Export Vande Bharat Express: ಸ್ವದೇಶಿ 'ವಿಬಿ' ರೈಲು ವಿದೇಶಗಳಿಗೆ ರಫ್ತು: ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 11: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express train) ಸ್ವದೇಶಿ ನಿರ್ಮಿತವಾದ ರೈಲುಗಳು. ಭಾರತೀಯರ ರೈಲ್ವೆ ಇಲಾಖೆ ಇವುಗಳ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೆ ನೂರಾರು ರೈಲುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಮಧ್ಯೆ ರೈಲುಗಳ ರಫ್ತು ಕುರಿತು ಸ್ವತಃ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೇ ಅಪ್ಡೇಟ್ ಕೊಟ್ಟಿದ್ದಾರೆ.
ಭಾರತದಲ್ಲಿ ಈ ವಂದೇ ಭಾರತ್ ರೈಲುಗಳಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ವಿವಿಧ ರಾಜ್ಯಗಳೂ ಸೇರಿದಂತೆ ದೇಶದ ಉದ್ದಗಲಕ್ಕೂ ಈ ರೈಲುಗಳ ಸೇವೆ ವಿಸ್ತರಣೆಗೆ ಕೇಂದ್ರ ಯೋಜನೆ ರೂಪಿಸಿದೆ. ಈ ಮಧ್ಯೆ ಭಾರತವು ವಂದೇ ಭಾರತ್ ರೈಲುಗಳನ್ನು ಬೇರೆ ದೇಶಗಳಿಗೆ ರಫ್ತು (Vande Bharat Express train exprot) ಮಾಡುವ ಯೋಜನೆಯಲ್ಲಿ ಭಾರತ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಇತ್ತೀಚಿಗೆ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ.

ವಿವಿಧ ರಾಷ್ಟ್ರಗಳಿಂದ ಬೇಡಿಕೆ ಸ್ವೀಕಾರ
ಭಾರತೀಯ ರೈಲ್ವೇ ತನ್ನ ವಿಬಿ ರೈಲಿನ ಪ್ರಮುಖ ಇಂಜಿನ್‌ನ ರಫ್ತಿಗಾಗಿ ಅನೇಕ ರಾಷ್ಟ್ರಗಳಿಂದ ಬೇಡಿಕೆ, ಪ್ರಶ್ನೆಗಳನ್ನು ಸ್ವೀಕರಿಸುತ್ತಿದೆ. ಭಾರತದ ದೇಶಿಯ (ಸ್ಥಳೀಯ) ವಿನ್ಯಾಸಗಳು ಮತ್ತು ಸಾಮರ್ಥ್ಯದೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಘಟಕಗಳನ್ನು ಹೊರತುಪಡಿಸಿ ರೈಲಿಗಾಗಿ ತನ್ನದೇ ಆದ ಕಾರ್ಯಾಗಾರಗಳಲ್ಲಿ ಘಟಕಗಳ ಶ್ರೇಣಿಯನ್ನು ತಯಾರಿಸಲು ರೈಲು ಸಚಿವಾಲಯವು ಸಾಕಷ್ಟು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
'ವಿಬಿ' ರೈಲು ತಯಾರಿಸುವ ಸವಾಲು
ಭಾರತವು ತನ್ನದೇ ಆದ ರೈಲ್ವೆ (ಎಂಜಿನ್) ವಂದೇ ಭಾರತ್ ಅಭಿವೃದ್ಧಿಪಡಿಸುವುದು ಸವಾಲಾಗಿತ್ತು. ಇಂತಹ ಸವಾಲನ್ನು ಎಂಜಿನಿಯರ್‌ಗಳು ಸ್ವೀಕರಿಸಿ ಸಮರ್ಪ ಅಧ್ಯಯನ ಕೌಶಲ್ಯದ ಮೂಲಕ ವಿಬಿ ಅಭಿವೃದ್ಧಿಡಿಸುವಲ್ಲಿ ಸಫಲರಾಗಿದ್ದಾರೆ. ಉತ್ಪಾದನೆಯಿಂದ ಭಾರತ ರಫ್ತಿನ ವರೆಗೆ ಬಂದಿ ನಿಂತಿದೆ.
ಮುಂಬರುವ ವರ್ಷಗಳಲ್ಲಿ ಭಾರತ ಈ 'ವಿಬಿ' ರೈಲನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಲಿದೆ ಎಂದು ಅತೀ ವಿಶ್ವಾಸದಿಂದ ಹೇಳಬಲ್ಲೆವು ಎಂದು ಶೃಂಗಸಭೆಯಲ್ಲಿ ವೈಷ್ಣವ್ ಹೇಳಿದ್ದಾರೆ.

