Rice Export Ban: ಅಕ್ಕಿಗಾಗಿ ಅಮೆರಿಕಾದಲ್ಲಿ ಮುಂದುವರಿದ ಭಾರತೀಯರ ಪರದಾಟ
ನ್ಯೂಯಾರ್ಕ್, ಜುಲೈ 26: ಭಾರತವು ಬಾಸ್ಮತಿ ಹೊರತುಪಡಿಸಿ ಇನ್ನಿತರ ಅಕ್ಕಿ ರಫ್ತು ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರು ಅಕ್ಕಿಗಾಗಿ ಪರದಾಡುವಂತಾಗಿದೆ. ಅಕ್ಕಿ ಕೊರತೆಯಿಂದಾಗಿ ಅಮೆರಿಕಾದ ಮಳಿಗೆಗಗಲ್ಲಿ ಕುಟುಂಬಕ್ಕೆ ಒಂದು ಬ್ಯಾಗ್ ಅಕ್ಕಿ ಮಾತ್ರ ನೀಡಲಾಗುತ್ತಿದೆ.
ಭಾರತ ಅಕ್ಕಿ ರಫ್ತು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಹಲವಾರು ಡಿಪಾರ್ಟಮೆಂಟಲ್ ಸ್ಟೋರ್ಗಳಲ್ಲಿ ಭಾರತದ ಅಕ್ಕಿ ಸ್ಟಾಕ್ ಖಾಲಿಯಾಗುತ್ತಿದೆ. ಹೀಗಾಗಿ ಅಮೆರಿಕದ ಅನೇಕ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು ಗ್ರಾಹಕರು ಖರೀದಿಸಬಹುದಾದ ಅಕ್ಕಿ ಚೀಲಗಳ ಸಂಖ್ಯೆ ಮಿತಿಗೊಳಿಸುತ್ತಿವೆ.

ಅಮೆರಿಕಾದಲ್ಲಿರುವ ಭಾರತ ಮೂಲದ ಟ್ವಿಟರ್ ಬಳಕೆದಾರರೊಬ್ಬರು ಅಲ್ಲಿ ಅಂಗಡಿಯೊಂದರಲ್ಲಿ ಹಾಕಿರುವ ಬೋರ್ಡ್ನ ಚಿತ್ರ ಹಂಚಿಕೊಂಡಿದ್ದು, ಒಂದು ಕುಟುಂಬಕ್ಕೆ ಕೇವಲ ಒಂದು ಚೀಲ ಅಕ್ಕಿ ಎಂದು ಬೋರ್ಡ್ನಲ್ಲಿ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಅಕ್ಕಿ ಬೆಲೆ ಇಂದು ಹೆಚ್ಚಾಗಿದೆಯೇ ಎಂಬುದನ್ನು ನೋಡಲು ಅಂಗಡಿಗೆ ಹೋಗಿದೆ. ಆದರೆ, ಖರೀದಿಸಬಹುದಾದ ಅಕ್ಕಿಯ ಪ್ರಮಾಣದ ಮೇಲೆ ಮಿತಿ ಹೇರಿರುವುದನ್ನು ನೊಡಿ ಆಘಾತವಾಯಿತು. ತಕ್ಷಣವೇ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಈಗ ಇತರ ದೇಶಗಳು ಸಹ ಅಕ್ಕಿ ರಫ್ತು ನಿಷೇಧಿಸಲು ನೋಡುತ್ತಿವೆ. ಅವು ಅಕ್ಕಿ ಸಂಗ್ರಹ ಮಾಡಿಕೊಳ್ಳುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.
