ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಮಲೇಷ್ಯಾಕ್ಕೆ ಮೊಟ್ಟೆಗಳ ದಾಖಲೆಯ ರಫ್ತು, ಕಾರಣವೇನು?

|
Google Oneindia Kannada News

ನವದೆಹಲಿ, ಜನವರಿ 20: ಭಾರತವು ಈ ತಿಂಗಳು ಮಲೇಷ್ಯಿಯಾಕ್ಕೆ ದಾಖಲೆಯ 50 ಮಿಲಿಯನ್ ಮೊಟ್ಟೆಗಳನ್ನು ರಫ್ತು ಮಾಡಲು ಸಜ್ಜಾಗಿದೆ. ಉಕ್ರೇನ್ ಯುದ್ಧದಿಂದ ಗಗನಕ್ಕೇರಿರುವ ಆಹಾರ ವಸ್ತುಗಳ ಬೆಲೆಗಳು ಮಲೇಷ್ಯಾದಲ್ಲಿ ಅನೇಕ ಸಣ್ಣ ಪ್ರಮಾಣದ ರೈತರು ಉತ್ಪಾದನೆಯನ್ನು ಕಡಿತಗೊಳಿಸಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.

ಓಮನ್ ಮತ್ತು ಕತಾರ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳು ಭಾರತದಿಂದ ಮೊಟ್ಟೆಗಳ ಪ್ರಮುಖ ಖರೀದಿದಾರ ದೇಶಗಳಾಗಿವೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ವಿಶ್ವದ ಕೆಲವು ಉನ್ನತ ಪೂರೈಕೆದಾರರಲ್ಲಿ ಉತ್ಪಾದನೆಯು ಕುಸಿದಿದ್ದರಿಂದ ಭಾರತೀಯ ಮೊಟ್ಟೆ ಕೇಂದ್ರಗಳು ವಿಶ್ವದ ಪ್ರಮುಖ ಖರೀದಿದಾರರಿಂದ ದೊಡ್ಡ ಆರ್ಡರ್‌ಗಳನ್ನು ಸ್ವೀಕರಿಸಿವೆ.

ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ: ಸಿದ್ದರಾಮಯ್ಯಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ: ಸಿದ್ದರಾಮಯ್ಯ

ಸಿಂಗಾಪುರ ಮತ್ತು ಇತರ ಏಷ್ಯಾದ ದೇಶಗಳಿಗೆ ಮೊಟ್ಟೆಗಳನ್ನು ರಫ್ತು ಮಾಡುವ ಮಲೇಷ್ಯಾದಿಂದ ಅತಿದೊಡ್ಡ ಮೊತ್ತದ ಆರ್ಡರ್‌ಗಳು ಬಂದಿದೆ. ಮೊಟ್ಟೆಯ ಸರಬರಾಜನ್ನು ಭದ್ರಪಡಿಸಿಕೊಳ್ಳಲು ಬೆಲೆಗಳು ದಾಖಲೆಯ ಮಟ್ಟಕ್ಕೆ ಏರುತ್ತಿದ್ದಂತೆ, ಮಲೇಷ್ಯಾದ ಕೃಷಿ ಮತ್ತು ಆಹಾರ ಭದ್ರತೆಯ ಸಚಿವ ಮೊಹಮದ್ ಸಾಬು ಅವರು ದಕ್ಷಿಣ ಭಾರತದ ತಮಿಳುನಾಡಿನ ನಾಮಕ್ಕಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹಲವಾರು ಪ್ರಮುಖ ಮೊಟ್ಟೆ ಕೇಂದ್ರಗಳು ನೆಲೆಗೊಂಡಿವೆ.

India Record export of eggs to Malaysia

ಮೊದಲ ಬಾರಿಗೆ ಮಲೇಷ್ಯಾವು ಭಾರತದಿಂದ ಹೆಚ್ಚಿನ ಪ್ರಮಾಣದ ಮೊಟ್ಟೆಗಳನ್ನು ಖರೀದಿಸುತ್ತಿದೆ. 2023ರ ಮೊದಲಾರ್ಧದಲ್ಲಿ ಮಲೇಷ್ಯಾಕ್ಕೆ ಭಾರತದ ಮೊಟ್ಟೆ ರಫ್ತು ಪ್ರಬಲವಾಗಿರಲಿದೆ ಎಂದು ತೋರುತ್ತದೆ ಎಂದು ಭಾರತದ ಪ್ರಮುಖ ಮೊಟ್ಟೆ ರಫ್ತುದಾರರಾದ ನಾಮಕ್ಕಲ್ ಮೂಲದ ಪೊನ್ನಿ ಫಾರ್ಮ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಸ್ತಿ ಕುಮಾರ್ ತಿಳಿಸಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ಭಾರತವು ಡಿಸೆಂಬರ್‌ನಲ್ಲಿ 5 ಮಿಲಿಯನ್ ಮೊಟ್ಟೆಗಳನ್ನು ಮಲೇಷ್ಯಾಕ್ಕೆ ರವಾನಿಸಿದ್ದು, ಜನವರಿಯಲ್ಲಿ 10 ಮಿಲಿಯನ್ ಮತ್ತು ಫೆಬ್ರವರಿಯಲ್ಲಿ 15 ಮಿಲಿಯನ್ ವರೆಗೆ ರವಾನಿಸಲಿದೆ. ಭಾರತದಿಂದ ಮಲೇಷ್ಯಾಕ್ಕೆ ಆಮದುಗಳು ಡಿಸೆಂಬರ್ ಅಂತ್ಯದಲ್ಲಿ ದಾಖಲೆಯ ಗರಿಷ್ಠ ಬೆಲೆಗಳನ್ನು ತರಲು ಸಹಾಯ ಮಾಡಿದೆ. ನವೆಂಬರ್‌ನಲ್ಲಿ 157 ಮಿಲಿಯನ್ ಮೊಟ್ಟೆಗಳ ಕೊರತೆಯನ್ನು ಅನುಭವಿಸಿದ ನಂತರ ಡಿಸೆಂಬರ್‌ನಲ್ಲಿ ಮಾರುಕಟ್ಟೆ ಅಂತರವು ಕೇವಲ ಒಂದು ಮಿಲಿಯನ್‌ಗೆ ಇಳಿದಿದೆ ಎಂದು ಮಲೇಷಿಯಾದ ಸಚಿವರು ಈ ವಾರದ ಆರಂಭದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

India Record export of eggs to Malaysia

ಸರ್ಕಾರವು ಸಬ್ಸಿಡಿಯನ್ನು ಹೆಚ್ಚಿಸಿರುವುದರಿಂದ ಮಲೇಷ್ಯಾದ ಮೊಟ್ಟೆ ಉತ್ಪಾದನೆಯು ಕೆಲವೇ ತಿಂಗಳುಗಳಲ್ಲಿ ಚೇತರಿಸಿಕೊಳ್ಳುತ್ತದೆ ಎಂದು ಮಲೇಷ್ಯಾದ ಜಾನುವಾರು ರೈತರ ಒಕ್ಕೂಟದ ಒಕ್ಕೂಟದ ಅಧ್ಯಕ್ಷ ತಾನ್ ಚೀ ಹೀ ಹೇಳಿದ್ದಾರೆ.

English summary
India is all set to export a record 50 million eggs to Malaysia this month. Soaring food prices since the Ukraine war have caused many small-scale farmers in Malaysia to cut production, industry officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X