ರೈಲಿನ ವೇಗ ಹೆಚ್ಚಿಸಲು ಯತ್ನ
ಸದ್ಯ ಭಾರತದಲ್ಲಿ ಹಾಲಿ ಕಾರ್ಯಾಚರಣೆ ಮಾಡುತ್ತಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 82ಕ್ಕೆ ತಲುಪಿದೆ. ಹೊಸ ದೆಹಲಿ-ಮುಂಬೈ ಮತ್ತು ನವದೆಹಲಿ-ಹೌರಾ ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಗಂಟೆಗೆ 160 ಕಿಲೋಮೀಟರ್‌ಗಳಿಗೆ ಹೆಚ್ಚಿಸುವ ಪ್ರಯತ್ನಗಳು ಮುಂದುವರಿದಿದೆ.
ಕಳೆದ ತಿಂಗಳು ಜನವರಿ 31 ರವರೆಗೆ ಒಟ್ಟು 82 ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ವೇಗದ ಮತ್ತು ಸುರಕ್ಷಿತ ಹಾಗೂ ಐಶಾರಾಮಿ ಸೇವೆ ನೀಡುತ್ತಿವೆ. ವಿವಿಧ ರಾಜ್ಯಗಳನ್ನು ರೈಲ್ವೆ ಇಲಾಖೆಯು ಬ್ರಾಡ್ ಗೇಜ್ (ಬಿಜಿ) ಎಲೆಕ್ಟ್ರಿಫೈಡ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಅವರು ರೈಲ್ವೆ ಜಾಲದಲ್ಲಿನ ಸುಧಾರಣೆ ಕುರಿತು ವಿವರಿಸಿದರು.
ಚಾಲ್ತಿಯಲ್ಲಿ ಹೊಸ ಯೋಜನೆಗಳ ಪ್ರಕ್ರಿಯೆ
ಇನ್ನೂ ರೈಲು ಸೇವೆಗಳ ನಿಲುಗಡೆ ಮತ್ತು ವಂದೇ ಭಾರತ್ ಸೇರಿದಂತೆ ಹೊಸ ರೈಲು ಸೇವೆಗಳ ಪರಿಚಯ, ಕಾರ್ಯಾಚರಣೆಯ ಕಾರ್ಯಸಾಧ್ಯತೆ, ಸಂಚಾರ ಸಮರ್ಥನೆ, ಸಂಪನ್ಮೂಲ ಲಭ್ಯತೆ ಮುಂತಾದ ಭವಿಷ್ಯದ ಯೋಜನೆಗಳ ಪ್ರಕ್ರಿಯೆಗಳು ರೈಲ್ವೆ ಇಲಾಖೆಯಲ್ಲಿ ವ್ಯಾಪ್ತಿಯಲ್ಲಿ ಮುಂದುವರಿದಿವೆ.
ಒಟ್ಟಾರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಹಳಿಗಳ ಮೇಲೂ ಈ ಭಾರತೀಯ ವಂದೇ ಭಾರತ್ ಮೆಟ್ರೋಗಳು ಓಡಲಿವೆ ಎಂದು ಕೇಂದ್ರ ತಿಳಿಸಿದೆ.












Click it and Unblock the Notifications