ಹಲವಾರು ಎನ್‌ಆರ್‌ಐಗಳು ಕೂಡ ಅಂಗಡಿಗಳಲ್ಲಿ ಖಾಲಿ ಕಪಾಟಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ವಿಧಿಸಿದ ನಂತರ ಆತುರಾತುರವಾಗಿ ಗಾಬರಿಯಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿ ಖರೀದಿಯಾಗಿದ್ದರಿಂದ ಸ್ಟಾಕ್ಗಳು ಖಾಲಿಯಾಗಿರಬಹುದು. ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಅಕ್ಕಿ ಚೀಲಗಳು ಖಾಲಿಯಾಗಿವೆ. ಇಲ್ಲಿ ಎಲ್ಲ ಅಂಗಡಿಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
#Indians in #US taking home dozens of rice bags fearing shortage, amid ban by Indian govt on exports of non-Basmati rice varieties due to climate induced crop failure this year
— Nabila Jamal (@nabilajamal_) July 24, 2023
India accounts for more than 40% of global rice exports. First signs of global food supply at risk pic.twitter.com/S9aNCBDRFI
ಪ್ರಸಿದ್ಧ ರಿಟೇಲ್ ಮಳಿಗೆ ವಾಲ್‌ಮಾರ್ಟ್‌ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಬಾಸ್ಮತಿ ಅಕ್ಕಿ ಸ್ಟಾಕ್ ಇರುತ್ತಿತ್ತು. ಆದರೆ, ಇಂದು ಕಪಾಟುಗಳು ಖಾಲಿಯಾಗಿವೆ. ಭಾರತವು ಅಕ್ಕಿ ರಫ್ತು ನಿಷೇಧ ಮಾಡಿದ್ದಕ್ಕೂ ಇದಕ್ಕೂ ಸಂಬಂಧ ವಿದೆಯಾ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತಿಲ್ಲ. ಆನ್‌ಲೈನ್ ಮಾರ್ಕೆಟ್ಗಳಲ್ಲಿ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ.
ಎಲ್ಲ ಅಂಗಡಿಗಳಲ್ಲಿ ಭಾರತೀಯ ಅಕ್ಕಿ ಖಾಲಿಯಾಗುತ್ತಿದ್ದು, ಭಾರತವು ಬಾಸ್ಮತಿ ಅಲ್ಲದ ಅಕ್ಕಿ ರಫ್ತನ್ನು ನಿರ್ಬಂಧಿಸಿರುವ ಕಾರಣ ಪ್ರತಿ ಎನ್‌ಆರ್‌ಐ ಕುಟುಂಬವು 10 ರಿಂದ 15 ಚೀಲ ಅಕ್ಕಿ ಖರೀದಿಸಿದೆ. ಹೆಚ್ಚು ಶ್ರೀಮಂತ ಎನ್‌ಆರ್‌ಐಗಳು ಪ್ರತಿ ಕುಟುಂಬಕ್ಕೆ 100 ರಿಂದ 200 ಕೆಜಿ ಬಾಸ್ಮತಿ ಅಕ್ಕಿ ಸಂಗ್ರಹಿಸಿದ್ದಾರೆ. ಕೆಲವರು ಈಗ ಅದನ್ನು ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಒಬ್ಬ ಟ್ವಿಟರ್ ಬಳಕೆದಾರರು ತಿಳಿಸಿದ್ದಾರೆ.
ಈ ಬಗ್ಗೆ IMF ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ನಿರ್ದೇಶಕ, ಪಿಯರೆ-ಒಲಿವಿಯರ್ ಗೌರಿಂಚಾಸ್, ಕೆಲವು ವಿಧದ ಅಕ್ಕಿಗಳ ರಫ್ತುಗಳ ಮೇಲೆ ಭಾರತವು ವಿಧಿಸಿರುವ ನಿರ್ಬಂಧಗಳು ಪ್ರಪಂಚದ ಉಳಿದ ಭಾಗಗಳಲ್ಲಿ ಆಹಾರದ ಬೆಲೆಗಳ ಮೇಲೆ ಚಂಚಲತೆಯನ್ನು ಉಲ್ಬಣಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಈ ರೀತಿಯ ರಫ್ತು ನಿರ್ಬಂಧಗಳನ್ನು ತೆಗೆದುಹಾಕಲು ನಾವು ಖಂಡಿತವಾಗಿಯೂ ಪ್ರೋತ್ಸಾಹಿಸುತ್ತೇವೆ. ಏಕೆಂದರೆ ಅವು ಜಾಗತಿಕವಾಗಿ ಹಾನಿಕಾರಕವಾಗಬಹುದು ಎಂದು ಗೌರಿಂಚಾಸ್ ವಿಶ್ವ ಆರ್ಥಿಕ ದೃಷ್ಟಿಕೋನವನ್ನು ಪ್ರಾರಂಭಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications