್ ಪರ ಕೆಲಸ ಮಾಡುತ್ತಿದೆ.

ಈಚೆಗಷ್ಟೇ ಹೈದರಾಬಾದ್‌ನಲ್ಲಿ ಬಂಧಿತರಾಗಿರುವ ಇಬ್ಬರು ತಾವು ಅರ್ಮರ್ ಜತೆ ಸಂಬಂಧ ಹೊಂದಿರುವುದಾಗಿಯೂ ಹೇಳಿದ್ದಾರೆ.
ಆದ್ದರಿಂದ ಪ್ರಸ್ತುತ ಪಾಕಿಸ್ತಾನದಲ್ಲಿರುವ ಸುಲ್ತಾನ್ ಅಹ್ಮದ್ ಅರ್ಮರ್ ಚಟುವಟಿಕೆ ಮೇಲೆ ಭಾರತ ಕಣ್ಣಿಡಬೇಕಾಗಿದೆ. ಆದರೆ, ಇದುವರೆಗೂ ಆತನ ವಿರುದ್ಧ ಸಾಕ್ಷಿ ಸಿಕ್ಕಿಲ್ಲ. ಆದ್ದರಿಂದ ಭಾರತದಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ. [ಇಂಟರ್ ಪೋಲ್ ಭಯ: ದಾವೋದ್ ಪರಾರಿ]

ಈಗ ಅರ್ಮರ್ ಸಾಮಾಜಿಕ ತಾಣದಲ್ಲಿ ಕಳುಹಿಸುತ್ತಿರುವ ಸಂದೇಶಗಳು ಹಾಗೂ ನಡೆಸಿರುವ ಮಾತುಕತೆಯ ದಾಖಲೆಗಳೆಲ್ಲವೂ ಭಾರತೀಯ ಗುಪ್ತಚರ ಸಂಸ್ಥೆಗಳ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಆದ್ದರಿಂದ ಹೈದರಾಬಾದ್ ಪೊಲೀಸರು ಇದೇ ಮೊದಲ ಬಾರಿ ಅರ್ಮರ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

English summary
The release of an audio by the ISIS chief Abu Bakr Al Baghdadi and the coming together of his outfit with the al-qaeda in Syria is a cause of concern an Intelligence Bureua official informed. This would mean that al-qaeda and the ISIS along with its Indian affiliates the SIMI and the IM form a formidable force and launch a strike on Indian soil, agency sources further informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X